Advertisement
ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, “ಅಮಿತ್ ಶಾ ಅವರು ಕೇಂದ್ರ ಸರ್ಕಾರ ಕೊಟ್ಟ ಹಣದ ಲೆಕ್ಕ ಕೇಳಿದಾಗ ಕೊಡಬೇಕಾದುದು ನಿನ್ನ ಕರ್ತವ್ಯ, ಅದರ ಬದಲು ಅವರಾರು ಎಂದು ಕೇಳುತ್ತೀಯಾ? ಯಾವುದೇಪ್ರಜೆಗೆ ಲೆಕ್ಕ ಕೇಳುವ ಸಂಪೂರ್ಣ ಸ್ವಾತಂತ್ರ್ಯಇದೆ. ಜನ ಕೊಟ್ಟ ಹಣವನ್ನು ಲೂಟಿ ಮಾಡಲು ಅಲ್ಲಿ (ಮುಖ್ಯಮಂತ್ರಿ ಸ್ಥಾನ) ನಿನ್ನನ್ನು ಕೂರಿಸಿಲ್ಲ’ ಎಂದು ಕಿಡಿ ಕಾರಿದರು.
“ರಾಜ್ಯ ಸರ್ಕಾರದ ಲೆಕ್ಕ ಕೇಳಲು ಅಮಿತ್ ಶಾ ಯಾರು’ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರನ್ನು ಕೆ.ಎಸ್.ಈಶ್ವರಪ್ಪ “ಪತ್ನಿಗೆ ಹೊಡೆಯುವ ಕುಡುಕ ಗಂಡ’ನಿಗೆ ಹೋಲಿಸಿ, ವ್ಯಂಗ್ಯವಾಡಿದರು. ಪ್ರತಿಭಟನೆ ವೇಳೆ ಮಾತನಾಡಿದ ಈಶ್ವರಪ್ಪ, “ಪತ್ನಿ ತನ್ನ ಗಂಡನಿಗೆ ಬೆಳಗ್ಗೆ 100 ರೂ. ಕೊಡುತ್ತಾಳೆ. ಆ ಹಣದಲ್ಲಿ ಕುಡಿದು ಬರುವ ಆತ ಸಂಜೆ ಮತ್ತೆ ಹಣ ಕೇಳುತ್ತಾನೆ. ಆಗ ಪತ್ನಿ ಬೆಳಗ್ಗೆ ಕೊಟ್ಟ ಹಣ
ಏನಾಯಿತು ಎಂದು ಪ್ರಶ್ನಿಸಿದರೆ ಕುಡುಕ ಗಂಡ ಅದಕ್ಕೆ ಉತ್ತರಿಸುವ ಬದಲು ಪತ್ನಿಗೇ ಹೊಡೆಯುತ್ತಾನೆ. ಅಮಿತ್ ಶಾ ಅವರು ಲೆಕ್ಕ ಕೇಳಿದಾಗ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ ಇದೇ ರೀತಿ ಇದೆ’ ಎಂದು ವ್ಯಂಗ್ಯವಾಡಿದರು.