Advertisement

ರಾಜ್ಯಮಟ್ಟದ ಎನ್‌ಸಿಸಿ ಯೋಗ ಸ್ಪರ್ಧೆ: ಆಳ್ವಾಸ್‌ ಎನ್‌ಸಿಸಿ ಪ್ರಥಮ

03:35 AM Jul 04, 2017 | Team Udayavani |

ಮೂಡಬಿದಿರೆ: ಭಾರತ ಸರಕಾರದ ಆಯುಷ್‌ ಇಲಾಖೆ ವತಿಯಿಂದ ಭೂದಳ, ವಾಯುದಳದ ಹಿರಿಯ ಕಿರಿಯ ವಿದ್ಯಾರ್ಥಿಗಳಿಗೆ ಮೂಡಬಿದಿರೆಯಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಆಳ್ವಾಸ್‌ನ ಎನ್‌ಸಿಸಿ ಕೆಡೆಟ್‌ಗಳು ಪ್ರಥಮ ಸ್ಥಾನ ಗಳಿಸಿದ್ದಾರೆ. ಕರ್ನಾಟಕ ಹಾಗೂ ಗೋವಾ ಡೈರೆಕ್ಟರೇಟ್‌ ವ್ಯಾಪ್ತಿಯಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಆಳ್ವಾಸ್‌ ಕಾಲೇಜಿನ 100ಕ್ಕೂ ಅಧಿಕ ಎನ್‌ಸಿಸಿ ಕೆಡೆಟ್‌ಗಳು ಶ್ವೇತವಸ್ತ್ರಧಾರಿಗಳಾಗಿ ಸಾವಿರ ಕಂಬದ ಆವರಣದ ಹಾಸು ಹುಲ್ಲಿನ ಮೇಲೆ ಯೋಗಾಸನಗಳನ್ನು ಪ್ರಸ್ತುತಪಡಿಸಿದ್ದರು. ಇದರ ಫೋಟೋ ಶೂಟ್‌ ನಡೆಸಿ ಇಲಾಖೆಗೆ ಕಳುಹಿಸಿಕೊಡಲಾಗಿತ್ತು. ಇದರ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗಿದೆ.

Advertisement

ಆಳ್ವಾಸ್‌ ನ್ಯಾಚುರೋಪತಿ ಯೋಗಿಕ್‌ ಸೈನ್ಸ್‌ ಕಾಲೇಜಿನ ಉಪನ್ಯಾಸಕರು ಎನ್‌ಸಿಸಿ ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಭಂಗಿಗಳ ತರಬೇತಿಯನ್ನು ನೀಡಿದ್ದರು. ಕಾಲೇಜಿನ ಎನ್‌ಸಿಸಿ ಆಫೀಸರ್‌ ಡಾ| ರಾಜೇಶ್‌, ವಾಯುದಳದ ಕೇರ್‌ ಟೇಕರ್‌ ಪರ್ವೇಜ್‌, ಎನ್‌ಸಿಸಿ ಕೇರ್‌ ಟೇಕರ್‌ ಪ್ರವೀಣ್‌ ಗೌಡ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗಾಸನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next