Advertisement

ಯುವ ಮತದಾರರ ಸಮಾವೇಶ: ಡಿ. 25ರಂದು ಉಡುಪಿಗೆ ಯೋಗಿ ಆದಿತ್ಯನಾಥ್‌

12:09 AM Dec 07, 2022 | Team Udayavani |

ಬೆಳ್ತಂಗಡಿ : ಉಡುಪಿಯಲ್ಲಿ ಡಿ. 25ರಂದು ಕರ್ನಾಟಕ ಯುವ ಮತದಾರರ ಸಮಾವೇಶ ನಡೆಯಲಿದ್ದು, ಅದಕ್ಕೆ ಉತ್ತರಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್‌ ಆಗಮಿಸಲಿದ್ದಾರೆ. ಎಲ್ಲ ಹೊಸ ಮತದಾರರು ಸಮಾವೇಶದಲ್ಲಿ ಭಾಗ ವಹಿಸಿ ಬಿಜೆಪಿಯೊಂದಿಗಿದ್ದೇವೆ ಎಂಬ ಸಂದೇಶವನ್ನು ನೀಡ ಬೇಕು ಎಂದು ಸಚಿವ ಸುನಿಲ್‌ ಕುಮಾರ್‌ ಹೇಳಿದರು.

Advertisement

ಬೆಳ್ತಂಗಡಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆ ಹಾಗೂ ಪಕ್ಷಕ್ಕೆ ಸೇರ್ಪಡೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಉಳ್ಳಾಲವೂ ಸೇರಿದಂತೆ ಈ ವರ್ಷ ದ.ಕ. ಜಿಲ್ಲೆ ಮತ್ತು ಉಡುಪಿಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಬೇಕೆಂದು ವಿಶೇಷ ತಂತ್ರಗಾರಿಕೆ ರೂಪಿಸಿಕೊಂಡು ಹೊರಟಿದ್ದೇವೆ ಎಂದರು.

ಮುಂದಿನ ಮುಖ್ಯಮಂತ್ರಿ ಎಂದು ತಾನೇ ಎಂದು ಘೋಷಿಸಿಕೊಂಡಿರುವ ಸಿದ್ದರಾಮಯ್ಯ ಅವರಿಗೆ ತಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬುದೇ ಇನ್ನೂ ತಿಳಿದಿಲ್ಲ. ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಗೆಲುವಿನ ಕನಸು ಕಾಣುತ್ತಿದೆ. ಎಂದು ಸುನಿಲ್‌ ಲೇವಡಿ ಮಾಡಿದರು.

ರಾಹುಲ್‌ ಹೋದಲ್ಲೆಲ್ಲ ಕಾಂಗ್ರೆಸಿಗರು ಬಿಜೆಪಿಯತ್ತ !
ರಾಹುಲ್‌ ಗಾಂಧಿ ಎಲ್ಲೆಲ್ಲಿ ಕಾಲಿಡುತ್ತಾರೊ ಆ ಊರುಗಳೆಲ್ಲ ಕಾಂಗ್ರೆಸ್‌ ಮುಕ್ತವಾಗುತ್ತವೆ ಎಂಬ ಮಾತು ಇಂದು ನಿಜವಾಗಿದೆ. ರಾಹುಲ್‌ ಪಾದಯಾತ್ರೆ ಕರ್ನಾಟಕವನ್ನು ದಾಟಿ ಆಂಧ್ರಪ್ರದೇಶ, ತೆಲಂಗಾಣ ಕಡೆ ಹೋಗುತ್ತಿರಬೇಕಾದರೆ ರಾಜ್ಯದ ಹಲವು ಜನ ಇಂದು ಕಾಂಗ್ರೆಸ್‌ ಬಿಟ್ಟು ಬಿಜೆಪಿ ಕಡೆಗೆ ಹೆಜ್ಜೆ ಇಡುತ್ತಿದ್ದಾರೆ. ಚಾಮರಾಜ ನಗರ ಮತ್ತು ವಿಯಪುರ ಪುರಸಭೆ ಚುನಾವಣೆಗಳನ್ನು ಗೆದ್ದಾಗಲೇ ನಮಗೆ ಸೂಚನೆ ಸಿಕ್ಕಿತ್ತು. ಅತ್ತ ಗುಜರಾತ್‌ ಚುನಾವಣೆ ಇಡೀ ದೇಶದ ಗಮನವನ್ನು ಸೆಳೆಯುತ್ತಿದೆ. ಸಮೀಕ್ಷೆಗಳ ಪ್ರಕಾರ ಗುಜರಾತ್‌ನಲ್ಲಿ 7ನೇ ಬಾರಿಗೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ. ಹಿಮಾಚಲವನ್ನು ಬಿಜೆಪಿ ಗೆಲ್ಲಲಿದೆ. ಇದು ರಾಜ್ಯ ರಾಜಕಾರಣದ ಮೇಲೆ ಬಹುದೊಡ್ಡ ಪರಿಣಾಮ ಬೀರಲಿದೆ ಎಂದರು.

ಇದನ್ನೂ ಓದಿ: ಸಣ್ಣ ಅಪಘಾತಕ್ಕೆ ಹೆದ್ದಾರಿಯಲ್ಲೇ ಜಗಳ: ಮೆಲ್ಕಾರಿನಲ್ಲಿ ತಾಸು ಕಾಲ ಟ್ರಾಫಿಕ್‌ ಜಾಮ್‌

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next