Advertisement

ಗೋವಾ ಸಿಎಂ ಜೊತೆ ಯಶ್ ದಂಪತಿ : ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ರಾಕಿ ಬಾಯ್ ?

05:22 PM May 04, 2022 | Team Udayavani |

ಪಣಜಿ : ಕೆಜಿಎಫ್-2 ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೇ ಸ್ಯಾಂಡಲ್​ವುಡ್ ಜನಪ್ರೀಯ ನಟ ರಾಕಿಂಗ್ ಸ್ಟಾರ್ ಯಶ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ಎಂಬ ಚರ್ಚೆ ಶುರುವಾಗತೊಡಗಿದೆ ಇದಕ್ಕೆ ಕಾರಣ ಯಶ್ ದಂಪತಿ ಗೋವಾ ಮುಖ್ಯಮಂತ್ರಿ ಭೇಟಿಯಾಗಿರುವುದು.

Advertisement

ಕೆಜಿಎಫ್-2 ಸಿನೆಮಾ ದೇಶಾದ್ಯಂತ ಪ್ರೇಕ್ಷಕರ ಮನ ಗೆದ್ದಿದೆ. ರಾಕಿಂಗ್ ಸ್ಟಾರ್ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಕಳೆದ ಕೆಲ ದಿನಗಳಿಂದ ಗೋವಾದಲ್ಲಿ ವಾಸ್ತವ್ಯ ಹೂಡಿದ್ದಾರೆ. ಬುಧವಾರ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರನ್ನು ಭೇಟಿ ಮಾಡಿದ ಯಶ್ ದಂಪತಿ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.

ಪುಷ್ಫ ಮತ್ತು ಆರ್ ಆರ್ ಆರ್ ಚಿತ್ರದ ನಂತರ ಕೆಜಿಎಫ್-2 ಭಾರತದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೆಜಿಎಫ್-2 ಗೋವಾದಲ್ಲಿಯೂ ಹಲವು ಚಿತ್ರಮಂದಿರಗಳಲ್ಲಿ ಅದ್ದೂರಿಯ ಪ್ರದರ್ಶನವನ್ನು ಕಾಣುತ್ತಿದೆ. ಇವೆಲ್ಲದರ ನಡುವೆ ಗೋವಾ ಮುಖ್ಯಮಂತ್ರಿಗಳನ್ನು ಭೇಟಿಯಾಗಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ಕೊರಟಗೆರೆಯಲ್ಲಿ ಎಸಿಬಿ ಮಿಂಚಿನ ಕಾರ್ಯಾಚರಣೆ: ಗ್ರಾ. ಪಂ. ಕಾರ್ಯದರ್ಶಿ ಬಲೆಗೆ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next