Advertisement
ಭಾರತೀಯ ವಾಹನ ತಯಾರಕರು ಈ ವರ್ಷದ ನವೆಂಬರ್ ವರೆಗೆ ಮಾರಾಟವಾದ ಕಾರುಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ಬನ್ನಿ ಹಾಗಾದರೆ ಈ ವರ್ಷ(2024) ಮಾರುಕಟ್ಟೆಗೆ ಬಂದ ಕಾರುಗಳಲ್ಲಿ ಯಾವ ಕಾರು ಹೆಚ್ಚು ಮಾರಾಟವಾಗಿದೆ ಎಂಬುದರ ವಿವರ ತಿಳಿದುಕೊಂಡು ಬರೋಣ ಬನ್ನಿ …
ಮಾರುತಿ ಸುಜುಕಿ ಬಲೆನೊ “ನವೆಂಬರ್ 2024 ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ” ಅಗ್ರಸ್ಥಾನ ಪಡೆದುಕೊಂಡಿದೆ ಎಂದು ಇತ್ತೀಚಿನ ಮಾರಾಟ ವರದಿ ಹೇಳುತ್ತದೆ. ಕಳೆದ 2 ತಿಂಗಳಿಂದ ನಿರಂತರವಾಗಿ ಹೆಚ್ಚು ಮಾರಾಟವಾಗುವ ಮೂಲಕ ಮೊದಲ ಸ್ಥಾನವನ್ನು ಅಲಂಕರಿಸಿಕೊಂಡಿದೆ.
Related Articles
Advertisement
ಮಾರುಕಟ್ಟೆಯಲ್ಲಿ ಮಾರಾಟವಾದ ಕಾರುಗಳಲ್ಲಿ ಹ್ಯುಂಡೈ ಕ್ರೆಟಾ ಎರಡನೇ ಸ್ಥಾನವನ್ನು ಅಲಂಕರಿಸಿದೆ, ಮಾರುತಿ ಸುಜುಕಿ ಕಳೆದ ವರ್ಷ(2023) 11, 814 ಕಾರುಗಳನ್ನು ಮಾರಾಟ ಮಾಡಿದ್ದು ಈ ವರ್ಷದ ನವೆಂಬರ್ ವೇಳೆಗೆ ಬರೋಬ್ಬರಿ 15, 452 ಕಾರುಗಳು ಮಾರಾಟವಾಗುವ ಮೂಲಕ ಎರಡನೇ ಸ್ಥಾನದಲ್ಲಿದೆ.
ಕೇವಲ 6.13 ಲಕ್ಷಕ್ಕೆ ಸಿಗುವ ಸೇಫ್ಟಿ ಫೀಚರ್ಸ್‌ಗಳಿಂದ ಕೂಡಿದ ಟಾಟಾ ಪಂಚ್ ಒಟ್ಟು 15, 435 ಕಾರುಗಳನ್ನು ಮಾರಾಟ ಮಾಡುವುದರೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷ, ಪಂಚ್ ಸುಮಾರು 14, 383 ಯೂನಿಟ್ ಗಳನ್ನು ಮಾರಾಟ ಮಾಡಿತ್ತು.
ಸುರಕ್ಷಿತ ಕಾರು ತಯಾರಿಕೆಗೆ ಹೆಸರುವಾಸಿಯಾದ ಟಾಟಾ ಮೋಟಾರ್ಸ್ ನ ನೆಕ್ಸಾನ್ ಕಾರು ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದು, ಈ ವರ್ಷ ಸುಮಾರು 15,329 ಕಾರುಗಳನ್ನು ಮಾರಾಟ ಮಾಡಿದೆ, ಸುರಕ್ಷತೆ, ತಂತ್ರಜ್ಞಾನವನ್ನು ಆಧರಿಸಿ ಕಾರು ಖರೀದಿಸುವವರಿಗೆ ನೆಕ್ಸಾನ್ ಸೂಕ್ತ ಆಯ್ಕೆಯಾಗಿದೆ.
