Advertisement

ಸೊಲ್ಲಾಪುರದಲ್ಲಿ ಯಾತ್ರಿ ನಿವಾಸ

03:33 PM Jul 10, 2017 | |

ವಿಜಯಪುರ: ಸೊಲ್ಲಾಪುರದಲ್ಲಿ ಕರ್ನಾಟಕದ ಪ್ರವಾಸಿಗರಿಗಾಗಿ ನಮ್ಮ ಸರ್ಕಾರದಿಂದ ಯಾತ್ರಿ ನಿವಾಸ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ. ಪಾಟೀಲ ಭರವಸೆ ನೀಡಿದರು.

Advertisement

ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಭೇಟಿ ನೀಡಿ ಸಿದ್ದರಾಮೇಶ್ವರ ಶರಣರ ಕ್ಷೇತ್ರ ದರ್ಶನ ಪಡೆದು, ದೇವಸ್ಥಾನ ಪಂಚಕಮೀಟಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಶಿವಯೋಗಿ ಸಿದ್ಧರಾಮ ಶರಣರ ಸಂಪೂರ್ಣ ಇತಿಹಾಸದ ಕುರಿತು ಆಳವಾದ ಸಂಶೋಧನೆ
ನಡೆಸುವ ಅಗತ್ಯತೆ ಇದೆ. ಸಿದ್ದರಾಮ ಶರಣರ ಕಾಯಕ ತತ್ವದ ಬಗ್ಗೆ ಎಲ್ಲರಿಗೂ ಮನವರಿಕೆ ಇದೆ. 12ನೇ ಶತಮಾನದಲ್ಲಿಯೇ ಕೆರೆ, ಕಟ್ಟೆಗಳನ್ನು ನಿರ್ಮಿಸಿ ಹಲವಾರು ಜನಪರ ಕಾರ್ಯಗಳು ಇಂದಿನವರಿಗೆ ಮಾದರಿ ಎಂದರು.

ಅವರು ಈ ಕಾರ್ಯವನ್ನು ಸ್ವತಃ ಮಾಡಿದಲ್ಲದೇ ಕಪಿಲಸಿದ್ದ ಮಲ್ಲಿಕಾರ್ಜುನ ಅಂಕಿತದಲ್ಲಿ ಬರೆದಿರುವ ವಚನಗಳನ್ನು ಡಾ| ಫ.ಗು. ಹಳಕಟ್ಟಿ ಸಂಪಾದಿಸಿದ್ದಾರೆ. ಬಿಎಲ್‌ಡಿಇ ಸಂಸ್ಥೆ ಹೊರತಂದಿರುವ ಸಮಗ್ರ ಸಂಪುಟಗಳಲ್ಲಿ ಸಿದ್ದರಾಮನ ವಚನಗಳು ಸೇರಿವೆ. ಇದೇ
ಹಿನ್ನೆಲೆ ನೆಲೆ ಇಟ್ಟುಕೊಂಡು ಸಿದ್ದರಾಮನ ಕುರಿತು ಆಳ ಅಧ್ಯಯನದ ಅಗತ್ಯತೆ ಇದೆ ಎಂದರು. 

ಅಖೀಲ ಭಾರತ ವೀರಶೈವ ಮಹಾಸಭೆಯನ್ನು ಹುಟ್ಟು ಹಾಕಿರುವ ಸಿರಸಂಗಿ ಲಿಂಗರಾಜರ ವಂಶಸ್ಥನಾಗಿರುವ ನನಗೆ ಶರಣ ತತ್ವಕ್ಕಾಗಿ ದುಡಿದ ಹಲವಾರು ಮಹನೀಯರನ್ನು ಪೂರ್ಣವಾಗಿ ನಾವು ಅಭ್ಯಸಿಸಿಲ್ಲ. ಸಿದ್ದರಾಮ ಶರಣರು ವಿಜಯಪುರ-ಸೊಲ್ಲಾಪುರದ
ಆರಾಧ್ಯದೈವವೂ ಹೌದು ಎಂದರು. ಸೊಲ್ಲಾಪುರ ಜಿಲ್ಲಾ ಉಸ್ತುವಾರಿ ಸಚಿವ ಸುಭಾಷ್‌ ದೇಶಮುಖ, ದೇವಸ್ಥಾನದ ಪ್ರಧಾನ
ಅರ್ಚಕ ಬಸವರಾಜಶಾಸ್ತ್ರೀ ಹಿರೇಮಠ, ಕಾರಬಾರಿ ವಾಕಳೆ, ವಿಶ್ವನಾಥ ಲಬ್ಟಾ, ರಾಜಶೇಖರ ಶಿವಧಾರೆ, ಪ್ರಾಚಾರ್ಯ ನಾಡಗೌಡ, ಡಾ| ಚನಗೌಡ ಹಾವಿನಾಳೆ, ಡಾ| ಬಸವರಾಜ ಬಗಲೆ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರವಿಗೌಡ ಪಾಟೀಲ, ಸೊಲ್ಲಾಪುರ ಜಿಲ್ಲಾ ಕಾಂಗ್ರೆಸ್‌ 
ಮಾಜಿ ಅಧ್ಯಕ್ಷ ಸಂತೋಷ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next