Advertisement

ಯಮಹಾದಿಂದ FZ 25 ಬೈಕ್‌ ಬಿಡುಗಡೆ 

01:35 PM Jan 26, 2017 | |

ನವದೆಹಲಿ: ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಯಮಹಾ ಮೋಟಾರ್‌ ಇಂಡಿಯಾ ಪ್ರೈ. ಲಿ.,ಪ್ರಥಮ ಭಾರಿಗೆ ಭಾರತದ ಮಾರುಕಟ್ಟೆಗೆ 249ಸಿಸಿ ಶಕ್ತಿಶಾಲಿ ಎಫ್‌ಜ್ಹಡ್‌ 25 ಬೈಕ್‌ ಬಿಡುಗಡೆ ಮಾಡಿದೆ.

Advertisement

ದೆಹಲಿಯ ಹೋಟೆಲ್‌ನಲ್ಲಿ ಮಂಗಳವಾರ ಬಾಲಿವುಡ್‌ ನಟ ಜಾನ್‌ ಅಬ್ರಾಹಂ ಅವರು ನೂತನ ಬೈಕ್‌ ಅನಾವರಣ ಮಾಡಿ ಮಾತನಾಡಿದರು. ಎಫ್‌ಜ್ಹಡ್‌ ಸರಣಿಯಲ್ಲಿ 4ಸ್ಟ್ರೋಕ್‌, ಎಸ್‌ಒಎಚ್‌ಸಿ, 2ವಾಲ್‌Ì, ಸಿಂಗಲ್‌ ಸಿಲಿಂಡರ್‌, ಹೈ ಟಾರ್ಕ್‌, ಕಡಿಮೆ ತೂಕದ ಫ್ರೇಮ್‌ವುಳ್ಳ ನ್ಪೋರ್ಟಿ ಡಿಸೈನ್‌ನ ಬಹುನಿರೀಕ್ಷಿತ ಬೈಕ್‌ ಇದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಮಾರಾಟ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಮಸಾಕಿ ಅಸಾನೊ ಮಾತನಾಡಿ, ಎಫ್‌ಜØಡ್‌ ಸರಣಿ ಬೈಕ್‌ ಗಳು ಇದುವರೆಗೆ ಭಾರತದಲ್ಲಿ 13 ಲಕ್ಷ ಮಾರಾಟ ವಾಗಿವೆ. ಅದೇ ಸರಣಿಯಲ್ಲಿ ಡಿಲಕ್ಸ್‌ ವಿಭಾಗದ ಶಕ್ತಿಶಾಲಿ ಅತ್ಯುತ್ತಮ ಬೈಕ್‌ ಎಫ್‌ಜ್ಹಡ್‌25 ಆಗಿದೆ. ಇಂದಿನ ಯುವಪೀಳಿಗೆಯನ್ನು ಹೆಚ್ಚು ಆಕರ್ಷಿ
ಸುವ ಹೊಸ ವೈಶಿಷ್ಟಗಳುಳ್ಳ ಸ್ಟೈಲಿಶ್‌ ಬೈಕ್‌ ಇದಾಗಿದ್ದು, ಮಧ್ಯಮ ವರ್ಗದ ಪ್ರಭಾವಶಾಲಿ
ಬೈಕ್‌ ಎನಿಸಿದೆ ಎಂದು ತಿಳಿಸಿದರು.

ಯಮಹಾ ಮೋಟಾರ್‌ ಇಂಡಿಯಾ ಸೇಲ್ಸ್‌ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ರಾಯ್‌ ಕುರಿಯನ್‌ ಎಫ್‌ಜØಡ್‌25 ಆಕರ್ಷಕ ಬ್ಯಾಲಿಸ್ಟಿಕ್‌ ಬ್ಲೂ, ವಾರಿಯರ್‌ ವೈಟ್‌ ಮತ್ತು ನೈಟ್‌ ಬ್ಲಾಕ್‌ನ ಬಣ್ಣಗಳಲ್ಲಿ ದೊರೆಯಲಿದೆ.
ದೆಹಲಿಯ ಎಕ್ಸ್‌ ಶೋರೂಂ ಬೆಲೆ 1,19,500 ರೂ., ಫೆಬ್ರವರಿ ತಿಂಗಳಲ್ಲಿ ದೇಶದ ಎಲ್ಲ ಡೀಲರ್‌ ಗಳಲ್ಲಿ ಲಭ್ಯ ಎಂದು ಪ್ರಕಟಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next