Advertisement
ಯೋಗ ಶುರುವಾದ ಮೇಲೆ ಬೆಳಗ್ಗೆ ಬೇಗ ಏಳುವುದು ಅಭ್ಯಾಸ ಇಲ್ಲದಿದ್ದುದರಿಂದ ತರಗತಿಯಲ್ಲಿ ಪಾಠ ಕೇಳುವಾಗ ನಿದ್ರಾಯೋಗ ಆರಂಭವಾಯಿತು. ಕೆಲವೊಮ್ಮೆ ತಡೆದುಕೊಳ್ಳಲು ಆಗದಷ್ಟು ನಿದ್ದೆ. ನಿದ್ದೆಯ ಅಮಲಿನಲ್ಲಿ ಮುಖಕ್ಕೆ ಕೈಇಟ್ಟು ಮಲಗಿ ಕೈತಪ್ಪಿದ್ದೂ ಉಂಟು.“ಮಾವಿನ ಹಣ್ಣಿನ ರುಚಿ ತಿಂದರೇ ತಿಳಿಯುತ್ತದೆ’ ಎಂಬಂತೆ ಯೋಗದ ಅಭ್ಯಾಸವಾಯಿತು. ನಿದ್ದೆ ದೂರವಾಯಿತು. ಯೋಗದ “ಗಂಧಗಾಳಿ’ ಗೊತ್ತಿಲ್ಲದ ನನ್ನಂಥವರಿಗೆ ತುಂಬಾ ತಾಳ್ಮೆಯಿಂದ ಶಿಕ್ಷಕಿಯು, ವಿದ್ಯಾರ್ಥಿಗೆ ಕೈಹಿಡಿದು ಅಕ್ಷರವನ್ನು ಅಭ್ಯಾಸ ಮಾಡುವಂತೆ ಯೋಗಾಭ್ಯಾಸ ಮಾಡಿಸಿದ್ದರು. ವರುಷದಲ್ಲಿ ಒಂದು ಬಾರಿಯೂ ಕೂಡ ಮೊಳಕೆ ಬರಿಸಿದ ಕಾಳುಗಳನ್ನು ತಿನ್ನದೇ ಇದ್ದ ನನಗೆ ಅದರ ರುಚಿಯನ್ನು ತೋರಿಸಿದ್ದೆ ಸ್ಪಿಸ್.
Related Articles
Advertisement
ಸ್ಪಿಸ್‌ನಲ್ಲಿ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಕೂಡ ಆತನನ್ನು ಸರಳ ವ್ಯಕ್ತಿಯನ್ನಾಗಿ ಮಾಡುವ ಸಾಮರ್ಥ್ಯವಂತೂ ಅದ್ಭುತ. ನಿಜವಾಗಿಯೂ ಎಲ್ಲಾ ಯೋಗಬಂಧುಗಳು ನಾನು, ನೀನು, ಮೇಲು-ಕೀಳೆಂಬ ಭಾವನೆಯಿಲ್ಲದೆ ಒಂದೇ ಎಂದು ಬೆರೆಯುವ ರೀತಿಯೇ ಸಂತೋಷವನ್ನು ನೀಡುತ್ತದೆ. ಎಲ್ಲಾ ಯೋಗಬಂಧುಗಳು “ಹರಿ ಓಂ’ ಎಂದು ಹೇಳುವಾಗ ಆ ಪದದಲ್ಲಿನ ಶಕ್ತಿಯೇ ನಮಗೆ ಸಂತೋಷ ನೀಡುತ್ತದೆ.
ಮರೆಯಲಾಗದ ಅನುಭವವನ್ನು ಪಡೆದ ನಾನೇ ಪುಣ್ಯವಂತೆ. ಈ ಕ್ಷಣವನ್ನು ನೆನಪಿಸಿಕೊಂಡಾಗಲೆಲ್ಲ ಮನಸ್ಸಿಗೆ ಖುಷಿಯಾಗಿ ಕುಣಿಯುವ ಎಂದೆನಿಸುತ್ತದೆ. ಈ ಕ್ಷಣದ ಬಗ್ಗೆ ಎಷ್ಟು ಸಲ ಮಾತನಾಡಿದರೂ ಸಿಗುವ ಸಂತೋಷವೇ ಅಮೂಲ್ಯ. ದೇವಿಯ ಸನ್ನಿಧಾನದಲ್ಲಿ “ಯೋಗ’ ಮಾಡುವಂಥ “ಯೋಗ’ವನ್ನು ನೀಡಿದಂತಹ ಸ್ಪಿಸ್‌ಗೆ ನನ್ನ ನಮಸ್ಕಾರ.
ಯಶಸ್ವಿ ಕಟೀಲುಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು