Advertisement

ಸದೃಢ ಆರೋಗ್ಯಕ್ಕೆ ಯೋಗ ಪ್ರಮುಖ ಸಾಧನ

07:31 PM Jun 22, 2021 | Team Udayavani |

ಬೀದರ: ಯೋಗವು ಕೇವಲ ವ್ಯಾಯಾಮವಲ್ಲ, ಯೋಗವು ಸಮರಸ ಜೀವನವಾಗಿದೆ. ಮಾನಸಿಕ, ಅಧ್ಯಾತ್ಮ ಮತ್ತು ದೈಹಿಕ ಸದೃಢ ಆರೋಗ್ಯಕ್ಕೆ ಯೋಗ ಪ್ರಮುಖ ಸಾಧನವಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾ ಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.

Advertisement

ನಗರದ ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಪತಂಜಲಿ ಯೋಗ ಸಮಿತಿ ಜಿಲ್ಲಾ ಘಟಕದಿಂದ ನಡೆದ 7ನೇ ಅಂತಾರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಋಷಿ ಮುನಿಗಳು, ಪತಂಜಲಿ ಮಹರ್ಷಿಗಳು ವಿಶ್ವಕ್ಕೆ ಯೋಗವೆಂಬ ಮಹಾಶಕ್ತಿಯನ್ನು ಕೊಟ್ಟಿದ್ದರಿಂದ ಇಂದು ಜಗತ್ತು ಆರೋಗ್ಯವಂತಿಕೆ ಶಾಂತಿ ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ.

ಪ್ರಚಲಿತ 175 ರಾಷ್ಟ್ರಗಳು ಯೋಗವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಶಾಂತಿಯ ಬದುಕು ನಡೆಸಿಕೊಂಡು ಹೋಗುತ್ತಿದ್ದಾರೆ ಎಂದರು. ಯೋಗ ಕೇವಲ ಮತ, ಧರ್ಮ ಪಂಗಡದವರಿಗೆ ಸೀಮಿತವಾಗಲಾರದೆ ಇಡಿ ಸಕಲ ಮಾನವ ಜನಾಂಗಕ್ಕೆ ಯೋಗ ಅವಶ್ಯಕತೆ ಇದೆ. ಜಗತ್ತನ್ನು ಆರೋಗ್ಯದೆಡೆಗೆ ಕೊಂಡೊಯ್ಯುತ್ತಿರುವ ಸ್ವಾಮಿ ರಾಮದೇವ ಅವರ ಕಾರ್ಯ ಪ್ರಶಂಸನೀಯ ಎಂದು ನುಡಿದರು.

ಡಾ| ಮಹೇಶ ಬಿರಾದರ ಮಾತನಾಡಿ, ಬದಲಾಗುತ್ತಿರುವ ಜೀವನ ಶೈಲಿಗೆ ಯೋಗ ಬೇಕು. ಶರೀರದ ಕೋಶಗಳು ಕ್ರಿಯಾಶೀಲ ಆಗಬೇಕಾದರೆ ಯೋಗ ಅವಶ್ಯಕತೆ ಇದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಮಾನಸಿಕ ಖಿನ್ನತೆ ಮತ್ತು ಕ್ಯಾನ್ಸರ್‌ ಇನ್ನಿತರ ರೋಗಗಳಿಂದ ಮುಕ್ತರಾಗಬೇಕಾದರೆ ಪ್ರತಿ ನಿತ್ಯ ಯೋಗಮಾಡುವ ಅವಶ್ಯಕತೆ ಇದೆ ಎಂದರು. ನಗರ ಸಭೆಯ ಸದಸ್ಯ ಶಶಿಧರ ಹೊಸಳ್ಳಿ ಮಾತನಾಡಿ, ಭಾರತ ಜಗತ್ತಿಗೆ ಗುರುವಾಗಬೇಕಾದರೆ
ಆರೋಗ್ಯವಂತಿಕೆಯಿಂದ ರಾಷ್ಟ್ರಪ್ರೇಮ ರಾಷ್ಟ್ರಸಂಸ್ಕೃತಿಯನ್ನು ಪ್ರತಿಯೊಬ್ಬರ ಹೃದಯದಲ್ಲಿ ಹುಟ್ಟಬೇಕಾಗಿದೆ ಎಂದರು. ಯೋಗ ಶಿಕ್ಷಕ ಯೋಗೇಂದ್ರ ಯದಲಾಪುರೆ ಅಧ್ಯಕ್ಷತೆ ವಹಿಸಿದ್ದರು.

ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಶಿವರಾಜ ಪಾಟೀಲ, ಯವಾರೆಡ್ಡಿ ಅಮಲಾಪುರ ವೇದಿಕೆಯಲ್ಲಿದ್ದರು. ಬಸವರಾಜ ಹೆಗ್ಗೆ ಸ್ವಾಗತಿಸಿದರು. ಪ್ರೊ| ಉಮಾಕಾಂತ ಮೀಸೆ ನಿರೂಪಿಸಿದರು. ಎಚ್‌. ಬೆಟ್ಟದ ಚಳಕಾಪುರ ವಂದಿಸಿದರು. ಶ್ರೀಕಾಂತರೆಡ್ಡಿ ಚಿಟ್ಟಾ, ವೀರಸಂಗಯ್ಯ ಸ್ವಾಮಿ, ಶಿವಶಂಕರ ಸ್ವಾಮಿ, ವಿಶ್ವನಾಥ ಚಳಕಾಪುರ, ರಾಜಕುಮಾರ ಸಂಗೋಳಗಿ, ಶಿವಶಂಕರ ಚಿಕ್ಕೂರ್ತೆ, ತುಕ್ಕಾರೆಡ್ಡಿ, ಸೂರ್ಯಕಾಂತ ಕುರುಬಖೇಳಗಿ, ರಾಮರೆಡ್ಡಿ, ಡಾ| ವೈಜಿನಾಥ ಬಿರಾದರ, ಗಂಗಾಧರ ರೀರಿ, ಜಗನ್ನಾಥ ಕೊಡಗೆ, ಸತ್ಯವಾನ ಬೋಗಾರ, ಶಿವಕುಮಾರ ವಸ್ಮತೆ, ಭಕ್ತರಾಜ ಪುರಾಣಿ, ಮಲ್ಲಿಕಾರ್ಜುನ ಸಂಗಶೆಟ್ಟಿ, ಬಾಬು ದಿಗ್ವಾಲ್‌, ಕಾಶಿನಾಥ, ಲಕ್ಷಿ ¾àಬಾಯಿ ಮುನಾಳೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next