ಸಕಲೇಶಪುರ: ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ರಾಜ್ಯಸರ್ಕಾರದ ಮಹತ್ವಾಂಕ್ಷೆಯ ಎತ್ತಿನಹೊಳೆ ಯೋಜನೆಮೊದಲ ಹಂತದ ಕಾಮಗಾರಿ ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ಎತ್ತಿನಹೊಳೆ ಮತ್ತು ದೊಡ್ಡ ನಾಗರ ಗ್ರಾಮದ ಸಮೀಪ ಎತ್ತಿನಹೊಳೆ ಯೋಜನೆಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಈ ಯೋಜನೆಯಲ್ಲಿ 24ಟಿಎಂಸಿ ನೀರು ಸಂಗ್ರಹ ಮಾಡುವ 8 ಚೆಕ್ ಡ್ಯಾಂಗಳನಿರ್ಮಾಣ ಮತ್ತು ಮೋಟಾರ್ ಪಂಪ್ ಅಳವಡಿಕೆಯಶೇ.90ರಷ್ಟು ಪೂರ್ಣಗೊಂಡಿದೆ. ವಿದ್ಯುತ್ ಪೂರೈಕೆಯಕೇಂದ್ರದ ನಿರ್ಮಾಣವೂ ಬಹುತೇಕಪೂರ್ಣಗೊಂಡಿದ್ದು, ಇನ್ನೊಂದು ತಿಂಗಳೊಗಳಗೆಮೋಟರ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸಮುಗಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.
4.5 ಕಿ.ಮೀ.ನಷ್ಟು ಪೈಪ್ ಅಳವಡಿಕೆ ಕಾಮಗಾರಿ ಬಾಕಿ: ಮೂರ್‍ನಾಲ್ಕು ಕಡೆ ಒಟ್ಟು 4.5 ಕಿ.ಮೀ.
ನಷ್ಟು ಪೈಪ್‌ಗಳ ಅಳವಡಿಕೆಯ ಕಾಮಗಾರಿಯಷ್ಟೇ ಈಗ ಬಾಕಿ ಉಳಿದಿದೆ. ಭೂ ಸ್ವಾಧೀನ ವಿವಾದ ದಿಂದ ಅಡ್ಡಿಯಾಗಿರುವ ಈ ಸಮಸ್ಯೆಯನ್ನು ಇನ್ನು 15ದಿನಗಳಲ್ಲಿ ಪರಿಹರಿಸಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವರು. ವಿಶೇಷ ಭೂಸ್ವಾಧೀನಾಧಿಕಾರಿಯರೊಂದಿಗೆ ತಾವೂ ಕೂಡಚರ್ಚಿಸಿ ಅಡಚಣೆಯನ್ನು ನಿವಾರಿಸಿ ಮುಂದಿನಜೂನ್ ತಿಂಗಳಲ್ಲಿ ಮೊದಲ ಹಂತಕ್ಕೆ ನೀರುಹರಿಯಲಿದೆ. ಯೋಜನೆ ಪೂರ್ಣಗೊಳ್ಳವವರೆಗೂಅರಸೀಕೆರೆ ತಾಲೂಕಿನ ಮೂಲಕ ಚಿತ್ರದುರ್ಗಜಿಲ್ಲೆಯ ವಾಣಿ ವಿಲಾಸ ಸಾಗರ ಅಣೆಕಟ್ಟೆಗೆ ನೀರು ತುಂಬಿಸಲಾಗುವುದು ಎಂದು ಹೇಳಿದರು.
ನೀರಿಗಾಗಿ ಕಾಯುತ್ತಿದ್ದಾರೆ ಜನ: ಯೋಜನೆ ಅನುಷ್ಠಾನ ಬಹಳ ವಿಳಂಬವಾಗಿದ್ದು, ಕುಡಿಯುವನೀರು ಸಿಗುವ ಭರವಸೆಯಲ್ಲಿ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಜನರು ಜಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಯೋಜನೆ ಹಾದುಹೋಗುವ ಎಲ್ಲ ಪ್ರದೇಶಗಳಲ್ಲೂ ಕಾಮಗಾರಿಭರದಿಂದ ಸಾಗಿದ್ದು, ನೀರು ಸಂಗ್ರಹಣೆಗೆತುಮಕೂರಿನ ಜಿಲ್ಲೆ ಬೈರಗೊಂಡ್ಲು ಬಳಿ ಅಣೆಕಟ್ಟುನಿರ್ಮಾಣಕ್ಕೆ ಸುಮಾರು 10 ಗ್ರಾಮಗಳನ್ನು ಬೇರಡೆಸ್ಥಳಾಂತರಿಸಿ, ಅಣೆಕಟ್ಟು ನಿರ್ಮಿಸುವ ಕಾಮಗಾರಿಯು ಪ್ರಗತಿಯಲ್ಲಿದ್ದು ಇನ್ನೆರಡು ವರ್ಷದಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳಲಿದೆ ಎಂದರು.
ನೀರು ಹಂಚಿಕೆ: ಎತ್ತಿನಹೊಳೆ ಯೋಜನೆಯಲ್ಲಿ ಸರಾಸರಿ 24 ಟಿಎಂಸಿ ನೀರು ಲಭ್ಯತೆಯನ್ನುಖಾತರಿಪಡಿಸಿಕೊಳ್ಳಲಾಗಿದೆ. ಕಳೆದ ವರ್ಷ 28ಟಿಂಎಂಸಿ, ಈ ವರ್ಷ 24 ಟಿಎಂಸಿ ನೀರಿನ ಲಭ್ಯತೆಯನ್ನು ಗುರುತಿಸಲಾಗಿದೆ. ಕನಿಷ್ಠ 20 ಟಿಎಂಸಿ ನೀರು ಪ್ರತಿ ವರ್ಷ ಲಭ್ಯತೆ ಖಾತರಿಯಿದೆ. ಈಗಾಗಲೇ ಬಯಲು ಸೀಮೆ ಜಿಲ್ಲೆಗಳಾದ ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ,ಕೋಲಾರ, ರಾಮನಗರ ಜಿಲ್ಲೆಗಳಿಗೆ ನೀರು ಹಂಚಿಕೆಯೂ ಆಗಿದೆ ಎಂದು ಹೇಳಿದರು.
ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ರೇಷ್ಮೆ ಮಂಡಳಿ ಅಧ್ಯಕ್ಷ ಎಸ್.ಆರ್.ಗೌಡ, ವಿಶ್ವೇಶ್ವರಯ್ಯಜಲ ನಿಗಮದ ಮುಖ್ಯ ಎಂಜಿನಿಯರ್ ಮಾಧವ್,ಅಧೀಕ್ಷಕ ಎಂಜಿನಿಯರ್ ಶಿವರಾಂ, ಕಾರ್ಯಪಾಲಕ ಎಂಜಿನಿಯರ್ ಆನಂದ್‌ಕುಮಾರ್ ಹಾಜರಿದ್ದರು.