Advertisement
ಸಿಎಂ ಸ್ಥಾನಕ್ಕೇರಿದ ಎರಡೇ ದಿನದಲ್ಲಿ ಯೋಗಿ ಆದಿತ್ಯನಾಥ್ ಮಹಿಳೆಯರ ಸುರಕ್ಷತೆಗೆ ರೂಪಿಸಿದ ಹೊಸ ತಂತ್ರ ಇದಾಗಿದ್ದರೂ, ರೋಮಿಯೊ ಸ್ಕ್ವಾಡ್ ಟೀಕೆಗೆ ಗುರಿಯಾಗಿದೆ. ಈ ಪೊಲೀಸ್ ಗಿರಿಯಿಂದ ಮುಗ್ಧ ಯುವಕರಿಗೆ ಸುಖಾಸುಮ್ಮನೆ ಕಿರುಕುಳ ನೀಡಲಾಗುತ್ತಿದ್ದು, ಎಲ್ಲೆಡೆ ಆಕ್ಷೇಪಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ, “ನಾವು ನೈತಿಕ ಪೊಲೀಸ್ ಗಿರಿ ಮಾಡುತ್ತಿಲ್ಲ, ಹೆಣ್ಮಕ್ಕಳಿಗೆ ರಕ್ಷಣೆ ನೀಡ್ತಿದ್ದೇವೆ’ ಎಂದು ಪೊಲೀಸ್ ಇಲಾಖೆ ಟ್ವಿಟ್ಟರಿನಲ್ಲಿ ಸಮರ್ಥನೆಗೆ ಇಳಿದಿದೆ.
ಗೃಹ, ಗಣಿ ಖಾತೆ
ಸಿಎಂ ಆಗಿ ಮೂರನೇ ದಿನದಲ್ಲಿ ಖಾತೆಗಳನ್ನು ಹಂಚಿರುವ ಯೋಗಿ ಆದಿತ್ಯನಾಥ್, ಗೃಹಖಾತೆ ಮತ್ತು ಗಣಿ ಇಲಾಖೆಯನ್ನು ತಮ್ಮಲ್ಲೇ ಇಟ್ಟುಕೊಂಡಿದ್ದಾರೆ. 6ನೇ ಬಾರಿಗೆ ಶಾಸಕರಾಗಿರುವ ರಾಜೇಶ್ ಅಗರ್ವಾಲ್‌ಗೆ ವಿತ್ತ ಖಾತೆ, ಡಿಸಿಎಂ ಕೇಶವ ಪ್ರಸಾದ್ ಮೌರ್ಯಗೆ ಲೋಕೋಪಯೋಗಿ, ಆಹಾರ ಸಂಸ್ಕರಣೆ, ಮನರಂಜನಾ ತೆರಿಗೆ ಖಾತೆ ನೀಡಲಾಗಿದೆ. ಮತ್ತೂಬ್ಬ ಡಿಸಿಎಂ ದಿನೇಶ್ ಶರ್ಮಾ, ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಐಟಿ ಖಾತೆ ನಿರ್ವಹಿಸಲಿದ್ದಾರೆ. ಅಮಿತ್ ಶಾ ನಿರ್ದೇಶನದಂತೆ ಯೋಗಿ ಸರ್ಕಾರ 23 ಕ್ಯಾಬಿನೆಟ್ ಸಚಿವರನ್ನು ಹೊಂದಿದೆ.
Related Articles
ಗುಲಾಬಿ ಬಣ್ಣದ ಸೀರೆ ಉಟ್ಟು ಬುಂಧೇಲ್‌ಖಂಡದ ಸಂಪತ್‌ಪಾಲ್ ದೇವಿ ಎಂಬಾಕೆ ಕೆಲ ವರ್ಷಗಳಿಂದ ಇಂಥದ್ದೇ ದಳ ರಚಿಸಿಕೊಂಡಿದ್ದಾರೆ. ಸ್ತ್ರೀಯರನ್ನು ಕಂಡು ಅಸಭ್ಯವಾಗಿ ವರ್ತಿ ಸಿದರೆ, ಅವರನ್ನು ಅಲ್ಲಿಯೇ ಥಳಿಸಿ, ಪೊಲೀಸರಿಗೆ ಒಪ್ಪಿಸು ತ್ತಿದ್ದರು. ಆ್ಯಂಟಿ ರೊಮಿಯೋ ಸ್ಕ್ವಾಡ್‌ಗೆ ಸಂಪತ್ ಪಾಲ್ ಸ್ಫೂರ್ತಿ ಎನ್ನಲಾಗಿದೆ. ಮಾಧುರಿ ದಿಕ್ಷಿತ್ ನಟನೆಯಲ್ಲಿ “ಗುಲಾಬ್ ಗ್ಯಾಂಗ್’ ಸಿನಿಮಾವೂ ಬಂದಿತ್ತು.
