Advertisement

ಮೇಕೆದಾಟು ಯೋಜನೆ : ಯಡಿಯೂರಪ್ಪ ಸ್ಟಾಲಿನ್ ಗೆ ಪತ್ರ ಬರೆದಿದ್ದೇ ತಪ್ಪು : ಸಿದ್ದರಾಮಯ್ಯ

01:52 PM Jul 05, 2021 | Girisha |

ಬೆಂಗಳೂರು : ಯಡಿಯೂರಪ್ಪ ಸ್ಟಾಲಿನ್ ಗೆ ಪತ್ರ ಬರೆದಿದ್ದೆ ತಪ್ಪು, ನಾವು ಡ್ಯಾಮ್ ಕಟ್ಟವುದಕ್ಕೆ ಅವರ ಅನುಮತಿ ಯಾಕೆ ಬೇಕು. ನಮ್ಮ ಕೆಲಸ ನಾವು ಮಾಡಬೇಕು. ಕೋರ್ಟ್ ಆದೇಶದಂತೆ ನಾವು ಕೆಲಸ ಮಾಡಬೇಕು. ಇವರು ಪತ್ರ ಬರೆದಿದ್ದಕ್ಕೆ ಸ್ಟಾಲಿನ್ ರಿಯಾಕ್ಟ್ ಮಾಡಿದ್ದಾರೆ. ಪತ್ರ ಬರೆದು ಅನುಮತಿ ಕೇಳಿದ್ರೆ ಯಾರು ಒಪ್ಪಲ್ಲ ಎಂದು ಮೇಕೆದಾಟು ಯೋಜನೆ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

Advertisement

ಡ್ಯಾಮ್ ಕಟ್ಟೋದರಿಂದ ಅವರ ಪಾಲಿನ ನೀರಿಗೆ ಸಮಸ್ಯೆ ಆಗಲ್ಲ. ನಮ್ಮ ಸರ್ಕಾರ ಇದ್ದಾಗ ನೀರಿನ ವಿಚಾರದಲ್ಲಿ ಪತ್ರ ಬರೆದು ಅನುಮತಿ ಕೇಳಿಲ್ಲ. ಸಿಎಂ ಜತೆ ವಿಪಕ್ಷಗಳು ಶಾಮೀಲು ಅನ್ನೋ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅಂತಹ ಭ್ರಷ್ಟಾಚಾರ ಸರ್ಕಾರದಲ್ಲಿ ಇವರೇಕೆ ಶಾಸಕನಾಗಿ ಮುಂದೂವರೆಯಬೇಕು. ಬಹಳ ದಿನದಿಂದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಆದ್ರೆ ಅಂತಹ ಕಡೆ ಶಾಸಕನಾಗಿ ಮುಂದೂವರೆದಿದ್ದು ಯಾಕೆ ಎಂದರು.

ನಮ್ಮ ಬಗ್ಗೆ ಮಾತನಾಡಕ್ಕೆ ಇವರಿಗೆ ಅಧಿಕಾರ ಇಲ್ಲ. ಸಂಸದೆ ಸುಮಲತಾ ಅವರನ್ನ ಅಡ್ಡವಾಗಿ ಮಲಗಿಸಿ ಎಂದು ಎಚ್ಡಿಕೆ ಹೇಳಕೆ ವಿಚಾರವಾಗಿ ನಾನು ರಿಯಾಕ್ಟ್ ಮಾಡಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next