Advertisement
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯವೆಂದರೆ ಶಾರೀರಿಕ, ಮಾನಸಿಕ, ಸಾಮಾಜಿಕ, ಅಧ್ಯಾತ್ಮಿಕವಾಗಿ ಸಂಪೂರ್ಣ ಆರೋಗ್ಯವಾಗಿರುವುದು. ಅತ್ಯುನ್ನತವಾದ ಆಧ್ಯಾತ್ಮ ಸಾಧನೆ ಮಾಡಬೇಕಾದರೂ ಆರೋಗ್ಯ ಅನಿವಾರ್ಯ. ಈ ರೀತಿಯಾಗಿ ಯೋಗದಲ್ಲಿ ಬೆಳೆದು ಬಂದ ಆಸನ, ಪ್ರಾಣಾಯಾಮ, ಕ್ರಿಯೆ ಬಂಧ ಮುದ್ರೆ ಮುಂತಾದವುಗಳು ಆರೋಗ್ಯ ರಕ್ಷಣೆಯಿಂದ ಅತ್ಯುನ್ನತವಾದ ಸಾಧನೆಗಳನ್ನು ಮಾಡಲು ಸಹಾಯವಾಗುತ್ತದೆ. ಅಲ್ಲದೆ ಆರೋಗ್ಯ ವರ್ಧನೆ ಮತ್ತು ರೋಗ ನಿವಾರಣೆ ಮಾಡಲೂ ಕಾರಣೀಭೂತವಾಗುತ್ತದೆ. ಇಂದಿನ ಆಧುನಿಕ ಯುಗದ ನಾಗಾಲೋಟದಲ್ಲಿ ಬಹಳಷ್ಟು ಜನರು ಮಾನಸಿಕ ಒತ್ತಡ ಮತ್ತು ಜೀವನ ಶೈಲಿಯಿಂದ ಹಲವಾರು ಕಾಯಿಲೆಗಳಿಗೆ ಮುಖ್ಯವಾಗಿ ಮಧುಮೇಹ ಮತ್ತು ರಕ್ತದೊತ್ತಡಕ್ಕೆ ಒಳಗಾಗುತ್ತಾರೆ. ಅನೇಕ ಜನರಲ್ಲಿ ಈ ಎರಡು ರೋಗಗಳು ಒಟ್ಟಾಗಿ ಇರುತ್ತದೆ ಎಂದರೆ ತಪ್ಪೇನಿಲ್ಲ.
1. ಕ್ರಿಯೆ: ವಮನ ಧೌತಿ, ತ್ರಾಟಕ, ಜಲನೇತಿ
2. ಆಸನ: ಸೂರ್ಯನಮಸ್ಕಾರ, ತಾಡಾಸನ, ಅರ್ಧಕಟಿ ಚಕ್ರಾಸನ, ತ್ರಿಕೋನಾಸನ, ಪರಿವೃತ್ತ ತಾಡಾಸನ, ವಜ್ರಾಸನ, ಪಶ್ವಿಮತಾಸನ, ಉಷ್ಟ್ರಾಸನ, ಅರ್ಧಮತ್ಸೇಂದ್ರಾಸನ, ಜಾನುಶೀರ್ಷಾಸನ, ಭುಜಂಗಾಸನ, ಶಲಭಾಸನ, ಧನುರಾಸನ, ಪವನಮುಕ್ತಾಸನ, ಸರ್ವಾಂಗಾಸನ ,ಶವಾಸನ.
3. ಪ್ರಾಣಾಯಾಮ: ನಾಡಿಶೋಧನ ಶೀತಲೀ, ಉಜ್ಞಾಯೀ ಭ್ರಾಮರಿ
4. ಬಂಧ ಮುದ್ರಾ: ಉಡ್ಡಿಯಾನ ಬಂಧ ಮಹಾಮುದ್ರ, ತಾಡಗಿ ಮುದ್ರ , ವಿಪರೀತಕರಣೀ
5. ಧ್ಯಾನ: ಮೂರ್ತಿ ಧ್ಯಾನ, ಜ್ಯೋತಿಧ್ಯಾನ, ಶಬ್ಧಧ್ಯಾನ, ಸೂಕ್ಷ್ಮಧ್ಯಾನ, ಮುಂತಾದ ಧ್ಯಾನಗಳನ್ನು ಅಭ್ಯಾಸ ಮಾಡುವುದರಿಂದ ದೇಹದ ನರವ್ಯವಸ್ಥೆಯ ಮೇಲೆ ಅನುಕೂಲ ಪರಿಣಾಮ ಬೀರುತ್ತದೆ.
ಈ ಎಲ್ಲ ದೇಹದಲ್ಲಿ ಉಂಟಾಗುವ ಬದಲಾವಣೆಗಳು ಮಧುಮೇಹ ಮತ್ತು ರಕ್ತದೊತ್ತಡ ರೋಗ ನಿಯಂತ್ರಿಸಲು ಗಣನೀಯ ಪರಿಣಾಮವನ್ನು ನೀಡುತ್ತದೆ. ಡಾ| ಕೃಷ್ಣ ರಾಘವ ಹೆಬ್ಟಾರ್, ಎಂ.ಡಿ.(ಆಯು), ಎಂ.ಎಸ್ಸಿ(ಯೋಗ)ಆಯುರ್ವೇದ ವಿಭಾಗ, ಸಿಐಎಂಆರ್ ಮಾಹೆ.