ಹೆಬ್ರಿ: ಆಧುನಿಕ ಜೀವನದ ಜಂಜಾಟದ ನಡುವೆ ಆರೋಗ್ಯವಾಗಿರಬೇಕಾದರೆ ನಮಗೆ ಯೋಗ ಒಂದೇ ಪರಿಹಾರ. ನಿರಂತರ ಯೋಗದಿಂದ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಕಾರ್ಕಳ ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಹೇಳಿದರು.
ಹೆಬ್ರಿ ಸೀತಾನದಿ ಸೌಖ್ಯ ಯೋಗ ಟ್ರಸ್ಟ್ ಇದರ ಆಶ್ರಯದಲ್ಲಿ ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ ಸಿಟಿ ಲಯನ್ಸ್ ಕ್ಲಬ್, ಹೆಬ್ರಿ ಜೇಸಿಐ ಇದರ ಸಹಯೋಗದೊಂದಿಗೆ ಜೂ. 21ರಂದು ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಂಗಮಂದಿರದಲ್ಲಿ ನಡೆದ ವಿಶ್ವ ಯೋಗ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಂ.ಆರ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ಸೌಖ್ಯ ಯೋಗ ಟ್ರಸ್ಟ್‌ನ ಉಪಾಧ್ಯಕ್ಷ ಎಚ್.ವಾದಿರಾಜ ಶೆಟ್ಟಿ, ಹೆಬ್ರಿ ಗ್ರಾ.ಪಂ.ಅಧ್ಯಕ್ಷ ಎಚ್.ಕೆ. ಸುಧಾಕರ್, ಟ್ರಸ್ಟಿಗಳಾದ ಬೇಳಂಜೆ ರಮಾನಂದ ಹೆಗ್ಡೆ, ಯೋಗೀಶ್ ಭಟ್, ಹರ್ಷ ಶೆಟ್ಟಿ, ಹೆಬ್ರಿ ಜೇಸಿಐ ಅಧ್ಯಕ್ಷ ನಾಗೇಂದ್ರ, ಹೆಬ್ರಿ ಲಯನ್ಸ್ ಕ್ಲಬ್ ಅಧ್ಯಕ್ಷ ಬೇಳಂಜೆ ಹರೀಶ್ ಪೂಜಾರಿ, ಗಣಪತಿ ಎಚ್.ಎ., ಡಾ| ಶೋಭಿತ್ ಸೀತಾನದಿ ಮೊದಲಾದವರು ಉಪಸ್ಥಿತರಿದ್ದರು.
ಹೆಬ್ರಿ ಸೀತಾನದಿ ಸೌಖ್ಯ ಯೋಗ ಟ್ರಸ್ಟ್‌ನ ಅಧ್ಯಕ್ಷ ಸೀತಾನದಿ ವಿಟuಲ ಶೆಟ್ಟಿ ಸ್ವಾಗತಿಸಿ, ಬಾಲರಾಜ್ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ವಂದಿಸಿದರು. ಹೆಬ್ರಿ ಸ.ಪ.ಪೂ. ಕಾಲೇಜು, ಹೆಬ್ರಿ ಸ.ಪ್ರ.ದರ್ಜೆ ಕಾಲೇಜು, ಹೆಬ್ರಿ ಅಮೃತಭಾರತಿ ವಿದ್ಯಾಕೇಂದ್ರ, ಹೆಬ್ರಿ ಎಸ್.ಆರ್. ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಯೋಗ ಶಿಬಿರದಲ್ಲಿ ಭಾಗವಹಿಸಿದ್ದರು.
ದೈಹಿಕ, ಮಾನಸಿಕ
ಸದೃಢತೆಗೆ ಯೋಗ
ಹೆಬ್ರಿ ತಾಲೂಕಿನ ತಹಶೀಲ್ದಾರ್‌ಮಹೇಶ್ಚಂದ್ರ ಮಾತನಾಡಿ, ದೈಹಿಕ ಮತ್ತು ಮಾನಸಿಕ ಸದೃಢತೆಗೆ ಯೋಗ ಒಂದೇ ಸಹಕಾರಿ. ಯೋಗ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ನಿರಂತರವಾಗಿರಲಿ. ಈ ನಿಟ್ಟಿನಲ್ಲಿ ತರಬೇತಿ ನೀಡುತ್ತಿರುವ ಸೌಖ್ಯ ಯೋಗ ಟ್ರಸ್ಟ್‌ನ ಆರೋಗ್ಯ ಕಾಳಜಿ ಶ್ಲಾಘನೀಯ ಎಂದರು.