Advertisement

“ಮಾನಸಿಕ,ದೈಹಿಕ ಸಮನ್ವಯತೆಗೆ ಯೋಗ ಸಹಕಾರಿ’

12:29 AM Apr 28, 2019 | Sriram |

ಮಹಾನಗರ: ಮನುಷ್ಯನ ಬುದ್ಧಿ ಚಿತ್ತಗಳ ಸಮನ್ವಯತೆ ಸಾಧಿಸಿ, ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೊಂದುವಲ್ಲಿ ಯೋಗ ಸಹಕಾರಿ ಎಂದು ಶ್ರೀ ರಾಮಕೃಷ್ಣ ಮಠದ ಜಿತಕಾಮಾನಂದ ಸ್ವಾಮೀಜಿ ಅವರು ಹೇಳಿದರು.

Advertisement

ನಗರದ ಶ್ರೀ ರಾಮಕೃಷ್ಣ ಮಠದಲ್ಲಿ ಇತ್ತೀಚೆಗೆ ನಡೆದ ಯೋಗ ಶಿಬಿರಕ್ಕೆ ಚಾಲನೆ ನೀಡಿ, ಮಾತನಾಡಿದರು. ಯೋಗವು ಭಾರತೀಯ ಪರಂಪರೆಯಿಂದ ಬಳುವಳಿಯಾಗಿ ಬಂದ ವಿದ್ಯೆಯಾಗಿದ್ದು, ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಾನ್ಯತೆ ಪಡೆದಿದೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗ ಗುರು ಡಾ| ಎಂ. ಜಗದೀಶ್‌ ಶೆಟ್ಟಿ ಬಿಜೈ ಅವರಂತಹ ಯೋಗ್ಯ ಶಿಕ್ಷಕರಿಂದ ತರಬೇತಿ ಪಡೆದು ಶಿಬಿರದ ಸದುಪಯೋಗ ಪಡೆಯುವಂತೆ ತಿಳಿಸಿದರು.

ಪತ್ರಕರ್ತ ವೇಣುವಿನೋದ್‌ ಮಾತ ನಾಡಿ, ಯೋಗವನ್ನು ದಿನಚರಿಯಲ್ಲಿ ಅಳವಡಿಸಿ ಕೊಂಡಾಗ ಚಟುವಟಿಕೆಯಿಂದ ಕೂಡಿದ ಆರೋಗ್ಯಪೂರ್ಣ ಜೀವನ ಸಾಧ್ಯ ಎಂದರು.

ಡಾ| ದೇವರಾಜ್‌ ಮಾತನಾಡಿ, ನಿರಂ ತರ ಯೋಗಾಭ್ಯಾಸವನ್ನು ಮಾಡಿ ನಾನು ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿರುವುದಾಗಿ ತಿಳಿಸಿದರು.

Advertisement

ಯೋಗದಿಂದ ಮಾನಸಿಕ ನೆಮ್ಮದಿ
ಯೋಗ ಗುರು ಡಾ| ಎಂ. ಜಗದೀಶ್‌ ಶೆಟ್ಟಿ ಬಿಜೈ ಮಾತನಾಡಿ, ಯೋಗದಿಂದ ಯಾವ ರೋಗವು ಬರದ ಹಾಗೆ ಶರೀರ ಸುಸ್ಥಿತಿಯಲ್ಲಿರಲು, ಮಾನಸಿಕ ನೆಮ್ಮದಿಯಿಂದಿರಲು ಆಸನ, ಪ್ರಾಣಾಯಾಮ, ಯೋಗ ಚಿಕಿತ್ಸಾ ಪದ್ಧತಿ, ಮುದ್ರೆ, ಯೋಗನಿದ್ರೆ, ವೈದಿಕ ಸೂರ್ಯನಮಸ್ಕಾರ ಈ ಒಂದು ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಕಲಿಸಿ ಕೊಡಲಾಗುವುದು ಎಂದರು.

ರಾಧಿಕಾ ಕಾಮತ್‌ ವಂದಿಸಿದರು. ಸುಬ್ರಾಯ ನಾಯಕ್‌, ಭಾರತಿ ಶೆಟ್ಟಿ, ಊರ್ಮಿಳಾ, ಶಕೀಲಾ, ಕುಶಲ, ರೂಪಾ, ಡಾ| ಅನುಷಾ, ಲೋಕೇಶ್‌, ರೂಪಾ, ಮಾಧವ್‌ ಶೆಣೈ, ಮೋಹನ್‌ ಭಟ್‌, ಸುರೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಯೋಗದಿಂದ ರೋಗ ಮುಕ್ತಿ
ಅತಿಥಿಯಾಗಿದ್ದ ನಾ. ದಾಮೋದರ್‌ ಶೆಟ್ಟಿ ಮಾತನಾಡಿ, ಯೋಗಾಭ್ಯಾಸದಿಂದ ಇಂದಿನ ಜೀವನ ಶೈಲಿಯಿಂದ ಬರುವ ರೋಗಗಳನ್ನು ನಿಯಂತ್ರಿಸಬಹುದಾಗಿದೆ. ನಿರಂತರ ಅಭ್ಯಾಸ ಮಾಡುವ ಅಗತ್ಯವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next