ಯಲ್ಲಾಪುರ: ತಾಲೂಕಿನ ರಾ.ಹೆದ್ದಾರಿ 63 ರಲ್ಲಿನ ಡೋಮಗೇರಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರವಾಹನ ಸವಾರರೊಬ್ಬರು ಲಾರಿಯಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.
Advertisement
ಎದುರುಗಡೆಯಿಂದ ಬಂದ ಲಾರಿ ಮತ್ತು ದ್ವಿಚಕ್ರವಾಹನದ ಮದ್ಯೆ ಅಪಘಾತ ಸಂಭವಿಸಿ ದ್ವಿಚಕ್ರವಾಹನ ಸವಾರ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.ಸುಮಾರು ಮೂರ್ನಾಲ್ಕು ತಾಸುಗಳ ಕಾಲ ಬೈಕ್ ಸವಾರನ ಮೃತದೇಹ ರಸ್ತೆಯಲ್ಲೇ ಬಿದ್ದಿತ್ತು. ಕೊನೆಗೆ ಸ್ಥಳಕ್ಕೆ ಹೋದ 108 ವಾಹನ ಕೂಡಾ ಅವನು ಶವವಾಗಿ ಬಿದ್ದಿದ್ದರಿಂದ ಸ್ಥಳದಿಂದ ತರದೇ ವಾಪಸ್ಸಾಯಿತೆನ್ನಲಾಗಿದೆ.ಮೃತ ವ್ಯಕ್ತಿ ಯಲ್ಲಾಪುರ ಪಟ್ಟಣದವನು ಎನ್ನಲಾಗುತ್ತಿದ್ದರೂ ಇನ್ನೂ ಯಾರೆಂಬ ಖಚಿತ ಮಾಹಿತಿ ದೊರೆಯಲಿಲ್ಲ.