Advertisement

ಪ್ರತಿನಿತ್ಯ ಯೋಗಭ್ಯಾಸದಿಂದ ಉತ್ತಮ ಆರೋಗ್ಯ: ಶಾಸಕ ಸಿದ್ದು ಸವದಿ

12:28 PM Jun 21, 2022 | Team Udayavani |

ರಬಕವಿ-ಬನಹಟ್ಟಿ: ನಾವು ಪ್ರತಿನಿತ್ಯ ತಪ್ಪದೇ ಯೋಗ ಮಾಡುವುದರಿಂದ ಉತ್ತಮ ಶಾರೀರಿಕ ಸಂಪತ್ತು ಹೊಂದಬಹುದು ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.

Advertisement

ಅವರು ಜೂ.21ರಂದು ಬನಹಟ್ಟಿಯ ಎಸ್‌ಆರ್‌ಎ ಮೈದಾನದಲ್ಲಿ ತೇರದಾಳ ಮತಕ್ಷೇತ್ರದ ಬಿಜೆಪಿ ವತಿಯಿಂದ ಆಜಾಧಿ ಕಾ ಅಮೃತಮಹೋತ್ಸವದ 8ನೇ ವಿಶ್ವ ಯೋಗಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯೋಗದ ಆಚರಣೆಗೆ ಯಾವುದೇ ಧರ್ಮ, ಜಾತಿಗಳ ಕಟ್ಟಳೆಗಳಿಲ್ಲ. ವಿಶ್ವದ ಬಹುತೇಕ ಎಲ್ಲ ರಾಷ್ಟ್ರಗಳೂ ಯೋಗದ ಮಹತ್ವ ಅರಿತು ತಮ್ಮ ರಾಷ್ಟ್ರಗಳಲ್ಲಿ ಯೋಗ ಆಚರಣೆ ಮಾಡುತ್ತಾರೆ. ಮುಂದಿನ ಜನಾಂಗ ಸದೃಢ ಮತ್ತು ಮಾನಸಿಕ ಸಕ್ಷಮತೆ ಹೊಂದಬೇಕಾದರೆ ನಾವು ದಿನ ನಿತ್ಯ ಯೋಗಾಚರಣೆಯಲ್ಲಿ ತೊಡಗಬೇಕು ಎಂದರು.

ಸಾನ್ನಿದ್ಯ ವಹಿಸಿದ್ದ ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀಗಳು ಮಾತನಾಡಿ, ಆಧುನಿಕ ಭಗೀರಥರಾಗಿ ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಶ್ರೇಯಸ್ಸು ಪ್ರಧಾನ ಮಂತ್ರಿ ಮೋದಿಯವರಿಗೆ ಸಲ್ಲುತ್ತದೆ. ಯೋಗವನ್ನು ಇಡೀ ವಿಶ್ವಕ್ಕೆ ತಲುಪಿಸುವ ಕಾರ್ಯ ಮಾಡಿದ್ದು ಶ್ಲ್ಯಾಘನೀಯ. ನಮ್ಮ ಜೀವನ ಯೋಗಮಯ ಜೀವನವಾಗಬೇಕು. ಯೋಗ ನಮ್ಮ ಜೀವನದ ಕ್ರಮವಾಗಬೇಕು. ಯೋಗದ ಮೂಲಕ ಆರೋಗ್ಯವನ್ನು ಸಾಧಿಸಬೇಕು. ಯೋಗ ಅಭ್ಯಾಸ ಮಾಡಿ ನಮ್ಮ ಜೀವನವನ್ನು ಯೋಗಮಯ ಮಾಡಿಕೊಳ್ಳೋಣ ಆರೋಗ್ಯವನ್ನು ಹೊಂದೋಣ ಎಂದರು.

Advertisement

ಇಡೀ ವಿಶ್ವದ ಮನುಕುಲಕ್ಕೆ ಯೋಗ ವಿದ್ಯೆಯ ಮಹತ್ತ ಸಾರಿದ ದೇಶ ಭಾರತ. ರೋಗ ರಹಿತ ಮನುಕುಲದ ಮುಂದುವರಿಕೆಗೆ ಭಾರತದ ಯೋಗ ದಾನ ಬಹು ಮುಖ್ಯವಾಗಿದೆ. ಸದೃಢ ಮನಸ್ಸು ಹಾಗೂ ದೇಹ ಹೊಂದಬೇಕಾದರೆ ಯೋಗದಿಂದ ಮಾತ್ರ ಸಾಧ್ಯ ಎಂದು ನುಡಿದರು.

ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು, ರಾಮಪೂರದ ಸಿದ್ರಾಮ ಶ್ರೀಗಳು, ಹೊಸೂರನ ಸಂಗಮೇಶ್ವರ ಶ್ರೀಗಳು ವೇದಿಕೆಯಲ್ಲಿದ್ದರು.

ಬನಹಟ್ಟಿ ಆರೋಗ್ಯ ಯೋಗಫೀಠ ಫೌಂಡೇಶನ್‌ನ ಡಾ. ಪರಶುರಾಮ ರಾವಳ ಹಾಗೂ ಯೋಗ ಗುರು ಹಾಗೂ ಹಳೆ ಹುಬ್ಬಳ್ಳಿ ವೀರಭಿಕ್ಷಾವರ್ತಿ ಮಠದ ಶ್ರೀ ಶಿವಶಂಕರ ಶಿವಾಚಾರ್ಯ ಶ್ರೀಗಳು ಯೋಗಾಸನ ತಿಳಿಸಿಕೊಟ್ಟರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂಜಯ ಇಂಗಳೆ, ಬಿಜೆಪಿ ನಗರಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಹಿಪ್ಪರಗಿ, ಸಿಪಿಐ ಜೆ. ಕರಣೇಶಗೌಡ, ಶ್ರೀಶೈಲ ಬೀಳಗಿ, ಶಿವಾನಂದ ಗಾಯಕವಾಡ, ವಿನಾಯಕ ತಾಂಬಟ, ಮಹಾದೇವ ಕೋಟ್ಯಾಳ, ಕುಮಾರ ಕದಂ, ಬನಹಟ್ಟಿ ಪಿಎಸ್‌ಐ ಸುರೇಶ ಮಂಟೂರ, ಪೌರಾಯುಕ್ತ ಶ್ರೀನಿವಾಸ ಜಾಧವ, ಮಹಾಲಿಂಗಪುರ ಪಿಎಸ್‌ಐ ವಿಜಯ ಕಾಂಬಳೆ, ಪ್ರಭು ಪೂಜಾರಿ, ಪ್ರಭಾಕರ ಮೊಳೇದ, ಗೌರಿ ಮಿಳ್ಳಿ, ವೈಷ್ಣವಿ ಬಾಗೇವಾಡಿ, ಮೀನಾಕ್ಷಿ ಸವದಿ, ಸವಿತಾ ಹೊಸರ, ವಿದ್ಯಾ ಧಬಾಡಿ, ರಾಜೇಂದ್ರ ಅಂಬಲಿ, ಅರುಣ ಬುದ್ನಿ, ಪಿ. ಆರ್. ಮಠಪತಿ, ಸದಾಶಿವ ಪರೀಟ, ಶ್ರೀಶೈಲ ಗಸ್ತಿ ಸೇರಿದಂತೆ ಅನೇಕರು ಇದ್ದರು.‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next