Advertisement

ಕಾನೂನು ನೆರವು ತಿರಸ್ಕರಿಸಿದ ಯಾಸಿನ್‌ ಮಲಿಕ್‌

07:12 PM Aug 22, 2022 | Team Udayavani |

ಜಮ್ಮು: ಐಎಎಫ್ ನ ನಾಲ್ವರು ಹಿರಿಯ ಅಧಿಕಾರಿಗಳನ್ನು ಹತ್ಯೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜೈಲಲ್ಲಿ ಇರುವ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್‌ ಮಲಿಕ್‌ ತನಗೆ ನೀಡಲಾಗಿರುವ ಕಾನೂನು ನೆರವು ತಿರಸ್ಕರಿಸಿದ್ದಾನೆ.

Advertisement

ಜತೆಗೆ ಖುದ್ದಾಗಿಯೇ ಕೋರ್ಟ್‌ ಹಾಲ್‌ನಲ್ಲಿ ವಿಚಾರಣೆ ನಡೆಯಬೇಕು ಎಂದು ಪಟ್ಟುಹಿಡಿದಿದ್ದಾನೆ.

1990ರಲ್ಲಿ ಐಎಎಫ್ ನ ನಾಲ್ವರು ಹಿರಿಯ ಅಧಿಕಾರಿಗಳನ್ನು ಹತ್ಯೆ ಮಾಡಿದ ಆರೋಪ ಆತನ ಮೇಲೆ ಇದೆ. ಉಗ್ರಗಾಮಿಗಳಿಗೆ ವಿತ್ತೀಯ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ನವದೆಹಲಿಯ ತಿಹಾರ್‌ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next