ಹೊಸಪೇಟೆ: ನಗರದ ರೈಲ್ವೆ ನಿಲ್ದಾಣದಲ್ಲಿ ಎಂಟು ಗಂಟೆಗೂ ಹೆಚ್ಚು ಕಾಲ ತಂಗುವ ಯಶವಂತಪುರ ರೈಲುಗಾಡಿಯನ್ನು ದಾವಣಗೆರೆವರಿಗೆ ಓಡಿಸಲು ಒತ್ತಾಯಿಸಿ, ಮಠಾಧೀಶರ ಧರ್ಮಪರಿಷತ್ ನೇತೃತ್ವದಲ್ಲಿ ಮಠಾಧೀಶರು, ಗುರುವಾರ ರೈಲ್ವೇ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಹೊಸಪೇಟೆ ಮತ್ತು ದಾವಣಗೆರೆಯಿಂದ ಏಕಕಾಲಕ್ಕೆ ಎರಡು ಕಡೆಯಿಂದ ಬೆಳಗ್ಗೆ 7ಗಂಟೆಗೆ ರೈಲು ಸಂಚಾರ ಆರಂಭಿಸಬೇಕೆಂದು ನಂದೀಪುರ ದೊಡ್ಡಬಸವೇಶ್ವರ ಮಠದ ಮಹೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮಠಾಧಿಧೀಶರು ಮನವಿ ಸಲ್ಲಿಸಿದರು.
ಇದನ್ನೂ ಓದಿ : ‘ಯುಪಿಎಸ್ ಸಿ ಹೆಚ್ಚುವರಿ ಪರೀಕ್ಷೆಗೆ ಅವಕಾಶವಿಲ್ಲ’ ಸುಪ್ರೀಂ ಕೋರ್ಟಿಗೆ ಕೇಂದ್ರ ಹೇಳಿಕೆ
ಹಗರಿಬೊಮ್ಮನಹಳ್ಳಿ ಕೊಟ್ಟೂರು, ಹರಿಹರ ಮೂಲಕ ದಾವಣಗೆರೆತಲುಪುವ ಮಾರ್ಗ ಇದಾಗಿದ್ದು, ಸದರಿ ಗಾಡಿಯು ಪ್ರತಿದಿನ ಬೆಳಗ್ಗೆ 7:30ಕ್ಕೆ ಹೊಸಪೇಟೆ ನಗರಕ್ಕೆ ಬಂದು ತಲುಪುತ್ತದೆ. ಸಂಜೆ ಐದು ಗಂಟೆಯ ವರೆಗೆ ಹೊಸಪೇಟೆ ನಿಲ್ದಾಣದಲ್ಲಿ ನಿಲ್ಲುವ ಈ ಗಾಡಿಯನ್ನದಾವೆರೆಯವರಿಗೆ ಓಡಿಸಿದರೆ ಇಲ್ಲಿನ ಜನ ಸಾಮಾನ್ಯರಿಗೂ ಅನುಕೂಲ ಆಗಲಿದೆ ಎಂದು ಕೇಂದ್ರ ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ ಶ್ರೀನಿವಾಸ್ ರೆಡ್ಡಿ ಅವರ ಮೂಲಕ ರೈಲ್ವೆಇಲಾಖೆಗೆ ಮನವಿ ಸಲ್ಲಿಸಿದರು. ಇದೇ ವೇಳೆ ಗಾಡಿ ಸಂಖೆ… (56529/56530) ಹೊಸಪೇಟೆ, ಕೊಟ್ಟೂರು, ದಾವಣಗೇರಿ ರೈಲನ್ನು ಪುನರ್ ಆರಂಭ ಮಾಡಬೇಕು ಎಂದು ಮನವಿ ಮಾಡಿದರು.
ರೈಲ್ವೇ ಪ್ರಯಾಣಿಕರ ಸಲಹಾ ಸಮಿತಿಯ ಸದಸ್ಯ ಅರವಿಂದ್ ಜಾಲಿ ಇದ್ದರು.
ಇದನ್ನೂ ಓದಿ : ನಾಳೆ ಕಲಬುರಗಿಯಲ್ಲಿ ಶಿವಾಚಾರ್ಯರ ಸಮಾವೇಶ