Advertisement

ದುಬೈ: ಯೋಗಾದಲ್ಲಿ ಗಿನ್ನೆಸ್‌ ರೆಕಾರ್ಡ್‌ ಬರೆದ ಭಾರತೀಯ ಯೋಗ ಟೀಚರ್‌

07:43 PM Jun 22, 2022 | Team Udayavani |

ದುಬೈ: ದುಬೈನಲ್ಲಿ ವಾಸವಿರುವ ಭಾರತೀಯ ಯೋಗ ಟೀಚರ್‌ ಒಬ್ಬರು ಇದೀಗ ಯೋಗ ಮೂಲಕವೇ ಗಿನ್ನೆಸ್‌ ರೆಕಾರ್ಡ್‌ ಬರೆದಿದ್ದಾರೆ.

Advertisement

21 ವರ್ಷದ ಮೊರಾಡಿಯಾ ಬರೋಬ್ಬರಿ 29 ನಿಮಿಷ 4 ಸೆಕೆಂಡುಗಳ ಕಾಲ ವೃಶ್ಚಿಕಾಸನ ಮಾಡಿ, ದಾಖಲೆ ಬರೆದಿದ್ದಾರೆ.

4 ನಿಮಿಷ 47 ಸೆಕೆಂಡುಗಳ ಕಾಲ ವೃಶ್ಚಿಕಾಸನ ಮಾಡಿದ್ದು ಈ ಹಿಂದಿನ ದಾಖಲೆಯಾಗಿದ್ದು, ಅದನ್ನು ಮೊರಾಡಿಯಾ ಮುರಿದಿದ್ದಾರೆ ಎಂದು ತಿಳಿಸಲಾಗಿದೆ.

ಎಂಟನೇ ವಯಸ್ಸಿನಿಂದಲೇ ಮೊರಾಡಿಯಾ ಯೋಗಾಭ್ಯಾಸ ಮಾಡುತ್ತಿದ್ದಾರೆ. ಗಿನ್ನೆಸ್‌ ರೆಕಾರ್ಡ್‌ಗಾಗಿ ಅವರು ಈ ವರ್ಷ ಫೆ.22ರಂದು ಯತ್ನಿಸಿ, ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಪವಾರ್ ವಿರುದ್ಧ ಪೋಸ್ಟ್ ಮಾಡಿದ್ದ ನಟಿಗೆ ಜಾಮೀನು; ಜೈಲಿನಿಂದ ಬಿಡುಗಡೆ

Advertisement

22/2/22 ವಿಶೇಷ ಪ್ಯಾಲಿಂಡ್ರೋಮ್‌ ದಿನವಾದ್ದರಿಂದ ಅದೇ ದಿನ ದಾಖಲೆಯ ಯತ್ನ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next