ಬಾಗಲಕೋಟೆ: ಉತ್ತರ ಕರ್ನಾಟಕದ ಕಲಾವಿದರೊಂದಿಗೆ ಕೂಡಿಕೊಂಡು, ಅದರಲ್ಲೂ ಬಾಗಲಕೋಟೆಯ ಯುವ ಪ್ರತಿಭೆ ಆನಂದ ರಂಗರೇಜ್ ಪ್ರಮುಖ ಖಳ ನಾಯಕ ನಟನ ಪಾತ್ರದಲ್ಲಿ ಅಭಿನಯಿಸಿರುವ ಯರ್ರಾಬಿರ್ರಿ ಚಿತ್ರ ನ. 12ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಈ ಭಾಗದ ಜನರು, ಈ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು ಎಂದು ನಿರ್ಮಾಪಕ ಎಸ್.ಜಿ. ದಾಸರ ಮನವಿ ಮಾಡಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆಯ ಕಲಾವಿದ ಆನಂದ ರಂಗರೇಜ್ ಅವರ ಅದ್ಭುತ ಅಭಿಯನ ಇದರಲಿದ್ದು, ಖಳ ನಾಯಕರಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ಇದೇ ಜಿಲ್ಲೆಯ ಇನ್ನೋರ್ವ ಪ್ರತಿಭೆ ಸೋನು ಪಾಟೀಲ, ಈ ಚಿತ್ರದ ನಾಯಕಿ ಪಾತ್ರದಲ್ಲಿದ್ದಾರೆ. ನ.12ರಂದು ರಾಜ್ಯದ 60ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಯರ್ರಾಬಿರ್ರಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಿದರು.
ನಾನು ಮೂಲತಃ ಖಜ್ಜಿಡೋಣಿ ಗ್ರಾಮದವನಿದ್ದು, ನಮ್ಮ ಇಡೀ ಕುಟುಂಬ ದಾಸ್ ಸಿನಿ ಕ್ರಿಯೇಷಸನ್ಸ್ ಮೂಲಕ ಈ ವರೆಗೆ ಹಲವಾರು ಚಿತ್ರಗಳಿಗೆ ಕೆಲಸ ಮಾಡಿದೆ. ನಮ್ಮ ಬ್ಯಾನರ್‌ದಿಂದ ಇದೇ ಮೊದಲ ಬಾರಿಗೆ ಚಿತ್ರ ನಿರ್ಮಾಣ ಮಾಡಿದ್ದು, ನಮ್ಮ ಜಿಲ್ಲೆಯ ಜನರು ಪ್ರೋತ್ಸಾಹ ನೀಡಬೇಕು. ಉತ್ತರಕರ್ನಾಟಕ ಭಾಗದಲ್ಲಿಯೇ ಹೆಚ್ಚು ಚಿತ್ರೀಕರಣ ಮಾಡಲಾಗಿದೆ. ಮುಖ್ಯವಾಗಿ ಇದೇ ಭಾಗದ ಕಲಾವಿದರನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.
ನಮ್ಮ ಭಾಗದ ಕಲಾವಿದರು, ನಿರ್ಮಾಪಕರು, ನಿರ್ದೇಶಕರನ್ನು ಬೆಳೆಸುವ ಮೂಲಕ ಚಿತ್ರಕ್ಕೆ ಆಶೀರ್ವಾದ ಮಾಡಬೇಕು ಎಂದು ಕೋರಿದರು. ಧಾರವಾಡದ ಅಂಜನ್ ಅವರು ನಾಯಕರಾಗಿ, ಸೋನು ಪಾಟೀಲ ಅವರೊಂದಿಗೆ ಶಿಲ್ಪಾ ನಾಯಕಿಯಾಗಿದ್ದಾರೆ. ಈ ಚಿತ್ರಕ್ಕೆ ಇಬ್ಬರು ನಾಯಕಿಯರಿದ್ದು, ಖಜ್ಜಿಡೋಣಿಯ ವೆಂಕಟೇಶ ನಟಿಸಿದ್ದಾರೆ. ಬಾಗಲಕೋಟೆ, ಇಳಕಲ್, ರಬಕವಿ, ಧಾರವಾಡ, ಹಾವೇರಿ, ಹುಬ್ಬಳ್ಳಿ ಜಿಲ್ಲೆಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು,
ಕುಟುಂಬ ಸಮೇತರಾಗಿ ನೋಡುವ ಚಿತ್ರ ಇದಾಗಿದೆ. ಪ್ರೀತಿ, ಪ್ರೇಮ ಜೊತೆಗೆ ಸಾಮಾಜಿಕ ಚಿತ್ರವನ್ನಾಗಿ ಒಳಗೊಂಡಿದೆ. ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ನುರಿತ ತಂತ್ರಜ್ಞನರಿಂದ ಚಿತ್ರವನ್ನು ತಯಾರಿಸಲಾಗಿದೆ. ಗೋವಿಂದ ದಾಸ್ ನಿರ್ದೇಶನ ಮಾಡಿದ್ದಾರೆ ಎಂದರು.
ಚಿತ್ರದ ನಾಯಕಿ ಸೋನು ಪಾಟೀಲ ಮಾತನಾಡಿ, ಚಿತ್ರದಲ್ಲಿ ನಾಯಕಿಯಾಗಿ ಪಾತ್ರ ಮಾಡಿದ್ದು, ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದೆ ಹಾಗೂ ಐದುಕ್ಕೂ ಹೆಚ್ಚು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಉತ್ತರ ಕರ್ನಾಟಕದ ಕಲಾವಿದರನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ನಾನು ಈಗಾಗಲೇ ಹಲವು ಚಿತ್ರದಲ್ಲಿ ನಟಸಿದ್ದೇನೆ. ಆದರೆ, ಯರ್ರಾಬಿರ್ರಿ ಚಿತ್ರದ ಖಳ ನಾಯಕ ನಟನ ಅಭಿಯನ ನನಗೆ ಹೊಸ ಅನುಭವ ನೀಡಿದೆ. ಇದೇ ಜಿಲ್ಲೆಯಲ್ಲಿ ಹಟ್ಟಿ, ಬೆಳೆದ ನಾನು, ಸಿನೆಮಾ ರಂಗದಲ್ಲಿ ಬೆಳೆಯಲು ಪ್ರತಿಯೊಬ್ಬರ ಪ್ರೋತ್ಸಾಹ ಬೇಕು.
∙ಆನಂದ ರಂಗರೇಜ್,
ಯರ್ರಾಬಿರ್ರಿ ಚಿತ್ರದ ಖಳನಟ