Advertisement

ಯತ್ನಾಳ್ ಹೇಳಿರುವುದು ತಪ್ಪು, ಅವರೇ ಸ್ಪಷ್ಟೀಕರಣ ನೀಡಬೇಕು: ಸಿ.ಟಿ.ರವಿ

02:32 PM May 07, 2022 | Team Udayavani |

ಬೆಂಗಳೂರು: ಸಿಎಂ ಸ್ಥಾನಕ್ಕೆ 2,500 ಕೋಟಿ ಎಂಬ ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಡಿ. ಯತ್ನಾಳ್ ಹೇಳಿರುವುದು ತಪ್ಪು. ವಿಪಕ್ಷಗಳಿಗೆ ಈ ಹೇಳಿಕೆಗಳು ಆಹಾರವಾಗಬಹುದು. ಅವರೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ‌ ಆಯ್ಕೆಯ ವೇಳೆ ಅನೇಕರಿದ್ದರು. ಎಲ್ಲಾ ಶಾಸಕರು ಉಪಸ್ಥಿತಿರಿದ್ದರು. ಯಾರನ್ನೂ ಮರೆಮಾಚಿ ಸಿಎಂ ಆಯ್ಕೆ ಮಾಡಿಲ್ಲ. ಕೆಲವರು ಸಂತೆ ಮಾತನಾಡುತ್ತಾರೆ. ಬೇರೆ ಪಕ್ಷದವರ ದಾರಿ ತಪ್ಪಿಸಲು ಈ ರೀತಿ ಹೇಳಿರಬಹುದು ಎಂದರು.

ತಪ್ಪು ಅಭಿಪ್ರಾಯಕ್ಕೆ ಯತ್ನಾಳ್ ಅವರೇ ಸ್ಪಷ್ಟನೆ ನೀಡಲಿ. ಇದು ಪಕ್ಷ ಹಾಗೂ ವೈಯಕ್ತಿಕವಾಗಿ ಒಳಿತು. ಮೇಲಿರುವ ನಾಯಕತ್ವ ಹೇಗಿದೆಯೆಂದು ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತರಿಗೂ ಗೊತ್ತು. ಕಾರ್ಯಕರ್ತರು ಅದಕ್ಕೆ ತಲೆಕೆಡಿಸಿಕೊಳ್ಳಲ್ಲ ಎಂದರು.

ಸಚಿವ ಸಂಪುಟ ವಿಸ್ತರಣೆ ಸಿಎಂ ವಿವೇಚನಾ ಅಧಿಕಾರ. ಪಕ್ಷದ ಜೊತೆ ಸಮಾಲೋಚನೆ ಮಾಡಿ‌ ಅಭಿಪ್ರಾಯ ಪಡೆದು ಸ್ವಯಂ ನಿರ್ಣಯ ಮಾಡಬೇಕು. ಒಂದೇ ವಿಚಾರ ಹೇಳುದಂದರೆ ಎಲ್ಲರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಸ್ವತಂತ್ರವಾಗಿ ನಿರ್ಣಯ ಮಾಡಬೇಕು ಎಂದರು.

ಇದನ್ನೂ ಓದಿ:ಕರ್ತವ್ಯ ಲೋಪ: ಡಿಎಸ್ಪಿ, ಇನ್ಸಪೆಕ್ಟರ್, ಇಬ್ಬರು ಪಿಎಸ್ಐ ಸೇರಿ 12 ಪೊಲೀಸ್ ಸಿಬ್ಬಂದಿ ಅಮಾನತು

Advertisement

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಊಹಾಪೋಹಕ್ಕೆ ಬೆಲೆ ಕೊಡುವ ಅವಶ್ಯಕತೆ ಇಲ್ಲ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಪೂರ್ಣಿಮಾ, ಅಶೋಕ್ ಎಲ್ಲರೂ ಸರ್ವಾನುಮತ ಪಡೆದು ಸಿಎಂ ಮಾಡಲಾಗಿದೆ. ಮಾಧ್ಯಮದಲ್ಲಿ ಬೆಂಕಿ ಇಲ್ಲದೆ ಒಮ್ಮೊಮ್ಮೆ ಹೊಗೆ ಆಡಲಿದೆ. ಸಮಾಲೋಚನೆ ಮಾಡುವುದು ಸ್ವಾಭಾವಿಕ ಎಂದರು.

ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತನಿಖೆ ಹಂತದಲ್ಲಿ ಯಾರು ನಿರಪರಾಧಿ ಎಂದೂ ಹೇಳಲ್ಲ, ತಪ್ಪಿತಸ್ತರು ಎಂದಲೂ ಹೇಳಲ್ಲ. ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಿಎಂ‌ ಹೇಳಿದ್ದಾರೆ. ತನಿಖೆ ನಡೆಯುತ್ತಿದೆ ಎಲ್ಲವೂ ಹೊರಗೆ ಬರಲಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತಪ್ಪಿತಸ್ತರಿಗೆ ಶಿಕ್ಷೆ ಆಗಲಿದೆ ಎಂದರು.

ಮಂಡ್ಯದಲ್ಲಿ ಯುವ ನಾಯಕತ್ವ ವಿಚಾರವಾಗಿ ಮಾತನಾಡಿ, ಮಂಡ್ಯ ಗೆಲ್ಲದೆ ಬಿಜೆಪಿಗೆ ಗೆಲುವೇ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಮಂಡ್ಯವನ್ನು ಬಿಜೆಪಿ ಭದ್ರಕೋಟೆ ಮಾಡಿಕೊಳ್ಳಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next