ಯೋಗಾಭ್ಯಾಸಗಳನ್ನು ಅಷ್ಟಾಂಗಗಳೆಂದು ಕರೆದಿ ದ್ದಾರೆ. ಆಸನ (ಶಾರೀರಿಕ ಅಭ್ಯಾಸ), ಪ್ರಾಣಾಯಾಮ (ಉಸಿರಾಟದ ಕ್ರಮಗಳು), ಧ್ಯಾನ (ಮನಸ್ಸಿನ ಏಕಾಗ್ರತೆಯ ಸ್ಥಿತಿ) ಪ್ರಮುಖ. ಯೋಗ ವಿಜ್ಞಾನದ ನಿಯಮಗಳಿಗನುಸಾರವಾಗಿ ಅಭ್ಯಾಸಿದಾಗ ಸರ್ವತೋ ಮುಖವಾದ ಪ್ರಯೋಜನಗಳನ್ನು ಪಡೆಯಬಹುದು.
Advertisement
ಮಧ್ಯ ವಯಸ್ಸಿನ ಮಹಿಳೆಯರಲ್ಲಿ ಬೊಜ್ಜು, ಋತು ಚಕ್ರ ವ್ಯತ್ಯಯ, ಋತುಬಂಧದ ಲಕ್ಷಣಗಳು, ಬೆನ್ನು ನೋವು, ಮಂಡಿ ನೋವು, ಮಾನಸಿಕ ಉದ್ವಿಗ್ನತೆ, ಮಾನಸಿಕ ಖನ್ನತೆ ಇವೆಲ್ಲವೂ ಸಾಮಾನ್ಯವಾಗಿ ಕಂಡು ಬರುವ ತೊಂದರೆಗಳು. ಆನುವಂಶೀಯತೆ, ದೈಹಿಕ ವ್ಯಾಯಾಮದ ಕೊರತೆ, ಸರಿಯಲ್ಲದ ಆಹಾರಕ್ರಮ, ಅಸಮತೋಲನ ಜೀವನ ಶೈಲಿ, ಮಾನಸಿಕ ಒತ್ತಡ, ಹಾರ್ಮೋನುಗಳ ಅಸಮತೋಲನ ಪ್ರಮುಖ ಕಾರಣಗಳಾಗಿರುತ್ತವೆ. ಈ ಎಲ್ಲ ತೊಂದರೆಗಳನ್ನು ಕಡಿಮೆಗೊಳಿಸಲು ಮತ್ತು ನಿವಾರಿ ಸಲು ಸಾತ್ತಿ$Ìಕ ಆಹಾರ ಕ್ರಮ ಮತ್ತು ಸಕಾರಾತ್ಮಕ ಜೀವನ ಶೈಲಿಯ ಜತೆಗೆ ಯೋಗಾಭ್ಯಾಸ ಮಾಡುವುದು ಉತ್ತಮ.
ವಜ್ರಾಸನ, ಸುಪ್ತವಜ್ರಾಸನ, ತಾಡಾಸನ, ಕಟಿಪರಿವರ್ತ ನಾಸನ, ಅರ್ಧಚಂದ್ರಾಸನ, ತ್ರಿಕೋನಾಸನ, ಪಾರ್ಶ್ವ ಕೋನಾಸನ, ಪ್ರಸಾರಿತ ಪಾದೋತ್ಥಾನಾಸನ, ಪಶ್ಚಿಮ ತಾನಾಸನ, ಪೂರ್ವತಾನಾಸನ, ಜಾನುಶೀರ್ಷಾಸನ, ಉಪವಿಷ್ಟಕೋನಾಸನ, ಬದ್ಧಕೋನಾಸನ, ಪವನಮು ಕ್ತಾಸನ, ಭುಜಂಗಾಸನ, ಶಲಭಾಸನ, ಧನುರಾಸನ, ಪರ್ಯಂಕಾಸನ, ವಕ್ರಾಸನ, ಮಾರ್ಜಾಲಾಸನ, ಜಠರ ಪರಿವರ್ತನಾಸನ ಮುಂತಾದ ಆಸನಗಳನ್ನು ಮಹಿಳೆ ಯರು ಅವರವರ ಶಾರೀರಿಕ ಇತಿಮಿತಿಗಳು ಮತ್ತು ನೋವನ್ನು ಗಮನಿಸಿಕೊಂಡು ಅಭ್ಯಾಸ ಮಾಡಬಹುದು. ಮಾನಸಿಕ ವಿಶ್ರಾಂತಿ
ಜೀರ್ಣಕ್ರಿಯೆ, ಅಂಗಾಂಗಗಳ ಆರೋಗ್ಯ, ಮಂಡಿಕೀಲುಗಳ ಕ್ಷಮತೆ, ಹಾರ್ಮೋನುಗಳ ಸ್ರಾವ, ಗರ್ಭಕೋಶದ ಆರೋಗ್ಯ ಉತ್ತಮಗೊಂಡು ಶರೀರವು ಸದೃಢವಾಗುತ್ತದೆ. ಅಧಿಕ ತೂಕ, ಬೊಜ್ಜು ನಿವಾರಣೆ ಯಾಗುತ್ತದೆ. ಮಕರಾಸನ, ಶವಾಸನಗಳ ಅಭ್ಯಾಸದಿಂದ ಶರೀರದಲ್ಲಿ ಸರಿಯಾದ ರಕ್ತ ಪರಿಚಲನೆಯಾಗಿ, ಶಾರೀರಿಕ ಮತ್ತು ಮಾನಸಿಕ ವಿಶ್ರಾಂತಿ ದೊರೆಯುತ್ತದೆ.
