Advertisement
ನಗರದ ಸಮಾಧಾನದಲ್ಲಿ ಸಮಾಧಾನ ಯೋಗ ಸಾಧನೆ ಮತ್ತು ರೋಗ ಚಿಕಿತ್ಸಾ ಕೇಂದ್ರ, ಚತುರಾ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಉದಯವಾಣಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಯೋಗ ದಿನಾಚರಣೆ- ವಿಶ್ವಯೋಗೋತ್ಸವ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಧ್ಯಾನ, ಮೌನ ಹಾಗೂ ಯೋಗದಲ್ಲಿ ಅಗಾಧವಾದ ಶಕ್ತಿವಿದೆ. ಇವುಗಳನ್ನು ಸತತ ಮೈಗೂಡಿಸಿಕೊಂಡಲ್ಲಿ ಏನೆಲ್ಲ ಪಡೆಯಬಹುದು ಎಂಬುದರ ಕುರಿತು ಬಂಡಿ ವಿವರಣೆ ನೀಡಿದರು. ನಂತರ ಬಂಡಿ ಅವರು ಯೋಗ ಹೇಳಿಕೊಟ್ಟರು. ರಾಜಕುಮಾರ ಬಾಳಿ ಅವರು ಆಹಾರ ಸೇವನೆ ವೈಜ್ಞಾನಿಕ ಮಹತ್ವದ ಕುರಿತಾಗಿ ಕಾರ್ಯಕ್ರಮದಲ್ಲಿ ವಿವರಣೆ ನೀಡಿದರು.
ಯೋಗ ಶಿಕ್ಷಕರಾದ ಡಾ.ಸಂಗಮೇಶ ಹತ್ತಿ, ಶಿವನಗೌಡ ಪಾಟೀಲ, ಖ್ಯಾತ ವಾಸ್ತುಶಿಲ್ಪಿ ಬಸವರಾಜ ಖಂಡೇರಾವ್, ಉದಯವಾಣಿ ಜಾಹೀರಾತು ವಿಭಾಗದ ಡೆಪ್ಯೂಟಿ ಮ್ಯಾನೇಜರ ನಾಗಶೆಟ್ಟಿ ಡಾಕುಳಗಿ, ವರದಿಗಾರ ಸೂರ್ಯಕಾಂತ ಜಮಾದಾರ ಸೇರಿದಂತೆ ಮುಂತಾದವರಿದ್ದರು.
ಉದಯವಾಣಿ ಉಪ ಮುಖ್ಯ ವರದಿಗಾರ ಹಣಮಂತರಾವ ಭೈರಾಮಡಗಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಮಾಧಾನದ ಹಿರಿಯ ಭಕ್ತರಾದ ಎ.ಬಿ.ಪಾಟೀಲ ಬಮ್ಮನಳ್ಳಿ ನಿರೂಪಿಸಿ ವಂದಿಸಿದರು.
ಯೋಗ ಕಾರ್ಯಕ್ರಮದಲ್ಲಿ ಸಮಾಧಾನ ಭಕ್ತರು, ಶ್ರೀ ಗುರು ವಿದ್ಯಾಪೀಠ, ಖಣದಾಳದ ಶಾಲಾ ಹಾಗೂ ಅಭಿಷೇಕ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.