Advertisement

ಹಾಡಿನಲ್ಲಿ “ಯಾರಿಗೆ ಬೇಕು ಈ ಲೋಕ”

12:38 PM Dec 27, 2021 | Team Udayavani |

ಆರ್ಯವರ್ಧನ್‌ ನಾಯಕರಾಗಿ ಅಭಿನಯಿಸುತ್ತಿರುವ “ಯಾರಿಗೆ ಬೇಕು ಈ ಲೋಕ’ ಚಿತ್ರದ ಮೊದಲ ಹಾಡನ್ನು ನಟ ವಿನೋದ್‌ ಪ್ರಭಾಕರ್‌ ಬಿಡುಗಡೆ ಮಾಡಿದ್ದಾರೆ.

Advertisement

“ರಾಜೇಶ್‌ ಕೃಷ್ಣ ಅವರು ಹಾಡಿರುವ ಈ ಹಾಡು ನೋಡಲು ಹಾಗೂ ಕೇಳಲು ಇಂಪಾಗಿದೆ. ನಾಯಕ ಆರ್ಯವರ್ಧನ್‌ ನೋಡಲು ಸುಂದರವಾಗಿ ಕಾಣಿಸಿದ್ದಾರೆ. ನಿರ್ದೇಶಕರಾದ ರಮೇಶ್‌ ಹಾಗೂ ಗೋಪಿ ಚೆನ್ನಾಗಿ ಚಿತ್ರೀಕರಿಸಿದ್ದಾರೆ. ಶ್ರೀನಿವಾಸರಾವ್‌ ಹಾಗೂ ರೋಶಿನಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಕನ್ನಡ ಜನತೆಯ ಆಶೀರ್ವಾದ ಈ ಹೊಸತಂಡದ ಮೇಲಿರಲಿ’ ಎನ್ನುತ್ತಾ ಚಿತ್ರ ತಂಡಕ್ಕೆ ಶುಭ ಕೋರಿದರು ವಿನೋದ್‌.

ಇದನ್ನೂ ಓದಿ:ನಿಖೀಲ್ ಕುಮಾರ್ ಚಿತ್ರ ‘ರೈಡರ್‌’ ಗೆ ಪೈರಸಿ ಕಾಟ!

ಆರ್ಯವರ್ಧನ್‌ ಅವರಿಗೆ ನಾಯಕಿಯರಾಗಿ ಪ್ರಿಯಾಂಕ ರಿವಾರಿ, ಪಾವನಿ ಹಾಗೂ ವರ್ಷ ನಟಿಸಿದ್ದಾರೆ.  ಹಿರಿಯ ನಟ ವಿನೋದ್‌ ಕುಮಾರ್‌, ರಚ ರವಿ, ರಾಮು, ಶೋಭನ್‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಎಂ.ರಮೇಶ್‌ ಹಾಗೂ ಗೋಪಿ ಜಂಟಿಯಾಗಿ ನಿರ್ದೇಶಿಸಿರುವ ಈ ಚಿತ್ರವನ್ನು ಬಿ. ಶ್ರೀನಿವಾಸ ರಾವ್‌ ಹಾಗೂ ರೋಶಿನಿ ನೌಡಿಯಲ್‌ ನಿರ್ಮಿಸಿದ್ದಾರೆ. ಮಹಿತ್‌ ನಾರಾಯಣ್‌ ಸಂಗೀತ ನೀಡಿರುವ ಈ ಚಿತ್ರಕ್ಕೆ ಶ್ರೀ ವಸಂತ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಎ.ಕೆ.ಆನಂದ್‌ ಛಾಯಾಗ್ರಹಣವಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next