Advertisement

ಕ್ರೀಸಿಗೆ ಹೋಗುವ ಭರದಲ್ಲಿ ಬಿದ್ದ ಭಾಟಿಯಾ: ಬಿದ್ದು ಬಿದ್ದು ನಕ್ಕ ಸ್ಮೃತಿ, ಮಂಧನಾ

11:28 AM Aug 09, 2022 | Team Udayavani |

ಬರ್ಮಿಂಗಂ: ಸೋಮವಾರ ಮುಕ್ತಾಯವಾದ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿದೆ. ವನಿತಾ ಕ್ರಿಕೆಟ್ ಕೂಟದಲ್ಲೂ ಫೈನಲ್ ತಲುಪಿದ್ದ ಭಾರತ ತಂಡ ಬೆಳ್ಳಿ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ ರೋಚಕ ಫೈನಲ್ ನಲ್ಲಿ ಭಾರತ ತಂಡ ಒಂಬತ್ತು ರನ್ ಅಂತರದ ಸೋಲನುಭವಿಸಿತು.

Advertisement

ಆಸೀಸ್ ನೀಡಿದ್ದ 162 ರನ್ ಗುರಿ ಬೆನ್ನತ್ತಿದ ಭಾರತ ತಂಡ ಕೊನೆಯಲ್ಲಿ ಎಡವಿತು. ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಯಾಸ್ತಿಕಾ ಭಾಟಿಯಾ ಅವರು ಡಗೌಟ್ ನಿಂದ ಹೊರಡುತ್ತಿದ್ದಂತೆ ಬಿದ್ದರು.

ಆಟಗಾರರು ಕುಳಿತಲ್ಲಿ ಎದುರಿಗಿದ್ದ ಜಾಹೀರಾತು ಫಲಕವನ್ನು ದಾಟಿ ಮೈದಾನಕ್ಕೆ ಬರಲು ಯಾಸ್ತಿಕಾ ಮುಂದಾದರು. ಆದರೆ ಈ ಪ್ರಯತ್ನದಲ್ಲಿ ಯಾಸ್ತಿಕಾ ಎಡವಿ ಬಿದ್ದರು. ಇದನ್ನು ಕಂಡು ನಾಯಕಿ ಹರ್ಮನ್ ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧನಾ ಸೇರಿ ಭಾರತೀಯ ಆಟಗಾರರು ಬಿದ್ದು ಬಿದ್ದು ನಕ್ಕರು.

ಇದನ್ನೂ ಓದಿ:ಇದು ನನಗೆ ಬ್ರೇಕ್‌ ಕೊಡುವ ಸಿನಿಮಾ: ಗಾಳಿಪಟ-2 ಚೆಲುವೆ ವೈಭವಿ ಮಾತು…

ಫೈನಲ್ ಪಂದ್ಯದಲ್ಲಿ ಮೊದಲ ಆಡುವ ಬಳಗದಲ್ಲಿ ಯಾಸ್ತಿಕಾ ಸ್ಥಾನ ಪಡೆದಿರಲಿಲ್ಲ. ಆದರೆ ಮೊದಲ ಇನ್ನಿಂಗ್ಸ್ ವೇಳೆ ಕೀಪರ್ ತಾನಿಯಾ ಭಾಟಿಯಾ ಗಾಯಗೊಂಡ ಕಾರಣ ಕಂಕಶನ್ ನಿಯಮದ ಪ್ರಕಾರ ಯಾಸ್ತಿಕಾ ಭಾಟಿಯಾ ಅವಕಾಶ ಗಿಟ್ಟಿಸಿಕೊಂಡರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next