ಕುಂದಗೋಳ: ತಾಲೂಕಿನ ಯರಗುಪ್ಪಿ ಗ್ರಾಪಂ ಚುನಾವಣೆ ಪ್ರಚಾರ ಜೋರಾಗಿದ್ದು, ಯಾರ ಕೈ ಮೇಲಾಗುತ್ತದೆ ಎಂಬ ಲೆಕ್ಕಾಚಾರ ಶುರುವಾಗಿದೆ. ಯರಗುಪ್ಪಿ ಪಂಚಾಯಿತಿ ಮುಳ್ಳೊಳ್ಳಿ, ಚಿಕ್ಕನರ್ತಿ ಸೇರಿ ಒಟ್ಟು 16 ಸದಸ್ಯರ ಬಲ ಹೊಂದಿದ್ದು, ಇದರಲ್ಲಿ ಯರಗುಪ್ಪಿ-10 ಸ್ಥಾನ, ಮುಳ್ಳೊಳ್ಳಿ-3, ಚಿಕ್ಕನರ್ತಿ-3 ಸ್ಥಾನಗಳಿಗೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.
ಮಾಜಿ ಶಾಸಕ ಎಂ.ಎಸ್.ಅಕ್ಕಿ, ಸಿ.ಎಸ್. ಶಿವಳ್ಳಿ ಮತ್ತು ಎಂ.ಆರ್. ಪಾಟೀಲ್ ಈ ಮೂರೂ ನಾಯಕರ ಹುಟ್ಟೂರು ಯರಗುಪ್ಪಿ ಆಗಿರುವುದರಿಂದ ಇಲ್ಲಿನ ಬೆಂಬಲಿಗರು ಅವರವರ ನಾಯಕರನ್ನೇ ನೆಚ್ಚಿಕೊಂಡಿದ್ದಾರೆ. ಪ್ರತಿ ಬಾರಿಯೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಬೆಂಬಲಿಗರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುತ್ತಿತ್ತು.
ಇದನ್ನೂ ಓದಿ:ಕ್ರಿಸ್‌ಮಸ್ ಸಂಭ್ರಮ; ಸಾಮೂಹಿಕ ಪ್ರಾರ್ಥನೆ
ಆದರೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಎರಡು ಬಣಗಳು ಕಣಕ್ಕಿಳಿದಿರುವುದರಿಂದ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ನಾಯಕರಲ್ಲಿ ಒಮ್ಮತ ಮೂಡದೇ ಇರುವುದರಿಂದ ಎಲ್ಲಾ ಸ್ಥಾನಗಳಿಗೆ ಅವರವರ ಬೆಂಬಲಿಗರು ಸ್ಪರ್ಧಿಸಿದ್ದಾರೆ. ತಮ್ಮ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಶಿವಳ್ಳಿ ಹಾಗೂ ಅಕ್ಕಿಯವರ ಮೇಲೆ ಇರುವುದರಿಂದ ತೀವ್ರ ಕುತೂಹಲ ಮೂಡಿದೆ.
ಇದರ ಮಧ್ಯೆಯೇ ಬಿಜೆಪಿ ತಮ್ಮ ಬೆಂಬಲಿಗರನ್ನೂ ಕಣಕ್ಕಿಳಿಸಿದ್ದು ಹೇಗಾದರೂ ಮಾಡಿ ಈ ಬಾರಿ ಯರಗುಪ್ಪಿ ಗ್ರಾಮ ಪಂಚಾಯಿತಿಯನ್ನು ತಮ್ಮ ತೆಕ್ಕೆಗೆ ತೆಗೆದು ಕೊಳ್ಳಬೇಕೆಂಬ ತವಕದಲ್ಲಿದ್ದಾರೆ. ಇವರೊಂದಿಗೆ ಪಕ್ಷೇತರ ಅಭ್ಯರ್ಥಿಗಳೂ ಕಣಕ್ಕಿಳಿದಿರುವುದು ತೀವ್ರ ಕುತೂಹಲ ಕೆರಳಿಸಿ¨
ಕಾಂಗ್ರೆಸ್‌ನಲ್ಲಿ ಯಾವ ಬಣವೂ ಇಲ್ಲ. ಇದು ಊಹಾಪೋಹ. ನಾವಿಬ್ಬರೂ ಸೇರಿ ಚುನಾವಣೆ ಮಾಡುತ್ತಿದ್ದೇವೆ.
ಕುಸುಮಾವತಿ ಶಿವಳ್ಳಿ, ಶಾಸಕಿ
ಶೀತಲ್ ಎಸ್ ಮುರಗಿ