Advertisement

ಮಗಳಿಗೆ ಐರಾ ಎಂದು ಹೆಸರಿಟ್ಟ ಯಶ್‌ ದಂಪತಿ

02:48 PM Jun 25, 2019 | Lakshmi GovindaRaj |

ಬೆಂಗಳೂರು: ನಟ ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ರಾಧಿಕಾ ದಂಪತಿ, ತಮ್ಮ ಮಗಳಿಗೆ ಯಾವ ಹೆಸರಿಡುತ್ತಾರೋ ಎಂಬ ಕುತೂಹಲ ಅಭಿಮಾನಿಗಳಿಗೆ ಇತ್ತು. ಸ್ವತಃ ಅಭಿಮಾನಿಗಳೇ ಸಾಕಷ್ಟು ಹೆಸರುಗಳನ್ನು ಸೂಚಿಸಿದ್ದರು.

Advertisement

ಇದೀಗ ಯಶ್‌ ದಂಪತಿ ಮಗಳಿಗೆ ನಾಮಕರಣ ಮಾಡಿದ್ದು, ತಮ್ಮ ಮುದ್ದಾದ ಮಗುವಿಗೆ “ಐರಾ’ ಎಂದು ಹೆಸರಿಟ್ಟಿದ್ದಾರೆ. ಐರಾ ಎಂದರೆ ಗೌರವಾನ್ವಿತ ಎಂದು ಅರ್ಥವಿದೆ.

ವಿಭಿನ್ನ ಹೆಸರು ಇರಿಸುವ ಮೂಲಕ ಯಶ್‌ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಭಾನುವಾರ ತಾಜ್‌ ವೆಸ್ಟೆಂಡ್‌ನ‌ಲ್ಲಿ ನಡೆದ ನಾಮಕರಣ ಸಮಾರಂಭದಲ್ಲಿ ಯಶ್‌, ರಾಧಿಕಾ ದಂಪತಿ, ಅವರ ಪೋಷಕರು ಮತ್ತು ಕುಟುಂಬದ ಆಪ್ತರು, ಸ್ನೇಹಿತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next