Advertisement

ಅರಿಸಿನ ಕಾಳುಮೆಣಸಿನ ಸಮ್ಮಿಶ್ರಣ ಹಲವು ರೋಗಗಳಿಗೆ ರಾಮಬಾಣ

05:28 PM Apr 03, 2018 | |

ಅರಿಸಿನ ಕೇವಲ ಅಡುಗೆಗೆ ಮಾತ್ರ ಬಳಸುವ ವಸ್ತುವಲ್ಲ. ಹಲವಾರು ರೋಗಗಳಿಗೆ ಪರಿಣಾಮಕಾರಿಯಾಗಿರುವ ಔಷಧವೂ ಹೌದು. ಅರಿಸಿನದಲ್ಲಿರುವ ಕುರ್ಕುಮಿನ್‌ ಎಂಬ ಅತ್ಯಂತ ಆರೋಗ್ಯಕಾರಕ ಪೋಷಕಾಂಶವೇ ಈ ಹೆಗ್ಗಳಿಕೆಗೆ ಮೂಲ. ಇಂತಹುದ್ದೇ ಇನ್ನೊಂದು ವಸ್ತು ಕಾಳುಮೆಣಸು. ಇವೆರಡೂ ವಸ್ತುಗಳ ಸಮ್ಮಿಶ್ರಣ ಹಲವು ರೋಗಗಳಿಗೆ ರಾಮಬಾಣ ಎಂಬುದು ಈಗಾಗಲೇ ದೃಢಪಟ್ಟಿದೆ. ಅರಿಸಿನದಲ್ಲಿರುವ ಔಷಧೀಯ ಗುಣಗಳ ಪೂರ್ಣ ಪ್ರಯೋಜನ ಪಡೆಯಲು ಕಾಳುಮೆಣಸು ನೆರವಾಗುತ್ತದೆ.

Advertisement

ಅರಿಸಿನದಲ್ಲಿ ಅದ್ಭುತ ಔಷಧೀಯ ಗುಣಗಳಿದ್ದರೂ ಇವನ್ನು ಸುಲಭದಲ್ಲಿ ದೇಹ ಪಡೆದುಕೊಳ್ಳುವುದಿಲ್ಲ. ಏಕೆಂದರೆ ಇದರ ಪೋಷಕಾಂಶಗಳು ದೇಹಕ್ಕೆ ಮೂಲರೂಪದಲ್ಲಿ ಸಿಗುವ ಮುನ್ನವೇ ಜೀರ್ಣಕ್ರಿಯೆಯಲ್ಲಿ ಚಯಾಪಚಯ ಕ್ರಿಯೆಗೆ ಒಳಗೊಂಡು ಪರಿವರ್ತಿತಗೊಳ್ಳುತ್ತವೆ. ಆದರೆ ಇದರೊಂದಿಗೆ ಕಾಳುಮೆಣಸನ್ನು ಸೇವಿಸಿದರೆ ಅರಿಸಿನದ ಪ್ರಯೋಜನಗಳನ್ನು ದೇಹ ಪಡೆಯಲು ಸಾಧ್ಯವಾಗುತ್ತದೆ. 

ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಿಸಿ ಸ್ಥೂಲಕಾಯ ಹಾಗೂ ಮಧುಮೇಹ ಬಾರ ದಂತೆ ತಡೆಯುತ್ತದೆ. ಈ ಸಂಯೋಜನೆಯನ್ನು ನಿಯಮಿತವಾಗಿ ಸೇವಿಸುವ ಮೂಲಕ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ ಹಾಗೂ ಒಳ್ಳೆಯ ಕೊಲೆಸ್ಟ್ರಾಲ್‌ ಮಟ್ಟ ಹೆಚ್ಚುತ್ತದೆ.

ಉರಿಯೂತಕ್ಕೆ ಔಷಧ
ಅರಿಸಿನ ಮತ್ತು ಕಾಳುಮೆಣಸಿನ ಸೇವನೆಯಿಂದ ಉರಿಯೂತವನ್ನು ಕಡಿಮೆ ಮಾಡಬಹುದು. ಅಲ್ಲದೇ ಉರಿಯೂತದಿಂದ ಉಂಟಾಗುವ ಹಲವಾರು ತೊಂದರೆಗಳನ್ನು ನಿವಾರಿಸುತ್ತದೆ.  ನಮ್ಮ ದೇಹದ ರಕ್ತವನ್ನು ಸೋಸಿ ಕಶ್ಮಲಗಳನ್ನು ಹೊರಹಾಕುವಲ್ಲಿ ಯಕೃತ್‌ನ ಕಾರ್ಯ ಪ್ರಮುಖವಾಗಿದೆ. ಅರಿಸಿನವು ಈ ಕಶ್ಮಲಗಳು ದೇಹದಲ್ಲಿ ಉಳಿಯದಂತೆ ನೋಡಿಕೊ ಳ್ಳು ತ್ತದೆ ಮತ್ತು ಯಕೃತ್‌ನ ಆರೋಗ್ಯವನ್ನು ಕಾಪಾಡುತ್ತದೆ.

  ಪ್ರಸನ್ನ ಹೆಗ್ಡೆ ಊರಕೇರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next