Advertisement

Yellapur; ಅಕ್ರಮ ಮರ ಸಾಗಾಟ ಮಾಡುತ್ತಿದ್ದ ಓರ್ವ ಬಂಧನ, ಇನ್ನೋರ್ವ ಪರಾರಿ

11:35 PM Aug 18, 2023 | Team Udayavani |

ಯಲ್ಲಾಪುರ: ಅರಣ್ಯ ವಿಭಾಗದ ಇಡಗುಂದಿ ವಲಯದ ಬಳಗಾರ್ ಶಾಖೆ ಬೀರಗದ್ದೆ ಬೀಟ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರ ಕಡಿದು ಮಾಲು ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿ, ವಿಚಾರಣೆಯನ್ನು ಕೈಗೊಂಡು ಶುಕ್ರವಾರ ಇಡಗುಂದಿ ಗುಂಜೇಕುಂಬ್ರಿಯ ನಾಗರಾಜ ರಾಮ ಸಿದ್ದಿ(ಗಿಡ್ಡ ಸಿದ್ದಿ)ಎಂಬ ಆರೋಪಿಯನ್ನು ಬಂಧಿಸಲಾಗಿದೆ.

Advertisement

ಮತ್ತೊಬ್ಬ ಆರೋಪಿ ಇಡಗುಂದಿ ಸುಣಜೋಗದ ನಾರಾಯಣ ಸುಬ್ಬಾ ಸಿದ್ದಿ ಪರಾರಿಯಾಗಿದ್ದು ಶೋಧನಾ ಕಾರ್ಯ ನಡೆಸಿದ್ದಾರ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಉದ್ಯಮನಗರದಲ್ಲಿರುವ ಶ್ರೀ ಆರೋಗ್ಯ ಮಾತಾ ವುಡ್ ಇಂಡಸ್ಟ್ರಿಯ ಮೇಲೆ ದಾಳಿ ಮಾಡಿ ಪರಿಶೀಲಿಸಿದಾಗ ಕೊರೆದ ಸಾಗ ಜಾತಿಯ ಅಂದಾಜು 2 ಲಕ್ಷ ರೂ.ಮೌಲ್ಯದ 1.500 ಘ.ಮೀ.ನಗಗಳು ಸಿಕ್ಕಿದ್ದು ಅವುಗಳನ್ನು ಜಪ್ತಿಪಡಿಸಿ ಇಲಾಖೆಯ ವಶಕ್ಕೆ ಪಡೆಯಲಾಗಿದೆ.

ಇಂಡಸ್ಟ್ರಿಯ ಮಾಲಕ ವಿಲಿಯಂ ದಾಳಿ ಸಮಯದಲ್ಲಿ ಪರಾರಿಯಾಗಿದ್ದು ಇಂಡಸ್ಟ್ರಿಯನ್ನು ಮುಂದಿನ ಆದೇಶದವರೆಗೆ ಲಾಕೌಟ್ ಮಾಡಲಾಗಿದೆ.

ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಜಿ. ಹೆಗಡೆ ರವರ ಮಾರ್ಗದರ್ಶನದಲ್ಲಿ ಮಂಚಿಕೇರಿ ಉಪ ವಿಭಾಗದ ಸಹಾಯಕ ಅರಣ್ಯ ಸಂಕ್ಷಣಾಧಿಕಾರಿ ಹಿಮವತಿ ಭಟ್ ರವರ ಮುಂದಾಳತ್ವದಲ್ಲಿ ಇಡಗುಂದಿ ವಲಯದ ವಲಯ ಅರಣ್ಯಾಧಿಕಾರಿ ಶಿಲ್ಪಾ.ಎಸ್. ನಾಯ್ಕ್ ಹಾಗೂ ವಲಯದ ಸಿಬಂದಿಯವರು, ಮಂಚಿಕೇರಿ ವಲಯದ ವಲಯ ಅರಣ್ಯಾಧಿಕಾರಿ ಅಮಿತಕುಮಾರ ಚವ್ಹಾಣ ಹಾಗೂ ಸಿಬ್ಬಂದಿಯವರು ಕಾರ್ಯಾಚರಣೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next