Advertisement

ಎತ್ತಿನಹೊಳೆ: ಪರಿಹಾರ ನೀಡುವಂತೆ ಪ್ರತಿಭಟನೆ

02:14 PM Sep 18, 2022 | Team Udayavani |

ಆಲೂರು: ಎತ್ತಿನಹೊಳೆ ಯೋಜನೆಯಿಂದ ಕಂಗಾಲಾಗಿರುವ ಜಿ.ಜಿ. ಕೊಪ್ಪಲು ಗ್ರಾಮಸ್ಥರು ಕೂಡಲೆ ಪರಿಹಾರ ನೀಡದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪಟ್ಟಣದ ಮಿನಿ  ವಿಧಾನಸೌಧ ಮುಂಭಾಗ ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದರು.

Advertisement

ಶನಿವಾರ ವಿಷದ ಬಾಟಲಿಯೊಂದಿಗೆ ಆಗಮಿಸಿದ ಗ್ರಾಮಸ್ಥರು ಮೆಟ್ಟಿಲೇರಿ ಕುಳಿತು ಪ್ರತಿಭಟನೆ ಪ್ರಾರಂಭಿಸಿದರು. ದೊಡ್ಡ-ದೊಡ್ಡ ಬಂಡೆಗಳನ್ನು ಹೊರ ತೆಗೆಯಲು ಸಿಡಿಮದ್ದು ಸಿಡಿಸುವುದರಿಂದ ಮನೆಗಳ ಗೋಡೆಗಳು ಬಿರುಕು ಬಿಟ್ಟು ಬೀಳುವ ಸ್ಥಿತಿಯಲ್ಲಿವೆ. ಈ ಬಗ್ಗೆ ಶಾಸಕ ಕುಮಾರಸ್ವಾಮಿ ಗಮನಕ್ಕೆ ತಂದರೂ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ತಿಳಿಸಿರುವುದಾಗಿ ಸುಳ್ಳು ಹೇಳಿಕೊಂಡು ಕಾಲ ದೂಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಗ್ರಾಮವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ: ಡೈನಾಮೆಟ್‌ ಸಿಡಿದಾಗ ಮನೆಯಲ್ಲಿರಲು ಭಯವಾಗುತ್ತದೆ. ಮಕ್ಕಳು, ವಯೋವೃದ್ಧರು ವಿಪರೀತ ಭಯ ಭೀತರಾಗಿ ಮನೆಯಿಂದ ಹೊರ ಬರುತ್ತಿಲ್ಲ. ಇತ್ತೀಚಿಗೆ ಸುರಿಯುತ್ತಿರುವ ಮಹಾಮಳೆಗೆ ಎತ್ತಿನಹೊಳೆ ಇಲಾಖೆಯವರು

ತಗೆದಿರುವ ಕಾಲುವೆಗಳಲ್ಲಿ ನೀರು ತುಂಬಿಕೊಂಡು ಗ್ರಾಮದೊಳಗಿರುವ ಚರಂಡಿಗಳು, ನೀರು ಹರಿಯುತ್ತಿದ್ದು ಇಡೀ ಗ್ರಾಮ ಶೀತ ಪೀಡಿತವಾಗಿದ್ದು ವೃದ್ಧರು ಹಾಗೂ ಚಿಕ್ಕ ಮಕ್ಕಳು ಅನಾರೋಗ್ಯ ಪೀಡಿತರಾಗಿದ್ದಾರೆ. ನಮಗೆ ತಕ್ಷಣ ಪರಿಹಾರ ನೀಡುವುದರ ಜೊತೆಗೆ ನಮ್ಮ ಗ್ರಾಮವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಅಲ್ಲಿಯ ವರೆಗೆ ಕಾಮಗಾರಿ ಮುಂದು ವರಿಸಲು ಬಿಡುವುದಿಲ್ಲ ಅಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರ್‌ ನಡೆಗೆ ಗ್ರಾಮಸ್ಥರ ಅಕ್ರೋಶ: ಪ್ರತಿಭಟನೆ ಸ್ಥಳಕ್ಕೆ ಬಂದ ತಹಶೀಲ್ದಾರ್‌ ಸೌಮ್ಯ ಅವರು ಪ್ರತಿಭಟನಾನಿರತರನ್ನು ಸಮಾಧಾನ ಪಡಿಸುವ ಬದಲು ಪ್ರತಿಭಟನಾ ನಡೆಸುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಿಮ್ಮ ಸಮಸ್ಯೆಗೂ ನಮಗೂ ಸಂಬಂಧವಿಲ್ಲ. ನೀವೆನಿದ್ದರೂ ಎತ್ತಿನಹೊಳೆ ಇಲಾಖೆ ಅಧಿಕಾರಿಗಳನ್ನು ಕಂಡು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಉಡಾಫೆಯಿಂದ ಉತ್ತರಿಸಿದರು. ನಂತರ ಪ್ರತಿಭಟನಕಾರರು ನೀವು ತಾಲೂಕಿನ ಎಲ್ಲ ಇಲಾಖೆಗಳಿಗೂ ನೀವೇ ಯಜಮಾನರು. ಜವಾಬ್ದಾರಿ ಅರಿತು ಮಾತನಾಡಬೇಕು ಎಂದು ಪ್ರತಿಭಟನಾಕಾರರು ಅಕ್ರೋಶ ವ್ಯಕ್ತಪಡಿಸಿದರು.

