Advertisement
ಪ್ರಾಣಾಯಾಮಶ್ವಾಸಕೋಶಕ್ಕೆ ಸಂಬಂಧಪಟ್ಟ ಉಸಿರಾಟ ಮುಂತಾದ ಸಮಸ್ಯೆಗಳಿಗೆ ಪ್ರಾಣಾಯಾಮ ರಾಮಬಾಣ. ಅಲ್ಲದೇ ಇದು ಸರ್ವ ರೋಗಗಳಿಗೆ ದಿವ್ಯ ಔಷಧವಾಗಿದೆ. ದಿನನಿತ್ಯ ಬೆಳಗ್ಗೆ ಎದ್ದ ತತ್‌ಕ್ಷಣ ಮತ್ತು ಸಂಜೆ ಹೊತ್ತು ಕೆಲವು ನಿಮಿಷ ಪ್ರಾಣಾಯಾಮ ಮಾಡಿದರೆ ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೇ ಪ್ರಾಣಾಯಾಮವು ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಸಾಧನೆಗೆ ಸಹಕಾರಿಯಾಗಿ ಕೆಲಸ ನಿರ್ವಹಿಸುತ್ತದೆ.ಯೋಗಾಸನಗಳು ಉಸಿರಾಟ ಸರಾಗವಾಗಿರಲು ಆಮ್ಲಜನಕ ಅಗತ್ಯವಾಗಿದೆ. ಶಶಾಂಕಾಸನ ಅಲರ್ಜಿ ಶೀತವನ್ನು ನಿಯಂತ್ರಿಸುತ್ತದೆ. ಮತ್ತು ಇದರಿಂದ ಸಮರ್ಪಕವಾದ ಆಮ್ಲಜನಕ ದೇಹಕ್ಕೆ ದೊರಕುತ್ತದೆ. ಇದಲ್ಲದೆ ಈ ಕೆಲವು ಯೋಗಾಸನಗಳಿಂದ ಉಸಿರಾಟದ ಸಮಸ್ಯೆಗೆ ಬಹು ಬೇಗನೆ ಪರಿಹಾರ ಕಂಡುಕೊಳ್ಳುವ ಮೂಲಕ ಶಾಶ್ವತವಾಗಿ ಸಮಸ್ಯೆಗಳಿಂದ ಮುಕ್ತವಾಗಬಹುದು. ಉತ್ಥಾನಾಸನ, ಅರ್ಧ ಉಷ್ಟ್ರಾಸನ, ಸೇತುಬಂಧ, ಮತ್ಸಾಸನ, ಹಲಾಸನ, ಅಧೋಮುಖ ಶ್ವಾನಾಸನ ಮುಂತಾದವು ನಿಮ್ಮ ಆರೋಗ್ಯ ಕಾಪಾಡಲು ಹೆಚ್ಚು ಸಹಕರಿಸಬಲ್ಲವು.
ಸೂರ್ಯಮುದ್ರೆ, ಶಂಖಮುದ್ರೆ ಮತ್ತು ಪ್ರಾಮುದ್ರೆ. ಈ ಮುದ್ರೆಗಳನ್ನು ದಿನನಿತ್ಯ 10ರಿಂದ 20ನಿಮಿಷ ಮಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಮತ್ತು ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ಇವುಗಳಿಂದ ಆಗುವ ಲಾಭಗಳು
ಉಸಿರಾಟ ತೋದರೆ ನಿವಾರಣೆ. ರಕ್ತಶುದ್ಧಿ, ರಕ್ತ ಪರಿಚಲನೆ, ಏಕಾಗ್ರತೆ ನೆನಪಿನ ಶಕ್ತಿಹೆಚ್ಚಾಗುತ್ತದೆ. ರಕ್ತದ ಮೂಲಕ ಮೆದುಳಿಗೆ ಹೆಚ್ಚಿನ ಆಮ್ಲಜನಕ ದೊರೆಯುತ್ತದೆ. ಅಗತ್ಯ ಆಮ್ಲಜನಕ ದೊರೆಯವುದರಿಂದ ಮೆದುಳಿಗೆ ಒತ್ತಡ ಕಡಿಮೆಯಾಗಿ ವಿಶ್ರಾಂತಿ ಲಭಿಸುತ್ತದೆ. ಶ್ವಾಸಕೋಶ ತೊಂದರೆ, ಶ್ವಾಸ ಸಂಬಂಧಿತ ಕಾಯಿಲೆಗಳಾದ ಉಬ್ಬಸ, ಅಸ್ತಮಾ ನಿವಾರಣೆ. ಅಶಕ್ತತೆ ನಿವಾರಿಸಿ ದೇಹಕ್ಕೆ ಚೈತನ್ಯ ದೊರೆಯುತ್ತದೆ. ಮೆದುಳಿನ ಕಾರ್ಯ ಚುರುಕಾಗುತ್ತದೆ.
Related Articles
Advertisement