Advertisement

ಯಡಿಯೂರಪ್ಪ ದ್ರೋಹಿ-ಮೋಸಗಾರ: ಬಿ.ಆರ್‌.ಪಾಟೀಲ

10:47 AM Dec 06, 2017 | Team Udayavani |

ಕಲಬುರಗಿ: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರೇ ಮೋಸಗಾರ ಹಾಗೂ ನಂಬಿಕೆ ದ್ರೋಹಿ ಆಗಿದ್ದಾರೆ ಎಂದು ಶಾಸಕ ಬಿ.ಆರ್‌. ಪಾಟೀಲ ಪ್ರತ್ಯಾರೋಪಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳಂದ ಪಟ್ಟಣದಲ್ಲಿ ನಡೆದ ಪರಿವರ್ತನಾ ರ್ಯಾಲಿಯಲ್ಲಿ ತಮ್ಮ
ಹೆಸರನ್ನು ಪ್ರಸ್ತಾಪಿಸುತ್ತಾ ತಾನೊಬ್ಬ ನಂಬಿಕೆ ದ್ರೋಹಿ ಎಂಬುದಾಗಿ ಆರೋಪಿಸಿದ್ದಾರಲ್ಲದೇ ಅವರ ಹೆಸರಿನ ಮೇಲೆ
ಗೆದ್ದು ಬಂದು ದ್ರೋಹ ಎಸಗಲಾಗಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ. ಆದರೆ ಅವರ ಸ್ವ ಜಿಲ್ಲೆ ಶಿವಮೊಗ್ಗದಲ್ಲೇ
ಅವರಿಗೆ ಯಾರನ್ನು ಗೆಲ್ಲಿಸಲಿಕ್ಕೆ ಆಗಿಲ್ಲ. ಎಂದಾದ ಮೇಲೆ ಅವರ ಶಕ್ತಿ ಎಷ್ಟು ಎಂಬುದು ನಿರೂಪಿಸುತ್ತದೆ. ಅದನ್ನು
ಬಿಟ್ಟು ತಮ್ಮ ಗೆಲುವಿನ ಬಗ್ಗೆ ಎಲ್ಲೇ ಮೀರುವ ರೀತಿಯಲ್ಲಿ ಮಾತನಾಡಿರುವುದು ಶೋಭೆ ತರುವಂತದಲ್ಲ ಎಂದು
ಟೀಕಿಸಿದರು.

ಯಡಿಯೂರಪ್ಪ ಅವರ ಸುಗಂಧದ್ರವ್ಯ ಸಿಂಪರಣೆ ಮಾತ್ರ ಚುನಾವಣೆಯಲ್ಲಿ ಬಳಕೆಯಾಗಿದೆ. ಅವರು ಅಷ್ಟು ಶಕ್ತಿವಂತರಿದ್ದರೆ ಉದಾಸಿ ಅವರನ್ನೇ ಗೆಲ್ಲಿಸಲು ಆಗಲಿಲ್ಲ. ಕೆಜೆಪಿ ಕಟ್ಟಿದಾಗ ಮರಳಿ ಬಿಜೆಪಿಯನ್ನು ಸತ್ತರೂ ಸೇರುವುದಿಲ್ಲ. ಈ ಕುರಿತು ರಕ್ತದಲ್ಲಿ ಬರೆದುಕೊಡುವುದಾಗಿ ಘೋಷಿಸಿದ್ದರಲ್ಲದೇ ಜೈಲಿಗೆ ತಳ್ಳಿದ ಪಕ್ಷ ಎಂಬುದಾಗಿ ಟೀಕಿಸಿದ್ದರು. ಒಟ್ಟಾರೆ ಯಡಿಯೂರಪ್ಪ ನುಡಿದಂತೆ ನಡೆಯಲಿಲ್ಲ. ರಾತ್ರೋ ರಾತ್ರಿ ಪಲಾಯನ ಮಾಡಿದರು. ಅವರನ್ನು ನಂಬಿ ಲಕ್ಷಾಂತರ ಕಾರ್ಯಕರ್ತರು, ಅನೇಕ ಮುಖಂಡರು ಬೆನ್ನತ್ತಿ ಕೆಜೆಪಿಗೆ ಬಂದರು. ಚೂರಿ ಹಾಕಿದ ಬಿಜೆಪಿ ಎಂದು ಜರಿದ ಪಕ್ಷವನ್ನೇ ಪುನಃ ಸೇರ್ಪಡೆಯಾದರು. ಅವರೇ ಕೆಜೆಪಿಯನ್ನು ಕೈ ಬಿಟ್ಟು, ಬೆಂಬಲಿಗರನ್ನು ವಿಶ್ವಾಸಕ್ಕೆ
ತೆಗೆದುಕೊಳ್ಳದೇ ದ್ರೋಹ ಎಸಗಿದರು ಎಂದು ವಾಗ್ಧಾಳಿ ನಡೆಸಿದರು.

