Advertisement

Yoga Day; ಜಾಗತಿಕ ಒಳಿತಿಗೆ ಯೋಗವೇ ಮಾರ್ಗ: ಮೋದಿ

01:24 AM Jun 22, 2024 | Team Udayavani |

ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಮಳೆಯ ಅಡ್ಡಿಯ ನಡುವೆಯೇ 10ನೇ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ಶುಕ್ರ ವಾರ ಯಶಸ್ವಿಯಾಗಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ನೇತೃ ತ್ವ ದಲ್ಲಿ ನಡೆದ ಪ್ರಧಾನ ಕಾರ್ಯಕ್ರಮ ನಿಗದಿಯಂತೆ ಬೆಳಗ್ಗೆ 6.30ಕ್ಕೆ ಆರಂಭವಾಗಬೇಕಿತ್ತು. ಆದರೆ ಭಾರೀ ಮಳೆ ಸುರಿದ ಕಾರಣ ಎಸ್‌ಕೆಐಸಿಸಿ ಸಭಾಂಗಣದೊಳಕ್ಕೆ ಸ್ಥಳಾಂತರವಾಯಿತು.

Advertisement

ಮಳೆ ಸುರಿದರೂ ತಲೆಕೆಡಿಸಿಕೊಳ್ಳದೇ, ತಾವು ಹಾಸಿಕೊಂಡಿದ್ದ ಮ್ಯಾಟನ್ನೇ ರಕ್ಷಣೆಗೆ ಬಳಸಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರ ಸ್ಫೂರ್ತಿ ಯನ್ನು ಪ್ರಧಾನಿ ಪ್ರಶಂಸಿಸಿದರು. ಶ್ರೀನಗರ ಮಾತ್ರ ವಲ್ಲ, ಇಡೀ ಜಮ್ಮು-ಕಾಶ್ಮೀರದಲ್ಲಿ ಶುಕ್ರವಾರ 50,000 ರಿಂದ 60,000 ಮಂದಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಮೋದಿ ಹೇಳಿದರು.

ಜನರೊಂದಿಗೆ ಸಾಮೂಹಿಕ ಯೋಗಾಸನಗಳನ್ನು ಮುಗಿಸಿದ ಮೇಲೆ ಪ್ರಧಾನಿ ಸಭಿಕರನ್ನುದ್ದೇಶಿಸಿ ಮಾತನಾ ಡಿದರು. “ಜನ ಯೋಗದ ಬಗ್ಗೆ ಮಾತನಾಡುವಾಗ ಬಹುತೇಕರು ಅದನ್ನು ಆಧ್ಯಾತ್ಮಿಕ ಕ್ರಿಯೆ, ಅಲ್ಲಾಹ ನನ್ನೋ, ಈಶ್ವರನನ್ನೋ ಕಂಡುಕೊಳ್ಳುವ ಮಾರ್ಗ ಅಂದುಕೊಳ್ಳುತ್ತಾರೆ. ಸದ್ಯ ಅದನ್ನೆಲ್ಲ ಪಕ್ಕಕ್ಕಿಡಿ. ಈಗ ನಿಮ್ಮ ವೈಯ ಕ್ತಿಕ ಬೆಳವಣಿಗೆ ಬಗ್ಗೆ ಗಮನಹರಿಸಿ. ಯೋಗದಿಂದ ನಮ್ಮ ವಿಕಾಸ ಆಗುತ್ತದೆ. ಅದು ಸಮಾಜದ ವಿಕಾಸಕ್ಕೆ, ಅದರಿಂದ ಇಡೀ ಮಾನವ ಜನಾಂಗದ ಹಿತಸಾಧನೆ ಯಾಗುತ್ತದೆ. ಯೋಗ ಕೇವಲ ಜ್ಞಾನ ವಲ್ಲ, ಅದು ವಿಜ್ಞಾ ನವೂ ಹೌದು’ ಎಂದು ಮೋದಿ ಹೇಳಿದರು.