Advertisement
ಸಿಎಂ ಮನೆಗೆ ಗೋವುಗಳೂ ಶಿಫ್ಟ್!ಗೋವು ಎಂದರೆ ಯೋಗಿ ಅವರಿಗೆ ಎಲ್ಲಿಲ್ಲದ ಪ್ರೀತಿ. ಗೋರಖ್‌ಪುರದ “ಗುರುಸೇವಾ’ ಆಶ್ರಮದಲ್ಲಿ ಇದ್ದಂಥ ಅವರ ನೆಚ್ಚಿನ ಗೋವುಗಳನ್ನು ಲಕ್ನೋದ ಮುಖ್ಯಮಂತ್ರಿ ನಿವಾಸಕ್ಕೆ ಸ್ಥಳಾಂತರಿಸಲು ಆದಿತ್ಯನಾಥ್ ಮುಂದಾಗಿದ್ದಾರೆ. ಗೋರಖ್‌ನಾಥ ದೇಗುಲದ ಗುರುಸೇವಾದಲ್ಲಿ ಒಟ್ಟು 460 ಗೋವುಗಳಿದ್ದವು. ಗುಜರಾತಿ, ಸೆಹ್ವಾಲ್, ದೇಸಿ, ಗಿರ್ ಜಾತಿಯ ಹಸುಗಳಿಗೆ ಸಿಎಂ ನಿವಾಸದಲ್ಲಿ ಆಶ್ರಯ ದೊರಕಲಿದೆ. ಈ ಗೋವುಗಳೊಂದಿಗೆ ಆದಿತ್ಯನಾಥ್ ನಿತ್ಯ 1 ತಾಸು ಕಳೆಯುತ್ತಿದ್ದರು. ಅಕ್ರಮ ಕಸಾಯಿಖಾನೆ ಮುಚ್ಚಲು ಸಿದ್ಧತೆ
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಂತೆ ಉ.ಪ್ರ.ದಲ್ಲಿ ಅಕ್ರಮ ಕಸಾಯಿ ಖಾನೆಗಳನ್ನು ಮುಚ್ಚಲು ನಿರ್ಧರಿಸಿದೆ. ಕಾಯ್ದೆ ಜಾರಿಗೂ ಮುನ್ನ ಈ ಸಂಬಂಧ ಸಿದ್ಧತೆ ನಡೆಸಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಆದಿತ್ಯನಾಥ್ ಸೂಚನೆ ರವಾನಿಸಿದ್ದಾರೆ. ಅಲ್ಲದೆ, ಅಕ್ರಮ ಗೋವು ಸಾಗಾಟಕ್ಕೂ ಬ್ರೇಕ್ ಹಾಕಲು ಆದೇಶ ಹೊರಡಿಸಿದ್ದಾರೆ. ಗುಟ್ಕಾ, ಚೂÂಯಿಂಗ್ ಗಮ್ ಬ್ಯಾನ್
ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆ, ಶಾಲಾ- ಕಾಲೇಜುಗಳಲ್ಲಿ ತಂಬಾಕು ಉತ್ಪನ್ನಗಳನ್ನು ನಿಷೇಧಿಸಿ, ಯೋಗಿ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ, ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯದ ಅವಧಿಯಲ್ಲೂ ತಂಬಾಕು ಉತ್ಪನ್ನಗಳನ್ನು ಬಳಸುವಂತಿಲ್ಲ. ಚೂÂಯಿಂಗ್ ಗಮ್ ಅನ್ನೂ ಜಗಿಯುವಂತಿಲ್ಲ! ಬುಧವಾರ ಸರ್ಕಾರ ಕಚೇರಿಗಳಿಗೆ ಭೇಟಿ ನೀಡಿದಾಗ, ಗೋಡೆ ಮೇಲಿನ ಅಡಿಕೆ ಕಲೆಗಳನ್ನು ಗಮನಿಸಿ ತಂಬಾಕು ಉತ್ಪನ್ನಗಳ ನಿಷೇಧಕ್ಕೆ ಸಿಎಂ ಮುಂದಾಗಿದ್ದು, ಸ್ವತ್ಛಭಾರತ್ ಅನುಷ್ಠಾನಕ್ಕೆ ಸೂಚಿಸಿದ್ದಾರೆ.