ಭಾರತದಲ್ಲಿ ಮಾರಾಟವಾದ ಕಾರುಗಳಲ್ಲಿ ಮಾರುತಿ ಸುಜುಕಿ ಎರ್ಟಿಗಾ ಐದನೇ ಸ್ಥಾನದಲ್ಲಿದ್ದು ಕಳೆದ ವರ್ಷ 12,857 ಕಾರುಗಳನ್ನು ಮಾರಾಟ ಮಾಡಿದ್ದು, ಈ ವರ್ಷ 15,150 ಕಾರುಗಳನ್ನು ಮಾರಾಟ ಮಾಡಿದೆ. ಅದರಂತೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 2,293 ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ. ಅಲ್ಲದೆ ಏಳು ಜನ ಪ್ರಯಾಣಿಸಲು ಹೇಳಿ ಮಾಡಿಸಿದ ವಾಹನವಾಗಿದೆ.
ಭಾರತೀಯ ವಾಹನ ತಯಾರಕರು ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಮಾರುತಿ ಸುಜುಕಿ ಬ್ರೆಝಾ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 13, 393 ಕಾರುಗಳನ್ನು ಮಾರಾಟ ಮಾಡಿದ್ದ ಮಾರುತಿ ಸುಜುಕಿ ಈ ವರ್ಷ 14, 918 ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ.
8. 34 ಲಕ್ಷದಿಂದ ಆರಂಭವಾಗುವ ಕಾರು ವಿವಿಧ ಮಾದರಿಯಲ್ಲಿ ಲಭ್ಯವಿದೆ.
SUV ಮಾದರಿಯ ಕಾರುಗಳಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ ಕಾರು ಮಾರುಕಟ್ಟೆಯಲ್ಲಿ ಹೆಚ್ಚು ಸುದ್ದಿ ಮಾಡುತ್ತಿದ್ದು ಮಾರುಕಟ್ಟೆಯಲ್ಲಿ ಏಳನೇ ಸ್ಥಾನವನ್ನು ಅಲಂಕರಿಸಿದೆ. ಆಕರ್ಷಕ ವಿನ್ಯಾಸ, ಕಡಿಮೆ ನಿರ್ವಹಣೆ ವೆಚ್ಚ, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿರುವ ಫ್ರಾಂಕ್ಸ್ ಕಳೆದ ವರ್ಷ(2023) ಕೇವಲ 9,867 ಕಾರುಗಳನ್ನು ಮಾರಾಟ ಮಾಡಿದ್ದ ಮಾರುತಿ ಸುಜುಕಿ ಈ ವರ್ಷ (2024) 14, 882 ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಮುಂದುವರೆಯುತ್ತಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾರುತಿ ಸುಜುಕಿ ಸ್ವಿಫ್ಟ್ ಕಡಿಮೆ ಮಾರಾಟವಾಗಿದ್ದರೂ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಕಳೆದ ವರ್ಷ 15, 311 ಕಾರುಗಳನ್ನು ಮಾರಾಟ ಮಾಡಿದ್ದ ಮಾರುತಿ ಸುಜುಕಿ ಈ ವರ್ಷದ ನವೆಂಬರ್ ವೇಳೆಗೆ 14, 737 ಕಾರುಗಳನ್ನು ಮಾರಾಟ ಮಾಡಿದೆ.
ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ವ್ಯಾಗನ್ ಆರ್ ಒಂಬತ್ತನೇ ಸ್ಥಾನವನ್ನು ಅಲಂಕರಿಸಿದೆ. ಈ ವರ್ಷ 13, 982 ಕಾರುಗಳನ್ನು ಮಾರಾಟ ಮಾಡಿದೆ, ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ.
ಏಳು ಅಥವಾ ಒಂಬತ್ತು ಮಂದಿ ಕುಳಿತು ಪ್ರಯಾಣಿಸಬಹುದಾದ ಮಹೀಂದ್ರಾ ಸ್ಕಾರ್ಪಿಯೊ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನವನ್ನು ಪಡೆದಿದ್ದು, ಇದು ಈ ವರ್ಷದ ನವೆಂಬರ್ ವೇಳೆಗೆ 12,704 ಕಾರುಗಳನ್ನು ಮಾರಾಟ ಮಾಡಿದೆ.