“ಯೋಗದಿಂದ ಬಹಳ ಉಪಯೋಗಳಿವೆ. ಪ್ರಸ್ತುತ ಇಡೀ ಪ್ರಪಂಚವೇ, ಜಾಗತಿಕ ಹಿತಸಾಧನೆಗೆ ಯೋಗ ವನ್ನು ಪ್ರಬಲ ಸಾಧನವೆಂದು ನಂಬಿ ದೆ. ಯೋಗ ಹಿಂದಿನ ಹೊರೆಯನ್ನು ಕಳೆದುಕೊಂಡು ವರ್ತಮಾನದಲ್ಲಿ ಬದುಕಲು ನೆರವಾಗುತ್ತದೆ. ಹಾಗಾಗಿಯೇ ಸೈನಿಕರಿಂದ ಹಿಡಿದು ಕ್ರೀಡಾಪಟುಗಳವರೆಗೆ ಎಲ್ಲ ರೂ ಯೋಗವನ್ನು ತಮ್ಮ ದಿನಚರಿಯಲ್ಲಿ ಜೋಡಿಸಿಕೊಂಡಿದ್ದಾರೆ’ ಎಂದು ಮೋದಿ ಹೇಳಿದರು.

ಯೋಗದ ಬಗ್ಗೆ ಕೇಳದವರೇ ಇಲ್ಲ: ಪ್ರಸ್ತುತ ಇಡೀ ವಿಶ್ವದಲ್ಲಿ ಯೋಗದ ಬಗ್ಗೆ ಆಸಕ್ತಿ ಹೆಚ್ಚಿರುವುದನ್ನು ಪ್ರಸ್ತಾವಿಸಿದ ಮೋದಿ, ಯೋಗಾಭ್ಯಾಸಿಗಳು ಜಗತ್ತಿನಾದ್ಯಂತ ಹೆಚ್ಚುತ್ತಿದ್ದಾರೆ. ನಾನು ಎಲ್ಲೇ ಹೋದರೂ ಯೋಗದ ಬಗ್ಗೆ ಕೇಳದ, ಮಾತನಾಡದ ನಾಯಕರು ಅತ್ಯಪರೂಪಕ್ಕೆ ಕಾಣಿಸಿದ್ದಾರೆ ಎಂದಿದ್ದಾರೆ.

Advertisement

ಪ್ರವಾಸೋದ್ಯಮ ವೃದ್ಧಿಗೆ ಯೋಗ ನೆರವು
ಪ್ರಸ್ತುತ ಉತ್ತರಾಖಂಡ, ಕೇರಳದಲ್ಲಿ ಯೋಗ ಪ್ರವಾಸೋದ್ಯಮವೇ ನಡೆಯುತ್ತಿದೆ. ಜನ ಖಾಸಗಿಯಾಗಿ ಯೋಗಶಿಕ್ಷಕರನ್ನು ನೇಮಿಸಿ ಕೊಳ್ಳುತ್ತಿದ್ದಾರೆ ಎಂದ ಪ್ರಧಾನಿ ನರೇಂದ್ರ ಮೋದಿ ಅವ ರು, ಜಮ್ಮು-ಕಾಶ್ಮೀರದಲ್ಲೂ ಇತ್ತೀ ಚಿನ ದಿನ ಗ ಳಲ್ಲಿ ಯೋಗ ಜನಪ್ರಿಯ ವಾಗುತ್ತಿದೆ. ಇಲ್ಲಿ ಯೋಗದ ಮೂಲಕ ಪ್ರವಾಸೋದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಬಹುದು, ಜನರ ದಿನನಿತ್ಯದ ಜೀವನೋಪಾಯಕ್ಕೂ ದಾರಿಯಾಗುತ್ತದೆ ಎಂದು ಹೇಳಿದ್ದಾರೆ.

ಯೋಗಾಸಕ್ತರೊಂದಿಗೆ 40 ನಿಮಿಷ ಸಂವಾದ
ಯೋಗಾಸನದ ಬಳಿಕ ಎಸ್‌ಕೆಐಸಿಸಿ ಹೊರಾಂಗಣದ ಹುಲ್ಲುಹಾಸಿನಲ್ಲಿ ಮೋದಿ ಜನರೊಂದಿಗೆ 40 ನಿಮಿಷ ಸಂವಾದ ನಡೆಸಿದರು. ಜನರ ನಡುವೆಯೇ ನಡೆದು ಹೋದ ಮೋದಿ ಹರ್ಷೋದ್ಗಾರಕ್ಕೆ ಕಾರಣವಾದರು. ಆರಂಭದಲ್ಲಿ ತುಸು ಹೊತ್ತು ಪಾಲ್ಗೊಂಡಿದ್ದ ಜನರ ಕುಶಲೋಪರಿ ವಿಚಾರಿಸಿದರು.

