ಯಲ್ಲಾಪುರ: ಲಾರಿಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ರಾ.ಹೆದ್ದಾರಿ 63ರ ಯಲ್ಲಾಪುರ ತಾಲೂಕಿನ ಅರಬೈಲ್ ದಲ್ಲಿ ಮಂಗಳವಾರ (ಜ.17) ಬೆಳಿಗ್ಗೆ ನಡೆದಿದೆ.
ಹುಬ್ಬಳ್ಳಿ ಕಡೆಯಿಂದ ಸಿಮೆಂಟ್ ತುಂಬಿಕೊಂಡು ಮಂಗಳೂರು ಕಡೆ ಹೊರಟಿದ್ದ ಲಾರಿಯಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕದವರು ತೆರಳಿದ್ದರೂ ದಹಿಸುವ ಬೆಂಕಿಯನ್ನು ನಂದಿಸಲು ಸಾಧ್ಯವಾಗಲಿಲ್ಲ. ಅಷ್ಟೊತ್ತಿಗಾಗಲೇ ಬಹುತೇಕ ಸುಟ್ಟು ಹೋಗಿದ್ದು, ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ಲಾರಿಯಲ್ಲಿದ್ದ ಸಿಮೆಂಟ್ ಚೀಲಗಳಿಗೂ ಹಾನಿಯುಂಟಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಚಾಲಕ ಮತ್ತು ನಿರ್ವಾಹಕ ಈ ಅನಾಹುತದಿಂದ ಪಾರಾಗಿದ್ದಾರೆ. ಬೆಂಕಿ ಹೇಗೆ ತಗುಲಿತು, ಹೊತ್ತಿಕೊಂಡಿತೆಂಬ ಬಗ್ಗೆ ಮಾಹಿತಿಯಿಲ್ಲ.