Advertisement

ಹಾಲಿವುಡ್ ಡೈರೆಕ್ಟರ್ ಜೊತೆ ಕಾಣಿಸಿಕೊಂಡ ಯಶ್; ಏನಿದು ಕಲಾಶ್ನಿಕೋವ್ ಗನ್ ಕಥೆ?

04:15 PM Sep 29, 2022 | Team Udayavani |

ಕೆಜಿಎಫ್ 2 ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ರಾಕಿಂಗ್ ಸ್ಟಾರ್ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ಕಲಾವಿದರಾಗಿದ್ದಾರೆ. ಚಿತ್ರದಲ್ಲಿ ರಾಕಿ ಭಾಯ್ ( ಯಶ್ ನಿರ್ವಹಿಸಿದ್ದ ಪಾತ್ರ) ತನ್ನ ವಿರೋಧಿ ಅಧೀರನನ್ನು ಎದುರಿಸಲು ಬಳಸಿದ್ದ ಕಲಾಶ್ನಿಕೋವ್ ಗನ್ ಕೂಡಾ ಸಖತ್ ಫೇಮಸ್ ಆಗಿತ್ತು. ಇದೀಗ ಯಶ್ ಮತ್ತೊಮ್ಮೆ ಕಲಾಶ್ನಿಕೋವ್ ಗನ್ ಕುರಿತಾಗಿ ಮಾತನಾಡಿದ್ದಾರೆ.

Advertisement

ಅಮೆರಿಕಾ ಪ್ರವಾಸದಲ್ಲಿರುವ ಯಶ್ ಅವರು ಹೆಸರಾಂತ ನಿರ್ದೇಶಕ, ಮಾರ್ಶಲ್ ಆರ್ಟ್ ಕಲಾವಿದ, ಸ್ಟಂಟ್‌ಮ್ಯಾನ್ ಜೆಜೆ ಪೆರ್ರಿ ಅವರೊಂದಿಗೆ ಲಾಸ್ ಏಂಜಲೀಸ್‌ನಲ್ಲಿ ಶೂಟಿಂಗ್ ಅಭ್ಯಾಸ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು: ರಾತ್ರೋರಾತ್ರಿ ಮೂರು ಕಡೆ ನುಗ್ಗಿದ ಕಳ್ಳ; ಸಿಸಿಟಿವಿಯಲ್ಲಿ ದ್ರಶ್ಯಗಳು ಸೆರೆ

ವೀಡಿಯೊದಲ್ಲಿ, ಯಶ್ ಅನೇಕ ಬೆಂಚ್‌ಮಾರ್ಕ್ ಚಲನಚಿತ್ರಗಳಿಗೆ ತರಬೇತಿ ನೀಡುವ ಸ್ಥಳವಾಗಿರುವ ಶೂಟಿಂಗ್ ರೇಂಜ್‌ನಲ್ಲಿ ಪೆರ್ರಿ ಅವರೊಂದಿಗೆ ಇರುವುದನ್ನು ಕಾಣಬಹುದು.

ಕ್ಯಾಪ್ಷನ್ ನಲ್ಲಿ ಯಶ್ ಅವರ ಕೆಜಿಎಫ್ 2 ಚಿತ್ರದಲ್ಲಿ ಬಳಸಲಾಗಿದ್ದ ಕಲಾಶ್ನಿಕೋವ್ ಗನ್ ಉಲ್ಲೇಖವನ್ನು ಮಾಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next