ಗಂಗಾವತಿ: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಜಯಂತಿಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಸರಕಾರ ಯೋಗವನ್ನು ಯುವ ಜನರಲ್ಲಿ ಜನಪ್ರಿಯಗೊಳಿಸುವ ಸಂಕಲ್ಪ ಮಾಡಲಾಗಿದೆ. ಪ್ರಧಾನಿ ಮೋದಿ ಸನಾತನ ಭಾರತದ ಯೋಗಕ್ಕೆ ವಿಶ್ವ ಮನ್ನಣೆ ತಂದಿದ್ದಾರೆಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ರವಿವಾರ ನಗರದ ಲಯನ್ಸ್ ಕ್ಲಬ್ ಆವರಣದಲ್ಲಿ ಜಿಲ್ಲಾಡಳಿತ ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆ ಕೊಪ್ಪಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆಯುಷ್ ಇಲಾಖೆ ಮತ್ತು ಸರ್ವ ಯೋಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ರಾಷ್ಟ್ರೀಯ ಯುವ ಸಪ್ತಾಹ ಅಂಗವಾಗಿ ಯೋಗಥಾನ್-2023 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ಕುರಿತು ಯೋಗದ ಮಹತ್ವ ಹಾಗೂ ನಮ್ಮ ದೇಹವನ್ನು ಸದೃಡವಾಗಿಡಲು ನಾವು ದೈನಂದಿನ ಬದುಕಿನಲ್ಲಿ ಯೋಗ ಅಳವಡಿಸಿಕೊಳ್ಳವುದು ಅತ್ಯವಶ್ಯಕ ಎಂದರು.
ಈ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಸೋಮಶೇಖರ ಗೌಡ, ಪಂತಂಜಲಿ ಸಂಸ್ಥೆಯವರು ಹಾಗೂ ಸರ್ವ ಯೋಗ ಸಂಸ್ಥೆಗಳ ಶಿಕ್ಷಕರು ಮತ್ತು ಯೋಗ ಶಿಬಿರಾರ್ಥಿಗಳಿದ್ದರು.