Advertisement

ಜಲಯೋಗ ಸಾಧಕ ಅಶೋಕ ಶಿಗ್ಗಾಂವಿ

03:38 PM Jun 21, 2022 | Team Udayavani |

ಗೋಕಾಕ: ನೆಲದ ಮೇಲೆಯೇ ಯೋಗಾಸನ ಸರಿಯಾಗಿ ಮಾಡುವುದು ಅನೇಕರಿಗೆ ಕಷ್ಟ. ಅಂತಹದ್ದರಲ್ಲಿ ನೀರಿನ ಮೇಲೆ ಯೋಗಾಸನ ಮಾಡಬಹುದೇ? ಹೌದು, ಇಲ್ಲಿಯ ಅಶೋಕ ಮಲ್ಲಪ್ಪ ಶಿಗ್ಗಾಂವಿ ಅಂತಹ ಸಾಧನೆ ಮಾಡಿ ಜಲಯೋಗಿಯಾಗಿದ್ದಾರೆ. ನೀರಿನಲ್ಲಿ ಸಲೀಸಾಗಿ 50ಕ್ಕೂ ಹೆಚ್ಚು ಆಸನ ಮಾಡುವುದನ್ನು ಅವರು ರೂಢಿಸಿಕೊಂಡಿದ್ದಾರೆ.

Advertisement

ತಾಲೂಕಿನ ಮದವಾಲ ಗ್ರಾಮದ ಅಶೋಕ ಶಿಗ್ಗಾಂವಿ ಹುಟ್ಟು ವಿಕಲಚೇತನರಾಗಿದ್ದರು ಸಹ ಚಿಕ್ಕಂದಿನಿಂದನಲೇ ತಂದೆಯ ಸಹಾಯದೊಂದಿಗೆ ಯೋಗಾಸನದ ರೂಢಿ ಬೆಳೆಸಿಕೊಂಡಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಅಶೋಕ ಅವರ ತಂದೆ ಊರಿನ ಕೆರೆಯಲ್ಲಿ ಮಗನಿಗೆ ಯೋಗಾಭ್ಯಾಸ ಮಾಡಿದ್ದಾರೆ. ನೀರಿನ ಮೇಲೆ ತಂದೆ ಮಾಡುತ್ತಿದ್ದ ವಿವಿಧ ಆಸನಗಳ ಭಂಗಿಗಳನ್ನು ನೋಡಿ ಈ ಕಲೆ ರೂಢಿಸಿಕೊಂಡೆ ಎನ್ನುತ್ತಾರೆ ಅಶೋಕ.

35 ವರ್ಷಗಳಿಂದ ಪ್ರತಿನಿತ್ಯ ಯೋಗ ರೂಢಿಸಿಕೊಂಡು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿರುವ ಅಶೋಕ ಅವರು ಎರಡು ಎಕರೆ ಭೂಮಿಯಲ್ಲಿ ಮಳೆಯಾಶ್ರಿತ ಬೆಳೆ ಬೆಳೆಯುವ ಕೃಷಿಕರಾಗಿದ್ದಾರೆ.

ಯೋಗದಿಂದ ನೆನಪು ಶಕ್ತಿ ಹೆಚ್ಚುವುದಲ್ಲದೇ, ತಾಳ್ಮೆ, ಏಕಾಗ್ರತೆ, ಆಸಕ್ತಿ ಹೆಚ್ಚುತ್ತದೆ ಎನ್ನುವ ಅಶೋಕ ಅವರು ಹಲವಾರು ಗ್ರಾಮಗಳಿಗೆ ತೆರಳಿ ಆಸುಪಾಸಿನವರಿಗೂ ಯೋಗ ಗುರುವಾಗಿದ್ದಾರೆ. ಜಲ ಯೋಗ ಕಲಿಯಲು ಮಕ್ಕಳ ಪಾಲಕರು ಒಪ್ಪಲ್ಲವಾದರೂ ಸುಮಾರು ಜನರಿಗೆ ಜಲ ಯೋಗ ತರಬೇತಿ ನೀಡುತ್ತಲಿದ್ದಾರೆ. ಯೋಗದಿಂದ ಹಲವಾರು ಲಾಭಗಳಿವೆ. ಮಕ್ಕಳಲ್ಲಿ ಬಾಲ್ಯದಲ್ಲಿಯೇ ಯೋಗದ ಮಹತ್ವವನ್ನು ತಿಳಿಸಲು ಶಾಲಾ ಪಠ್ಯ ಪುಸ್ತಕಗಳಲ್ಲಿ ಯೋಗವನ್ನು ಅಳವಡಿಸುವುದು ಅವಶ್ಯ ಎನ್ನುತ್ತಾರೆ.

ತಂದೆಯಿಂದ ಬಳುವಳಿಯಾಗಿ ಬಂದ ಈ ವಿಶಿಷ್ಠ ಸಾಧನೆಯನ್ನು ಇನ್ನೊಬ್ಬರಿಗೆ ಕಲಿಸಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿರುವ ಈ ಗ್ರಾಮೀಣ ಪ್ರತಿಭೆ ಇನ್ನೂ ಎತ್ತರಕ್ಕೆ ಬೆಳೆಯಬೇಕಿದೆ. ಗ್ರಾಮೀಣ ಪ್ರತಿಭಾವಂತ ಯೋಗ ಸಾಧಕರಿಗೆ ಪ್ರೋತ್ಸಾಹ ಅಗತ್ಯವಾಗಿದೆ.

Advertisement

-ಬಸವರಾಜ ಭರಮಣ್ಣವರ

Advertisement

Udayavani is now on Telegram. Click here to join our channel and stay updated with the latest news.

Next