Advertisement

ಕಾಮನ್ವೆಲ್ತ್‌ ಗೇಮ್ಸ್‌: ಮೊದಲ ಚಿನ್ನ ಗೆದ್ದ ಇಂಗ್ಲೆಂಡ್‌ನ‌ ಅಲೆಕ್ಸ್‌ ಯೀ

11:27 PM Jul 29, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಆತಿಥೇಯ ಇಂಗ್ಲೆಂಡ್‌ನ‌ ಟ್ರಯತ್ಲೀಟ್‌ ಅಲೆಕ್ಸ್‌ ಯೀ ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ನ ಮೊದಲ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು. ಅವರು ಪುರುಷರ ಟ್ರಯಥ್ಲಾನ್‌ ಸ್ಪರ್ಧೆಯಲ್ಲಿ ಈ ಸಾಧನೆಗೈದರು. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಯೀ ಬೆಳ್ಳಿ ಪದಕ ಜಯಿಸಿದ್ದರು.

Advertisement

3 ಕಠಿನ ಸ್ಪರ್ಧೆಗಳನ್ನು ಅಲೆಕ್ಸ್‌ ಯೀ 50 ನಿಮಿಷ, 34 ಸೆಕೆಂಡ್‌ಗಳಲ್ಲಿ ಪೂರ್ತಿಗೊಳಿಸಿದರು.

ನ್ಯೂಜಿಲ್ಯಾಂಡಿನ ಹೇಡನ್‌ ವೈಲ್ಡ್‌ ಬೆಳ್ಳಿ (50 ನಿಮಿಷ, 47 ಸೆಕೆಂಡ್‌), ಆಸ್ಟ್ರೇಲಿಯದ ಮ್ಯಾಥ್ಯೂ ಹೌಸರ್‌ ಬೆಳ್ಳಿ ಗೆದ್ದರು (50 ನಿಮಿಷ, 43 ಸೆಕೆಂಡ್‌). 2018ರ ಚಾಂಪಿಯನ್‌ ಹೆನ್ರಿ ಶೋಮ್ಯಾನ್‌ ಆರಂಭಕ್ಕೂ ಮೊದಲು ಸ್ಪರ್ಧೆಯಿಂದ ಹಿಂದೆ ಸರಿದರು.

Advertisement

Udayavani is now on Telegram. Click here to join our channel and stay updated with the latest news.

Next