Advertisement
ಮನವಿ ತಿರಸ್ಕರಿಸಿದ ನ್ಯಾ| ಎಂ.ಬಿ. ಲೋಕುರ್ ನೇತೃತ್ವದ ಪೀಠ, “ಇದು ಸರಕಾರ ನಿರ್ಧರಿಸಬೇಕಿರುವ ವಿಚಾರ. ಶಾಲೆಗಳಲ್ಲಿ ಏನು ಹೇಳಿಕೊಡಬೇಕು, ಹೇಳಿಕೊಡಬಾರದು ಎಂದು ತೀರ್ಮಾನಿಸುವುದಕ್ಕೆ ಕೋರ್ಟ್‌ಗೆ ಅಧಿಕಾರವಿಲ್ಲ. ಈ ಕುರಿತು ನಿರ್ದೇಶನ ನೀಡಲು ನಾವು ಯಾರೂ ಅಲ್ಲ’ ಎಂದು ಹೇಳಿದೆ. ಶಾಲೆಗಳಲ್ಲಿ ಯೋಗಾಭ್ಯಾಸ ಮಾಡಿಸುವಂತೆ ಮತ್ತು ಯೋಗಕ್ಕೆ ಸಂಬಂಧಿಸಿ ಗುಣಮಟ್ಟದ ಕಲಿಕಾ ಪುಸ್ತಕಗಳನ್ನು ರಚಿಸುವಂತೆ ದೆಹಲಿ ಮೂಲದ ವಕೀಲ, ಬಿಜೆಪಿ ವಕ್ತಾರ ಅಶ್ವಿನ್ ಕುಮಾರ್ ಮತ್ತು ಜೆ.ಸಿ. ಸೇಥ್ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಎಲ್ಲಾ ಮೂಲಭೂತ ಹಕ್ಕುಗಳಂತೆಯೇ ಯೋಗ ಕಲಿಕೆ ಮತ್ತು ಉತ್ತಮ ಆರೋಗ್ಯ ಹೊಂದುವುದೂ ಮೂಲಭೂತ ಹಕ್ಕು. ಅದಕ್ಕಾಗಿ 1-8ನೇ ತರಗತಿಗೆ ಯೋಗ ಕಲಿಕೆ ಕಡ್ಡಾಯಗೊಳಿಸಬೇಕು ಎಂದು ಕೋರಿದ್ದರು. “ಶಾಲೆಯಲ್ಲಿ ಏನು ಕಲಿಸಬೇಕು ಎಂಬುದು ಮೂಲಭೂತ ಹಕ್ಕು ಆಗಲ್ಲ’ ಎಂದಿದೆ ಕೋರ್ಟ್. Advertisement
ಶಾಲೆಗಳಲ್ಲಿ ಯೋಗ: ಸುಪ್ರೀಂ ಅರ್ಜಿ ತಿರಸ್ಕೃತ
08:05 AM Aug 09, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.