Advertisement

ಯಲ್ಲಾಪುರ ತಾಲೂಕಿನಾದ್ಯಂತ ಭಾರಿ ಮಳೆ : ತೋಟಗಳಿಗೆ ನುಗ್ಗಿದ ನೀರು, ಅಪಾರ ನಷ್ಟ

08:50 AM Sep 06, 2022 | Team Udayavani |

ಯಲ್ಲಾಪುರ : ತಾಲೂಕಿನ ಉಮ್ಮಚ್ಗಿ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಜನಜೀವನಕ್ಕೆ ತೊಂದರೆ ಉಂಟಾಗಿದೆ. ಇತ್ತೀಚೆಗಷ್ಟೇ ತುಡುಗುಣಿ ಭಾಗದಲ್ಲಿ ಉಂಟಾದ ಮಳೆಯ ಹಾನಿ, ರಸ್ತೆ ಕುಸಿತ ಕಂಡಿದ್ದೇವೆ. ಅದೇ ರೀತಿ ಚವತ್ತಿ ಪ್ರದೇಶದಲ್ಲಿನ ಊರುಗಳಾದ ಹೊಸ್ಮನೆ, ಕೂಮನಮನೆ, ಕುಂಬಾರಕುಳಿ, ಕಾಗೋಡು, ಅಂಬ್ಲಿಹೊಂಡ ಮುಂತಾದ ಊರುಗಳಲ್ಲಿ ವಿಪರೀತವಾಗಿ ಸುರಿದ ಮಳೆ ಒಂದೇ ತಾಸಿನಲ್ಲಿ (157 ಮಿಲಿ ಮೀಟರ್ ನಷ್ಟು!) ಹಳ್ಳಕೊಳ್ಳಗಳೆಲ್ಲಾ ತುಂಬಿ ಏರಿಗಳೊಡೆದು ತೋಟ, ಗದ್ದೆಗಳಿಗೆ ನೀರು ನುಗ್ಗಿ, ಮುಖ್ಯವಾಗಿ ರೈತರನ್ನು ಸಂಕಷ್ಟಕ್ಕೆ ಈಡು ಮಾಡಿದೆ.

Advertisement

ಚವತ್ತಿ ಪ್ರದೇಶದಲ್ಲಿ ಅತಿ ಹೆಚ್ಚು ಕಾಳುಮೆಣಸು ಬೆಳೆಯುವ ರೈತರಿದ್ದು ಮಳೆಯ ನೀರು ತೋಟದಲ್ಲಿ ಆಳೆತ್ತರ ಹೋಗಿರುವುದರಿಂದ ಕಾಳುಮೆಣಸಿಗೆ ರೋಗ ಕಾಡಬಹುದೆಂದು ರೈತರು ಗೊಂದಲದಲ್ಲಿದ್ದಾರೆ. ತೋಟಕ್ಕೆ ಹಾಕಿದ ಗೊಬ್ಬರ, ಮುಚ್ಚಿದ ಸಪ್ಪು, ಸದೆಗಳೆಲ್ಲ ನೀರುಪಾಲಾಗಿ ಕಾಲುವೆಗಳಲ್ಲಿ ಕೆಸರು ನಿಂತು ಅಡಿಕೆ ಮರದ ಬೇರುಗಳೆಲ್ಲ ಮೇಲೆದ್ದು ಬೀಳುವ ಹಂತದಲ್ಲಿದೆ.

ಪುಟ್ಟು ಗಿರಿಯಾ ಗೌಡ,ಅಣ್ಣು ಹನಮು ಗೌಡ, ಮಂಜುನಾಥ ಗಣಪತಿ ನಾಯ್ಕ,ದೇವೇಂದ್ರ ರಾಮಾ ನಾಯ್ಕ ಮೊದಲಾದ ಭತ್ತ ಬೆಳೆಯುವ ರೈತರ ಹೊಲದಲ್ಲಿ ನಾಟಿ ಮಾಡಿದ ಭತ್ತದ ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿ ಗದ್ದೆಯಲ್ಲಿ ಕಲ್ಲು ಮಣ್ಣುಗಳ ರಾಶಿ ಬಿದ್ದಿದೆ.

ನಾರಾಯಣ ದುರ್ಗಾ ಪೂಜಾರಿ, ರವೀಂದ್ರ ಭಾಗ್ವತ್,ಗೌರಿ ಭಾಗ್ವತ್,ಎಂ.ಪಿ.ಹೆಗಡೆ,ಪ್ರಭಾಕರ ಹೆಗಡೆ,ಮಾಬ್ಲೇಶ್ವರ ಗೌಡ, ವೆಂಕಟ್ರಮಣ ಆರ್.ಹೆಗಡೆ,ಶಾಂತಾರಾಮ ಸುಬ್ರಾಯ ಹೆಗಡೆ, ಗುರು ಭಟ್ಟ, ರಮಾಕಾಂತ ಹೆಗಡೆ,ವಿಮಲಾ ರತ್ನಾಕರ ಭಾಗ್ವತ್, ಸುಧೀರ್ ಪಿ.ಬಲ್ಸೆ, ವಿಶ್ವಾಸ ಪಿ.ಬಲ್ಸೆ, ಶ್ರೀಧರ ಜಿ.ಭಟ್ಟ ಹೊಸ್ಮನೆ ಮೊದಲಾದವರ ತೋಟಗದ್ದೆಗಳಿಗೆ ಹಾನಿಯಾಗಿದೆ.

ಚವತ್ತಿ ಗದ್ದೆಯ ಹತ್ತಿರ ಕರೆಂಟ್ ಕಂಬವೊಂದು ಯಲ್ಲಾಪುರ, ಸಿರ್ಸಿ ರಸ್ತೆಗೆ ವಾಲಿ ನಿಂತಿದ್ದು, ಬಹಳ ವಾಹನಗಳ ಓಡಾಟವಿರುವುದರಿಂದ ರಸ್ತೆಗೆ ಬಿದ್ದು ಅನಾಹುತವಾಗುವ ಮೊದಲು ಹೆಸ್ಕಾಂ ಅಧಿಕಾರಿಗಳು ಅದನ್ನು ಸರಿಪಡಿಸುವ ಅಗತ್ಯತೆಯಿದೆ.

Advertisement

ಇದನ್ನೂ ಓದಿ : ಕಾಕ್ ಪಿಟ್ ನಲ್ಲಿ ಶಿಳ್ಳೆ ಸದ್ದು: ಮುಂಬೈಗೆ ಹೊರಟಿದ್ದ ವಿಸ್ತಾರ ವಿಮಾನ ದೆಹಲಿಗೆ ವಾಪಾಸ್

ಪರಿಶೀಲನೆ :
ಉಮ್ಮಚ್ಗಿ ಪಂಚಾಯತ್ ಅಧ್ಯಕ್ಷೆ ರೂಪಾ ಪೂಜಾರಿ, ಉಪಾಧ್ಯಕ್ಷ ಶಿವರಾಯ ಪೂಜಾರಿ, ಸದಸ್ಯರುಗಳಾದ ಕುಪ್ಪಯ್ಯ ಪೂಜಾರಿ, ಗ.ರಾ.ಭಟ್ಟ ಮಳೆಯಿಂದಾಗಿ ಹಾನಿಗೊಳಗಾದ ಚವತ್ತಿ ಭಾಗದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next