Advertisement

ಆರೋಗ್ಯ-ಆಯುಷ್ಯ ವೃದ್ದಿಗೆ ಯೋಗ ಸಹಕಾರಿ

05:47 PM Apr 10, 2022 | Shwetha M |

ವಿಜಯಪುರ: ಆರೋಗ್ಯ ಮತ್ತು ಆಯುಷ್ಯ ವೃದ್ಧಿಗೆ ಯೋಗ, ಧ್ಯಾನ ಮತ್ತು ಪ್ರಾಣಯಾಮ ಅಗತ್ಯವಾಗಿವೆ ಎಂದು ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ಶರೀರ ಶಾಸ್ತ್ರ ವಿಭಾಗ ಯೋಗ ಕೇಂದ್ರದ ಸಂಯೋಜಕಿ ಡಾ| ಜ್ಯೋತಿ ಖೋದ್ನಾಪುರ ಹೇಳಿದರು.

Advertisement

ನಗರದ ಬಿಎಲ್‌ಡಿಇ ಸಂಸ್ಥೆಯ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಯುವ ರೆಡ್‌ಕ್ರಾಸ್‌ ಘಟಕ, ಎನ್‌ಎಸ್‌ಎಸ್‌ ಘಟಕ ಮತ್ತು ಕ್ರೀಡಾ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯೋಗ ಸಪ್ತಾಹ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಒತ್ತಡದ ಬದುಕನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಯೋಗ, ಧ್ಯಾನ ಮತ್ತು ಪ್ರಾಣಾಯಾಮ, ಆರೋಗ್ಯ ಮತ್ತು ಆಯುಷ್ಯ ವೃದ್ಧಿಗೆ ಪೂರಕವಾಗಿವೆ ಎಂದು ಹೇಳಿದರು.

ಪ್ರಾಚಾರ್ಯ ಡಾ| ಬಿ.ವೈ. ಖಾಸನೀಸ ಮಾತನಾಡಿ, ಶರೀರ ಮತ್ತು ಆತ್ಮಶುದ್ಧಿಗಾಗಿ ಯೋಗ ದಿವ್ಯಾಸ್ತ್ರವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡಲು ಯೋಗ ಬಹು ಉಪಯೋಗಿಯಾಗಿದೆ ಎಂದು ಹೇಳಿದರು.

ಕ್ರೀಡಾ ವಿಭಾಗದ ದೈಹಿಕ ನಿರ್ದೇಶಕ ಡಾ| ಎಂ.ಎಸ್‌.ಹಿರೇಮಠ, ಎ.ಎಸ್‌. ಮಸಳಿ, ಡಾ| ಜ್ಯೋತಿ ಪಟ್ಟಣಶೆಟ್ಟಿ, ಡಾ| ಬಿ.ಎಸ್‌.ಹಿರೇಮಠ, ಸುನೀಲ ಪಾಟೀಲ, ದಾದಾಗೌಡ ಪಾಟೀಲ ಇದ್ದರು. ಯೋಗ ತರಬೇತಿಗಾರ ಮಡಿವಾಳಪ್ಪ ದೊಡಮನಿ ಪ್ರಾಣಾಯಾಮ ಸೇರಿದಂತೆ ಯೋಗದ ನಾನಾ ಪ್ರಕಾರಗಳ ಕುರಿತು ಒಂದು ವಾರ ಕಾಲ ತರಬೇತಿ ನೀಡಿದರು. ರೆಡ್‌ ಕ್ರಾಸ್‌ ಘಟಕದ ಸಂಯೋಜಕ ಡಾ| ಮಂಜುನಾಥ ಕೋರಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next