ನಿರಾಸಕ್ತಿ ಉತ್ತರ: ಗ್ರಾಮದ ಮಹಿಳೆ ಸುಜಾತ ಮಾತನಾಡಿ, ಹಲವು ತಿಂಗಳಿಂದ ಎತ್ತಿನಹೊಳೆ ಇಲಾಖೆ ವತಿಯಿಂದ ಕಾಲುವೆ ಕಾ ಮಗಾರಿ ನಡೆಯುತ್ತಿದೆ. ದೊಡ್ಡ ದೊಡ್ಡ ಬಂಡೆ ತೆಗೆಯುವ ಸಲುವಾಗಿ ಅಳವಾಗಿ ಗುಳಿ ಕೊರೆದು ಜಿಲೆಟಿನ್‌ ಹಾ ಗೂ ಕೆಮಿಕಲ್ಸ್ ಹಾಕಿ ಸಿಡಿಮದ್ದು ಸಿಡಿಸುತ್ತಿರುವುದರಿಂದ ಭೂಮಿ ಕಂಪಿಸಿದೆ. ಇದರಿಂದ ಮನೆಯ ಗೋಡೆ ಬಿರು ಕು ಬಿಟ್ಟು ಸಂಪೂರ್ಣವಾಗಿ ಜಖಂಗೊಂಡಿದೆ. ಜೊತೆಗೆ ಶಬ್ದದಿಂದ ಮನೆಯಲ್ಲಿ ವಾಸ ಮಾಡಲು ಕಷ್ಟವಾಗುತ್ತಿದೆ. ನಾವುಗಳು ಈಗಾಗಲೇ ಶಾಸಕ ಕುಮಾರಸ್ವಾಮಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸಮಸ್ಯೆ ಬಗೆ ಹರಿಸಲು ವಿಫ‌ಲರಾಗಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಬೀದಿಗೆ ಬಿದ್ದ ಬದುಕು: ಗ್ರಾಮದ ಮುಖಂಡ ಹರೀಶ್‌ ಮಾತನಾಡಿ, ಎತ್ತಿನಹೊಳೆ ಇಲಾಖೆ ಹಾಗೂ ಅಸಮರ್ಥ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ನಮ್ಮ ಬದುಕೆ ಬೀದಿಗೆ ಬಂದಿದೆ. ಯಾರಿಗೋ ನೀರು ಕುಡಿಸಲು ನಮ್ಮ ಜಮೀ ನು ನೀಡಿ ಪರಿಹಾರಕ್ಕಾಗಿ ಇವರ ಹತ್ತಿರ ಭಿಕ್ಷೆ ಬೇಡಬೇಕಾಗಿದೆ. ನಮ್ಮ ಗ್ರಾಮವನ್ನ ಸ್ಥಳಾಂತರ ಮಾಡಿ ಪರಿಹಾರ ಕೋಡುವವರಿಗೆ ಕಾಮಗಾರಿ ಮಾಡಲು ಬೀಡುವುದಿಲ್ಲ. ನ್ಯಾಯ ಕೇಳಲು ಬಂದರೆ ತಹಶೀಲ್ದಾರ್‌ ಉಡಾಫೆ ತೋರುತ್ತಾರೆ. ಇಂತಹ ಅಸಮರ್ಥ ಅಧಿಕಾರಿಗಳಿಂದ ನ್ಯಾಯ ಸಿಗುತ್ತದೆಯೇ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಜಂಟಿ ಸಮೀಕ್ಷೆ ನಡೆಸಿ ವರದಿ ನೀಡುವೆ: ಜಂಟಿ ಸಮೀಕ್ಷೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಬಂದ ನಂತರ ಪ್ರತಿಭಟನೆ ಸ್ಥಳಕ್ಕೆ ಆಗುಮಿಸಿದ ಕಾರ್ಯ ಪಾಲಕ ಅಭಿಯಂತ ವೆಂಕಟೇಶ್‌ ಅವರು, ಲೋಕೋಪಯೋಗಿಇಲಾಖೆ ಅಧಿಕಾರಿಗಳೊಂದಿಗೆ ಕೂಡಲೆ ಜಂಟಿ ಸಮೀಕ್ಷೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಅವರ ನಿರ್ದೇಶನದಂತೆ ತಕ್ಷಣ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next