ಸಿಯಾಚಿನ್‌ನಿಂದ ಅಂಡಮಾನ್‌ವರೆಗೆ…
ಸಿಯಾಚಿನ್‌ನಿಂದ ಹಿಡಿದು ಪೂರ್ವ ಸಮುದ್ರದ ತೀರದವರೆಗೆ, ಲೋಂಗೇವಾಲಾದಿಂದ ಅಂಡಮಾನ್‌ವರೆಗೆ ದೇಶದ ವಿವಿಧೆಡೆ ಯೋಧರು ಯೋಗ ದಿನ ಆಚರಿಸಿದರು. ಐಎನ್‌ಎಸ್‌ ವಿಕ್ರಮಾದಿತ್ಯ ಸೇರಿದಂತೆ ನೌಕಾಪಡೆಯ ಹಲವು ಹಡಗುಗಳಲ್ಲಿ ನೌಕಾ ಸಿಬಂದಿ ಯೋಗ ಪ್ರದರ್ಶಿಸಿದ್ದಾರೆ. ಐಎಎಫ್ನ ವಾಯು ನೆಲೆಯಲ್ಲಿ, ಸಿಯಾಚಿನ್‌ನ ಹಿಮ ನೆತ್ತಿಯಲ್ಲಿ, ಚೀನ ಗಡಿ ಬಳಿಯ ಪ್ಯಾಂಗಾಂಗ್‌ ಸರೋ ವ ರದ ದಡದಲ್ಲೂ ಯೋಧರು ಯೋಗ ಮಾಡಿದ್ದಾರೆ.

ವಿಶ್ವಾದ್ಯಂತ ಸಂಭ್ರಮದ ದಶಮಾನೋತ್ಸವ
ಅಮೆರಿಕ, ನೇಪಾಳ, ಚೀನ, ಶ್ರೀಲಂಕಾ, ಸಿಂಗಾ ಪುರದ ಸೇರಿದಂತೆ ವಿಶ್ವಾದ್ಯಂತ ಹಲವು ದೇಶಗಳ ವಿವಿಧ ಭಾಗದಲ್ಲಿ ಶುಕ್ರವಾರ 10ನೇ ಅಂತಾ ರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು. ಅಮೆರಿಕದ ಟೈಮ್ಸ್‌ ಸ್ಕ್ವೇರ್‌ನಲ್ಲಿ ಯೋಗ ಶಿಕ್ಷಕರ ನೇತೃತ್ವದಲ್ಲಿ ನೂರಾರು ಮಂದಿ ಧ್ಯಾನ ಹಾಗೂ ಯೋಗಾಭ್ಯಾಸ ಮಾಡಿದ್ದಾರೆ. ಇನ್ನೂ ಹಲವೆಡೆ ಭಾರತದ ಶಾಸ್ತ್ರೀಯ ನೃತ್ಯಗಳ ಮೂಲಕ ದಿನಾ ಚರಣೆ ಆರಂಭಿಸಲಾಗಿದೆ. ಇಸ್ರೇಲ್‌ನ ಟೆಲ್‌ ಅವಿವ್‌ನಲ್ಲಿಯೂ ಕಾರ್ಯಕ್ರಮ ನಡೆದಿದ್ದು, ಸಿಂಗಾಪುರದಲ್ಲಿ ಭಾರತೀಯ ಹೈ ಕಮಿಷನ್‌ ಸಹ ಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾ ಗಿತ್ತು. ನೇಪಾಲದ ಪೋಖಾÅ, ಶ್ರೀಲಂಕಾದ ಜಾಫಾ° ದಲ್ಲೂ ಯೋಗ ಪ್ರದರ್ಶನಗಳು ನಡೆದಿವೆ. ರೋಮ್‌, ಬ್ರಿಟನ್‌, ಮಾಲ್ದೀವ್ಸ್‌, ಸೌದಿ ಅರೇ ಬಿಯಾ, ಕುವೈಟ್‌, ಮಲೇಷ್ಯಾ, ಇಂಡೋನೇಷ್ಯಾ, ಫ್ರಾನ್ಸ್‌ ಹಾಗೂ ಸ್ವೀಡನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೂ ಕೂಡ ಯೋಗ ಕಾರ್ಯ ಕ್ರಮ ಆಯೋಜಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next