ತಮ್ಮಲ್ಲಿ ಬತ್ತಳಿಕೆ ಇವೆ: ಕೆಜೆಪಿಯಿಂದ ಬಿಜೆಪಿಗೆ ಮರಳಿ ಹೋಗುವ ಸಂದರ್ಭದಲ್ಲಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ತಮ್ಮೊಂದಿಗೆ ಮಾತನಾಡಿರುವುದನ್ನು ಎಂದಿಗೂ ಮರೆಯಲಾರೆ. ಏನು ಮಾತನಾಡಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವೆ. ಇನ್ನಷ್ಟು ಅವರ ವಿರುದ್ಧ ಬತ್ತಳಿಕೆ ತಮ್ಮ ಬಳಿ ಇವೆ ಎಂದು
ಪ್ರಕಟಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಲಗೊಂಚಿ ಎಂಬುದಾಗಿ ತಮ್ಮನ್ನು ಟೀಕಿಸಲಾಗಿದೆ. ಆದರೆ ತಾವೆಂದು ಯಾರ ಬಾಲಗೊಂಚಿಯೂ ಅಲ್ಲ. ರಾಮಕೃಷ್ಣ ಹೆಗಡೆ, ಎಸ್‌. ಆರ್‌. ಬೊಮ್ಮಾಯಿ ಅವರ ಅನುಯಾಯಿ. ಸಿದ್ದರಾಮಯ್ಯ 1977ರ ದಶಕದಿಂದ ಉತ್ತಮ ಸ್ನೇಹಿತರು. ಕ್ಷೇತ್ರದ ಕೆಲಸದ ಸಲುವಾಗಿ ಅವರ ಬಳಿ ಹೋಗಿರಬಹುದು. ಆದರೆ ತಮ್ಮ ಹಿನ್ನೆಲೆ ಏನು ಎಂಬುದರ ಟೀಕೆ ಮಾಡಿರುವುದು ಸಮಂಜಸವಲ್ಲ. ತಾವು ಎಂತವರು ಎಂಬುದು ಕ್ಷೇತ್ರದ ಜನತೆಗೆ ಸಂಪೂರ್ಣ ಮನವರಿಕೆಯಿದೆ. ಹೀಗಾಗಿ 2018ರ ಚುನಾವಣೆಯಲ್ಲೂ ಮತದಾರರ ಆಶೀರ್ವಾದ ಮೇರೆಗೆ ಮತ್ತೂಮ್ಮೆ ಗೆದ್ದು ಬರುವೆ ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಜಿಲ್ಲಾ ಪಂಚಾಯತ್‌ ಸದಸ್ಯ ಸಿದ್ಧರಾಮ ಪ್ಯಾಟಿ, ಎಪಿಎಂಸಿ ಅಧ್ಯಕ್ಷ ಶರಣಬಸಪ್ಪ ಭೂಸನೂರ, ಮುಖಂಡರಾದ ವಿಠ್ಠಲರಾವ ಪಾಟೀಲ, ವೀರಣ್ಣ ಬನಶೆಟ್ಟಿ, ಶರಣಗೌಡ ಪಾಟೀಲ, ವಿಜಯಕುಮಾರ, ಸುನೀಲ್‌, ಅರ್ಜುನ ಜಮಾದಾರ ಇದ್ದರು.

ಸಂಕಟದೊಂದಿಗೆ ಯಾತ್ರೆ ಶುರು: ಬಿಜೆಪಿ ಪರಿವರ್ತನೆಯಾತ್ರೆ ಸಂಕಟದೊಂದಿಗೆ ಶುರುವಾಗಿದೆ. ತುಮಕೂರಿನಲ್ಲಿಯೇ ಸೊಗಡು ಶಿವಣ್ಣ ಅಪಸ್ವರ ಎತ್ತಿದ್ದಲ್ಲದೇ ಬೆಳಗಾವಿಯಲ್ಲಿ ಮಾಜಿ ಶಾಸಕರೇ ಪಾಲ್ಗೊಳ್ಳದೇ ದೂರ ಉಳಿದರು. ಇನ್ನುಳಿದಂತೆ ಇಂಡಿಯಲ್ಲಿ ಮೈಕ್‌ನ್ನೇ ಕಿತ್ತೆಸೆದರು. ಕಲಬುರಗಿ ಜಿಲ್ಲೆಯಲ್ಲಿ ಬಣಗಳನ್ನು ನಿಭಾಯಿಸಲಿಕ್ಕೆ ಬಿಎಸ್‌ವೈ ಕಸರತ್ತು ನಡೆಸಿದ್ದೇ ನಡೆಸಿದ್ದು.
 ಬಿ.ಆರ್‌. ಪಾಟೀಲ, ಶಾಸಕ, ಆಳಂದ ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next