Related Articles
ಅನುಲೋಮ ವಿಲೋಮ, ನಾಡೀ ಶುದ್ಧಿ, ಸೂರ್ಯ ಭೇದನ, ಶೀತಲೀ, ಉಜ್ಜಾಯೀ, ಸೀತ್ಕಾರೀ, ಭ್ರಾಮರೀ, ಭಸಿŒಕಾ ಮುಂತಾದ ಪ್ರಾಣಾಯಾಮಗಳನ್ನು ಅವರವರ ಅಗತ್ಯಕ್ಕೆ ಅನುಸಾರವಾಗಿ ಅಭ್ಯಾಸ ಮಾಡು ವುದರಿಂದ ಉಸಿರಾಟ ಕ್ರಮ ಸರಿಯಾಗಿ ಶರೀರದಲ್ಲಿ ತ್ರಿದೋಷಗಳ ಮತ್ತು ಪ್ರಾಣಶಕ್ತಿಯ ಕೆಲಸಗಳು ಉತ್ತಮವಾಗುತ್ತವೆೆ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದರೊಂದಿಗೆ ಚಿತ್ತವೃತ್ತಿಗಳು ಕಡಿಮೆ ಯಾಗುತ್ತವೆ. ಪ್ರಣವ ಧ್ಯಾನ, ಸೋಹಂ ಧ್ಯಾನ, ಜ್ಯೋತಿದ್ಯಾನ ಅಭ್ಯಾಸದಿಂದ ನರಮಂಡಲದ ಮೇಲೆ ಪರಿಣಾಮವಾಗಿ ಮಾನಸಿಕ ಉದ್ವಿಗ್ನತೆ, ಖನ್ನತೆ, ಮಾನಸಿಕ ಒತ್ತಡಗಳನ್ನು ಕಡಿಮೆಗೊಳಿಸಬಹುದು.
ಒಂದು ತಾಸು ಮೀಸಲಿಡಿ
ಮಹಿಳೆಯರು ತಮ್ಮ ದೈನಂದಿನ ಜೀವನದಲ್ಲಿ ಒಂದು ತಾಸು ಕಾಲ ಅವರವರ ಶರೀರ ಪ್ರಕೃತಿಗೆ ಅನುಗುಣವಾಗಿ ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಪಡೆಯಬಹುದು. ಇದರಿಂದ ಮಧುಮೇಹ, ರಕ್ತದೊತ್ತಡ, ಹೃದಯದ ರೋಗಗಳು ಮತ್ತು ಅನೇಕ ಮನೋದೈಹಿಕ ಹಾಗೂ ಮಾನಸಿಕ ರೋಗಗಳು ಬರದಂತೆ ತಡೆಗಟ್ಟಬಹುದು.
Advertisement
ಪಿಸಿಒಡಿ ಸಮಸ್ಯೆಗೆ ಮದ್ದುಇತ್ತೀಚಿನ ದಿನಗಳಲ್ಲಿ ಪಿಸಿಒಡಿ ಸಮಸ್ಯೆಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಳಲುತ್ತಿದ್ದಾರೆ. ವಿಶ್ವದಾದ್ಯಂತ ಮಹಿಳೆಯರು ಈ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ಪಿಸಿಒಡಿ (ಪೊಲಿ ಕಿಸ್ಟಿಕ್ ಒವರಿಯನ್ ಡಿಸೀಸಸ್) ಇದು ಸಂತಾನೋತ್ಪತ್ತಿಗೆ ಸಂಬಂಧಿತ ಸಮಸ್ಯೆಯಾಗಿದೆ. ಮಿಲನದ ಸಂದರ್ಭದಲ್ಲಿ ಹೆಣ್ಣಿನ ಅಂಡಾಶಯದಿಂದ ಹೆಚ್ಚಿನ ಪ್ರಮಾಣದ ಮೊಟ್ಟೆಗಳು ಉತ್ಪತ್ತಿಯಾಗದೇ ಇರುವುದಕ್ಕೆ ಪಿಸಿಒಡಿ ಎಂದು ಕರೆಯಲಾಗುತ್ತದೆ. ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಕಾಲೇಜು ಹುಡುಗಿಯರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುವುದಿದೆ. ಇದು ಹಲವು ಕಾರಣಕ್ಕೆ ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆ ಇದ್ದು ಸಂತಾನ ವೃದ್ಧಿಯಾಗದೇ ಇದ್ದರೆ ಯೋಗದ ಮೂಲಕ ಅದನ್ನು ಸರಿಪಡಿಸಬಹುದಾಗಿದೆ. ಥೈರಾಯ್ಡ ಸಮಸ್ಯೆಗಳು ಇದ್ದರೂ ಮಕ್ಕಳಾಗುವ ಸಾಧ್ಯತೆ ಕಡಿಮೆ ಇದೆ. ಇಂತಹ ಸಮಸ್ಯೆಯಿಂದ ಬಳಸಲುತ್ತಿರುವ ಮಹಿಳೆಯರು ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ರೂಢಿಸಿಕೊಂಡರೆ ಈ ಸಮಸ್ಯೆಯಿಂದ ಹೊರಬರಬಹುದು. ಸಾಲಂಬ ಸರ್ವಾಂಗ ಆಸನ, ಭುಜಂಗಾಸನ, ಧನುರಾಸನ, ಪಶ್ಚಿಮ ಉತ್ಥಾನ ಆಸನ, ಅರ್ಧ ಸಾಲಂಭ ಆಸನ ಮೊದಲಾದ ಆಸನಗಳನ್ನು ಪ್ರಯತ್ನಿಸಬಹುದು. -ಡಾ. ಅನ್ನಪೂರ್ಣಾ ಕೆ. ಆಚಾರ್ಯ,
ಎಚ್‌ಒಡಿ, ಯೋಗ ಚಿಕಿತ್ಸಾ ವಿಭಾಗ, ಕೆಎಂಸಿ