Advertisement

‘ಯೆಲ್ಲೋ ಗ್ಯಾಂಗ್’ ಚಿತ್ರ ವಿಮರ್ಶೆ: ಗ್ಯಾಂಗ್‌ವಾರ್‌ನಲ್ಲಿ ಹೊಸಬರ ಮಿಂಚು

02:57 PM Nov 12, 2022 | Team Udayavani |

ಭೂಗತ ಪ್ರಪಂಚ ಮತ್ತು ಅದರಲ್ಲಿ ನಡೆಯುವ ಚಟುವಟಿಕೆಗಳು ಯಾವಾಗಲೂ ತನ್ನೊಂದಿಗೆ ಒಂದಷ್ಟು ಕೌತುಕ, ರಹಸ್ಯ ಮತ್ತು ರೋಚಕತೆಗಳನ್ನು ಹುದುಗಿಸಿಟ್ಟುಕೊಂಡಿರುತ್ತದೆ. ಅಂತಹ ಒಂದಷ್ಟು ವಿಷಯಗಳನ್ನು ಹೆಕ್ಕಿ ತೆಗೆದು ಪ್ರೇಕ್ಷಕರ ಮುಂದೆ ತಂದಿರುವ ಸಿನಿಮಾ “ಯೆಲ್ಲೋ ಗ್ಯಾಂಗ್‌’.

Advertisement

ಮೊದಲೇ ಹೇಳಿದಂತೆ, ಇದೊಂದು ಕಂಪ್ಲೀಟ್‌ ಅಂಡರ್‌ವರ್ಲ್ಡ್ ಸಬೆjಕ್ಟ್ ಸಿನಿಮಾ. ಹಾಗಂತ, ಬಹುತೇಕ ಭೂಗತ ಕಥಾಹಂದರದ ಸಿನಿಮಾಗಳಲ್ಲಿ ಇರುವಂತೆ, ಕೇವಲ ರಕ್ತಪಾತವೊಂದೇ ಸಿನಿಮಾದ ಉದ್ದಕ್ಕೂ ಆವರಿಸಿಕೊಂಡಿಲ್ಲ. ಒಂದಷ್ಟು ಹೊಡೆದಾಟ ಮತ್ತು ಬಡಿದಾಟಗಳ ಜೊತೆಗೆ ಮನುಷ್ಯನ ದುರಾಸೆ, ಡ್ರಗ್ಸ್‌ ಮಾಫಿಯಾ, ಬ್ಲಾಕ್‌ ಮನಿ, ತಣ್ಣಗಿನ ಕ್ರೌರ್ಯ ಎಲ್ಲವೂ “ಯೆಲ್ಲೋ ಗ್ಯಾಂಗ್‌’ನಲ್ಲಿ ಅನಾವರಣವಾಗುತ್ತದೆ.

ಇನ್ನೊಂದು ವಿಶೇಷವೆಂದರೆ, ಒಂದು ಡಜನ್‌ ಗೂ ಹೆಚ್ಚು ಪಾತ್ರಗಳು ಸಿನಿಮಾದಲ್ಲಿರೂ ಈ ಸಿನಿಮಾದಲ್ಲಿ ಯಾರೂ ಕೂಡ ಹೀರೋ ಅಂತಿಲ್ಲ. ಇಲ್ಲಿ ಎಲ್ಲವೂ ಪಾತಕ ಲೋಕದಲ್ಲಿ ಸಿಲುಕಿಕೊಂಡ ಪಾತ್ರಗಳೇ ಆಗಿವೆ. ಆದರೆ ಪ್ರತಿಯೊಂದು ಪಾತ್ರಗಳಿಗೂ ಅದರದ್ದೇ ಆದ ಅಡ್ಡ ಹೆಸರು, ಮ್ಯಾನರಿಸಂಗಳು ನೋಡುಗರಿಗೆ ಒಂದಷ್ಟು ಮನರಂಜಿಸುತ್ತವೆ. ಒಂದು ಹಳೆಯದಾದ ಕಾರು, ಒಂದಷ್ಟು ಹಣದ ಕೈಚೀಲಗಳು, ಅದರ ಹಿಂದೆ ಬಿದ್ದ ಮೂರು ಗ್ಯಾಂಗಗಳು, ಹೀಗೆ ಹಣದ ಹಿಂದೆ ಬಿದ್ದವರು ಒಂದು ಸನ್ನಿವೇಶದಲ್ಲಿ ಮುಖಾಮುಖೀಯಾಗುತ್ತಾರೆ. ಮುಂದೇನಾಗುತ್ತದೆ ಎಂಬುದೇ ಸಿನಿಮಾದ ಕಥಾಹಂದರ.

ಕಥೆಗೆ ಅಗತ್ಯವಾದ ವಿಷಯಗಳನ್ನು ಹೊರತುಪಡಿಸಿ ಅನಗತ್ಯವಾಗಿ ಹಾಡು, ಫೈಟ್ಸು, ಐಟಂ ಸಾಂಗ್‌, ಡ್ಯಾನ್ಸ್‌ ಯಾವುದೂ ಇಲ್ಲದೆ. ಹೇಳಬೇಕಾಗಿರುವ ವಿಷಯವನ್ನು ಅಚ್ಚುಕಟ್ಟಾಗಿ ತೆರೆಮೇಲೆ ತರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಇನ್ನುಳಿದಂತೆ ನಟಿ ಅರ್ಚನಾ ಕೊಟ್ಟಿಗೆ ತಮ್ಮ ಪಾತ್ರದಲ್ಲಿ ಇಷ್ಟವಾಗು ತ್ತಾರೆ. ಬಹುತೇಕ ಎಲ್ಲಾ ಕಲಾವಿದರು ತೆರೆಮೇಲೆ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹೀಗಾಗಿ ಪಾತ್ರಪೋಷಣೆಯಲ್ಲೂ ಒಂದಷ್ಟು ಸಹಜತೆ ಕಾ ಬಹುದು. ಛಾಯಾಗ್ರಹಣ, ಹಿನ್ನೆಲೆ ಸಂಗೀತ ಸಿನಿಮಾದ ತಾಂತ್ರಿಕ ಹೈಲೈಟ್ಸ್‌ ಎನ್ನಬಹುದು. ಎಲ್ಲೂ ಅತಿರೇಕವಿಲ್ಲದ ಡಾರ್ಕ್‌ಶೇಡಿನ ಸಿನಿಮಾದಂತೆ ಕಾಣುವ “ಯೆಲ್ಲೋ ಗ್ಯಾಂಗ್‌’ ಥ್ರಿಲ್ಲರ್‌ ಸಿನಿಮಾಗಳ ಪ್ರೇಕ್ಷಕರಿಗೆ ಒಂದಷ್ಟು ಮನರಂಜನೆ ನೀಡಿ, ಇಷ್ಟವಾಗುವಂತಿದೆ.

Advertisement

ಜಿಎಸ್‌ಕೆ

Advertisement

Udayavani is now on Telegram. Click here to join our channel and stay updated with the latest news.

Next