Advertisement

“ಯೋಗ, ಆಯುರ್ವೇದ, ನ್ಯಾಚುರೋಪತಿಗೆ ಜಾಗತಿಕ ಸ್ಥಾನ’

09:11 PM Sep 25, 2021 | Team Udayavani |

ಉಡುಪಿ: ಭಾರತೀಯ ಮೂಲದ ಯೋಗ, ಆಯುರ್ವೇದ, ನ್ಯಾಚುರೋಪತಿ ವೈದ್ಯಪದ್ಧತಿ ಈಗ ಪ್ರಪಂಚಕ್ಕೆ ವಿಸ್ತರಣೆಯಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಹರ್ಷ ವ್ಯಕ್ತಪಡಿಸಿದರು.

Advertisement

ಶನಿವಾರ ಉದ್ಯಾವರ ಕುತ್ಪಾಡಿಯ ಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಲಾದ ರತ್ನಶ್ರೀ ಆರೋಗ್ಯಧಾಮದ ಉದ್ಘಾಟನ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಆಸ್ಪತ್ರೆಯ ನಿರೀಕ್ಷಣ ಕೊಠಡಿಯಲ್ಲಿರುವ ಸರಸ್ವತಿ ವಿಗ್ರಹ ಹಾಗೂ ಶೃಂಗಾರ (ಆಸ್ತೆಟಿಕ್‌ ಮೆಡಿಸಿನ್‌) ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧರ್ಮಸ್ಥಳವೆಂದರೆ ನಿಖರತೆ, ಸ್ಪಷ್ಟತೆಗೆ ಒಂದು ಉದಾಹರಣೆ. ಶಿಕ್ಷಣ, ಧರ್ಮ ಇತ್ಯಾದಿ ಯಾವುದೇ ಕ್ಷೇತ್ರದ ಕೆಲಸವನ್ನು ಕೈಗೊಂಡರೂ ಯಶಸ್ವಿಯಾಗಿ ಡಾ| ಹೆಗ್ಗಡೆಯವರು ಮಾಡುತ್ತಾರೆ. ಗ್ರಾಮೀಣಾಭಿವೃದ್ಧಿ ಯೋಜನೆ, ರುಡ್‌ಸೆಟ್‌ ಇಡೀ ದೇಶಕ್ಕೆ ಮಾದರಿಯಾಗಿದೆ. ಅದೇ ರೀತಿ ಕೆರೆಗಳ ಪುನಶ್ಚೇತನ, ಹಡಿಲುಭೂಮಿ ಕೃಷಿ, ಪಾನಮುಕ್ತ ಸಮಾಜದ ಕಲ್ಪನೆ ಇಂತಹ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ. ಸರಕಾರಗಳೂ ಇವರಿಂದ ಪ್ರೇರಣೆ ಪಡೆ ಯುತ್ತಿದೆ ಎಂದು ಶೋಭಾ ಹೇಳಿದರು.

ಇದನ್ನೂ ಓದಿ:ತಂದೆ ಹತ್ಯೆ ಮಾಡಿ ಜೈಲು ಪಾಲಾದ ಮಗ:ಅನಾಥಾಶ್ರಮ ಸೇರಿದ ಬುದ್ದಿಮಾಂದ್ಯ ಮಕ್ಕಳು:ತಾಯಿ ಪಾಡು?

ಉಜಿರೆ ಎಸ್‌.ಡಿ.ಎಂ. ಎಜುಕೇಶನಲ್‌ ಸೊಸೈಟಿ ಅಧ್ಯಕ್ಷರಾದ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಕೇಂದ್ರದ ಬಂದರು, ಶಿಪ್ಪಿಂಗ್‌, ಜಲಸಾರಿಗೆ ಮತ್ತು ಆಯುಷ್‌ ಖಾತೆ ಸಚಿವ ಸರ್ಬಾನಂದ ಸೊನೊವಾಲ್‌ ನೂತನ ಆಸ್ಪತ್ರೆಯನ್ನು ಉದ್ಘಾಟಿಸಿದರು. ಡಿಲಕ್ಸ್‌ ವಾರ್ಡ್‌(ಹೆಲ್ತ್‌ ಕಾಟೇಜ್‌) ಅನ್ನು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪಂಚಕರ್ಮ ಕೇಂದ್ರವನ್ನು ಶಾಸಕ ಕೆ. ರಘುಪತಿ ಭಟ್‌, ಸ್ಪೆಷಲ್‌ ವಾರ್ಡ್‌ ಅನ್ನು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಉದ್ಘಾಟಿಸಿದರು.

Advertisement

ಎಸ್‌.ಡಿ.ಎಂ. ಎಜುಕೇಶನಲ್‌ ಸೊಸೈಟಿ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್‌, ಕಾರ್ಯದರ್ಶಿ ಡಿ. ಹಷೇìಂದ್ರ ಕುಮಾರ್‌, ಕಾಲೇಜಿನ ಪ್ರಾಂಶುಪಾಲೆ ಡಾ| ಮಮತಾ ಕೆ.ವಿ., ಹಾಸನ ಎಸ್‌.ಡಿ.ಎಂ. ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ| ಪ್ರಸನ್ನ ನರಸಿಂಹ ರಾವ್‌ ಉಪಸ್ಥಿತರಿದ್ದರು. ಈ ಸಂದರ್ಭ ಕಟ್ಟಡ ವಿನ್ಯಾಸಕ ಗೋಪಾಲ ಭಟ್‌, ಕಟ್ಟಡ ನಿರ್ಮಾಣ ಗುತ್ತಿಗೆದಾರ ಎಂ.ಡಿ. ಗಣೇಶ್‌ ಅವರನ್ನು ಸಮ್ಮಾನಿಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next