Advertisement
ಯೇಸುದಾಸ್ ಮತ್ತು ಪ್ರಭಾ ಯೇಸುದಾಸ್ ದಂಪತಿ ಜ.9ರಂದು ಕ್ಷೇತ್ರಕ್ಕೆ ಆಗಮಿಸಿ, ಮಹಾಲಕ್ಷ್ಮೀ ವಸತಿಗೃಹದಲ್ಲಿ ತಂಗಿದ್ದರು. ಶುಕ್ರವಾರ ಬೆಳಗಿನ ಜಾವ ದೇಗುಲಕ್ಕೆ ಆಗಮಿಸಿ, ಮೂಕಾಂಬಿಕೆಯನ್ನು ಧ್ಯಾನಿಸಿ, ಚಂಡಿಕಾ ಹೋಮ ಸಂಕಲ್ಪದಲ್ಲಿ ಪಾಲ್ಗೊಂಡರು. ಕುಟುಂಬಿಕರು ಉಪಸ್ಥಿತರಿದ್ದರು.
ಯೇಸುದಾಸ್ ಅವರು 30 ವರ್ಷಗಳಿಂದ ಮೂಕಾಂಬಿಕೆಯ ಸನ್ನಿಧಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತ ಬಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, “ದೇವಿಯ ಅನುಗ್ರಹದಿಂದ ಸಂಗೀತ ಕ್ಷೇತ್ರದಲ್ಲಿ ಕಿಂಚಿತ್ ಸಾಧನೆ ಮಾಡಿದ್ದೇನೆ. ಕೊಲ್ಲೂರು ಕ್ಷೇತ್ರವು ವಾಗೆªàವಿಯ ಸಾನ್ನಿಧ್ಯ ಹೊಂದಿರುವುದರಿಂದ ಸಂಗೀತ ಸಾಧಕರು ಆಕೆಗೆ ನಮಿಸಿ, ಭಜಿಸಿ ಮುಂದುವರಿದಾಗ ನವ ಶಾರೀರ, ಹೊಸ ಚೈತನ್ಯ ಪಡೆಯಲು ಸಾಧ್ಯವಾಗುತ್ತದೆ. ಯುವ ಗಾಯಕರು ಗುರು-ಹಿರಿಯರನ್ನು ಗೌರವಿಸುವುದರೊಡನೆ ಭಗವಂತನನ್ನು ಸ್ಮರಣೆ ಮಾಡುತ್ತ ಸಂಸ್ಕಾರಯುತ ಜೀವನ ಸಾಗಿಸಿದಲ್ಲಿ ಯಶಸ್ಸು ಕಂಡುಕೊಳ್ಳಲು ಸಾಧ್ಯ’ ಎಂದರು. ಸ್ವರ್ಣಮುಖೀಯಲ್ಲಿ ಸಂಗೀತಾರ್ಚನೆ:
ದೇಗುಲದ ಸ್ವರ್ಣಮುಖೀ ಮಂಟಪದಲ್ಲಿ ಸೇರಿದ್ದ ಸಂಗೀತಾರಾಧಕರ ಸಮ್ಮುಖದಲ್ಲಿ ಅನೇಕ ಸಂಗೀತ ಕಲಾವಿದರು ಯೇಸುದಾಸರ ಜನ್ಮದಿನದ ಸಲುವಾಗಿ ಶಾಸ್ತ್ರೀಯ ಭಕ್ತಿಗೀತೆಗಳನ್ನು ದಿನವಿಡೀ ಹಾಡಿದರು.