Advertisement

ಯಡಿಯೂರಪ್ಪ ಸೇರಿದಂತೆ ಐವರ ಬಂಧನಕ್ಕೆ ಒತ್ತಾಯ

11:18 AM Aug 20, 2017 | |

ಬೆಂಗಳೂರು: ನಗರದ ಡಾ ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಎಲ್ಲ ಐವರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಕರ್ನಾಟಕ ಜನ ಸಾಮಾನ್ಯರ ವೇದಿಕೆ ಅಧ್ಯಕ್ಷ ಡಾ. ಡಿ.ಅಯ್ಯಪ್ಪ ಒತ್ತಾಯಿಸಿದ್ದಾರೆ.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದಾಖಲಾಗಿರುವ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಇದೀಗ ಎಫ್ಐಆರ್‌ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ.

ಡಿನೋಟಿಫೈ ಮಾಡಿಲ್ಲ ಎಂದು ವಾದಿಸುವ ಯಡಿಯೂರಪ್ಪ, ತಮ್ಮ ವಿರುದ್ಧ ಯಾರೇ ದೂರು ನೀಡಿದರೂ ಕೋರ್ಟ್‌ ಮೊರೆ ಹೋಗುತ್ತಾರೆ. ಅಕ್ರಮದಲ್ಲಿ ಭಾಗಿ ಆಗಿಲ್ಲ ಎಂದಾದರೆ ಎಸಿಬಿ ವಿಚಾರಣೆ ಎದುರಿಸಲಿ. ಮತ್ತೂಂದೆಡೆ ತಮ್ಮ ಪರ ವಕೀಲರನ್ನು ಎಸಿಬಿ ಕಳುಹಿಸಿ ದಾಖಲೆ ಸಲ್ಲಿಸಲು ಹತ್ತಾರು ದಿನ ಕಾಲವಕಾಶ ಕೋರಿದ್ದಾರೆ. ಇದರ ಉದ್ದೇಶವೇನು ಎಂಬುದನ್ನು ಎಂದು ಅವರು ಪ್ರಶ್ನಿಸಿದರು.

ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಡಿಎ ವಶಪಡಿಸಿಕೊಂಡಿದ್ದ 3,546 ಎಕರೆ ಜಮೀನಿನ ಪೈಕಿ 257 ಎಕರೆ ಜಮೀನು ಡಿನೋಟಿಫಿಕೇಷನ್‌ ಮಾಡಿ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಉಂಟು ಮಾಡಿದ್ದಾರೆ.

ಈ ಸಂಬಂಧ ಬಿಎಸ್‌ವೈ, ಬಿಡಿಎನ ಅಂದಿನ ಉಪ ಆಯುಕ್ತ ಗೌರಿಶಂಕರ್‌, ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಪ್ರೇಮಚಂದ್ರ, ಉಪ ಕಾರ್ಯದರ್ಶಿ ಬಸವರಾಜು, ಅಪರ ಮುಖ್ಯ ಕಾರ್ಯದರ್ಶಿ ಸುಬೀರ್‌ ಹರಿಸಿಂಗ್‌ ವಿರುದ್ಧ ಜೂನ್‌ 7ರಂದೇ ಎಸಿಬಿಗೆ ದೂರು ನೀಡಲಾಗಿತ್ತು. ಇದೀಗ ತನಿಖಾಧಿಕಾರಿಗಳು ಐವರ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ. 

Advertisement

ಮಧ್ಯವರ್ತಿಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ಅಕ್ರಮವಾಗಿ ಜಮೀನನನ್ನು ಭೂಸ್ವಾಧೀನದಿಂದ ಕೈಬಿಟ್ಟಿದ್ದಾರೆ. ಇದರಿಂದ ಯೋಜನೆ ಸ್ಥಗಿತಗೊಳ್ಳುವಂತಾಗಿದೆ. ಇದೇ ಅವಧಿಯಲ್ಲಿ ಆರಂಭಗೊಂಡ ಕೆಂಪೇಗೌಡ ಲೇಔಟ್‌ ನಿವೇಶನಗಳು ಸಾರ್ವಜನಿಕಗೆ ವಿತರಣೆ ಮಾಡಲಾಗುತ್ತಿದೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next