Advertisement

ಅರ್ಹತೆ ಇಲ್ಲದವರು ಹೇಳಿಕೆ ನೀಡಿದರೆ ಉತ್ತರ ಕೊಡುವ ಅಗತ್ಯ ಇಲ್ಲ: ಡಿ.ಎನ್.ಗಾಂವಕರ್

04:10 PM Oct 04, 2021 | Team Udayavani |

ಶಿರಸಿ: ಸಣ್ಣ ಕೆಲಸ ಮಾಡಲೂ ಆಗದೇ ಇದ್ದವರು ದೊಡ್ಡವರ ಟೀಕಿಸಿದರೆ ಯಾರೂ ದೊಡ್ಡವರಾಗಲ್ಲ. ಅರ್ಹತೆ ಇಲ್ಲದವರು ಹೇಳಿದರೆ ಉತ್ತರ ಕೊಡುವ ಅಗತ್ಯ ಇಲ್ಲ ಎಂದು ಯಲ್ಲಾಪುರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಡಿ.ಎನ್.ಗಾಂವಕರ್ ಹೇಳಿದರು.

Advertisement

ಬಿಜೆಪಿಯವರು ಎಷ್ಟು ಜನ ಶಿವರಾಮ ಹೆಬ್ಬಾರ್  ಜೊತೆ ಇದ್ದಾರೆ ಗೊತ್ತಿಲ್ಲ. ಕಾರ್ಮಿಕ ಕಿಟ್ ಎಲ್ಲಿ ಕೊಟ್ಟಿದ್ದೀರಿ ಸರಿಯಾಗಿ‌ ಮಾಹಿತಿ ಕೊಡಬೇಕು ಇವತ್ತು ಹಾಳಾಗಿ ಬಿದ್ದಿದೆ ಎಂಬ ದೂರಿದೆ ಎಂದೂ ಹೇಳಿದರು.

ಕಾಂಗ್ರೆಸ್ ಸರಕಾರ ಇದ್ದಾಗಲೇ ಯಲ್ಲಾಪುರ, ಮುಂಡಗೋಡ ಕ್ಷೇತ್ರಕ್ಕೆ  ಅನೇಕ ಅಭಿವೃದ್ದಿ ತಂದಿದ್ದಾರೆ. ಆರ್.ವಿ.ದೇಶಪಾಂಡೆ ಅವರು ಜಿಲ್ಲಾ ಸಚಿವರಾಗಿದ್ದಾಗಲೇ ಅನೇಕ ಅಭಿವೃದ್ದಿ ಕಾರ್ಯ ಮಾಡಿದ್ದಾರೆ.

ದೇಶಪಾಂಡೆ‌ ಅವರು ಹಿರಿಯ ಮುತ್ಸದ್ದಿ ರಾಜಕಾರಣಿ. ಮೂಲ ಬಿಜೆಪಿಗರು ಕೂಡ ಅವರ ಬಗ್ಗೆ ಪ್ರಶ್ನೆ ಮಾಡುವದಿಲ್ಲ. ಜನರ ನಾಡಿ ಮಿಡಿತ ಗೊತ್ತು. ವಿವೇಕ ಹೆಬ್ಬಾರ್‌ ಅವರು ನಮ್ಮ ಮನಸ್ಸೂ ನೋವಾಗುವ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

ಮುಂಡಗೋಡದಲ್ಲಿ ಕೆರೆ‌ ನೋಡಿದರೆ‌ ತಿಳಿಯುತ್ತದೆ ಎಂದು ವಿವೇಕ ಹೆಬ್ಬಾರರು ಆಡಿದ್ದನ್ನು ಅವರ ತಂದೆ ಸಚಿವರಾದ ಹೆಬ್ಬಾರರು ಏಕೆಂದರೆ ಅವರಿಗೆ ಗೊತ್ತಿದೆ, ಯಾರ ಕಾಲದಲ್ಲಿ ಇವೆಲ್ಲ ಆಗಿದೆ ಎಂದು ಹೇಳಿದರು.

Advertisement

ಯಲ್ಲಾಪುರ ಬಸ್ ನಿಲ್ದಾಣ, ಸಿದ್ದರಾಮಯ್ಯ ಸಿಎಂ, ದೇಶಪಾಂಡೆ ನೇತೃತ್ವದಲ್ಲಿ ಆಗಿದೆ. ತಹಸೀಲ್ದಾರ ಕಚೇರಿ ಸುಸಜ್ಜಿತವಾಗಿದೆ. ಪಿಯು ಕಾಲೇಜು ಶಂಕು ಸ್ಥಾಪನೆ   ಅಡಿಗಲ್ಲು ಹಾಕಿದ್ದು‌ ದೇಶಪಾಂಡೆ ಅವರು ಇದ್ದಾಗ, ಅಗ್ನಿ ಶಾಮಕ ದಳ‌ ಆರಂಭ ಆಗಿದ್ದರೆ, ನೂರು ಹಾಸಿಗೆ ಬೆಡ್ ಆಸ್ಪತ್ರೆ ಆಗಿದ್ದರೆ  ಕಾಂಗ್ರೇಸ್ ಸರಕಾರ ಇದ್ದಾಗ ಇವೆಲ್ಲ ಆಗಿದ್ದು ಎಂದರು.

ಬನವಾಸಿ ಅಭಿವೃದ್ದಿ ಪ್ರಾಧಿಕಾರ, ಬೇಡ್ತಿ ಸೇತುವೆ, ರಸ್ತೆ ಅಭಿವೃದ್ದಿ ಎಲ್ಲದಕ್ಕೂ ಕಾಂಗ್ರೇಸ್ ಸರಕಾರ ಕಾರಣ ಎಂದರು.

ವಿವೇಕ ಹೆಬ್ಬಾರ ವಿವೇಕ ಕಳೆದು ಕೊಂಡ್ರಾ?:

ಕಾಂಗ್ರೆಸ್ ಸರಕಾರ ಹೋದ ಮೇಲೆ ಬಿಜೆಪಿ ಸರಕಾರ ಬಂದ ಮೇಲೆ ಏನು ಮಾಡಿದ್ದಾರೆ ಎಂಬುದರ ಶ್ವೇತ‌ಪತ್ರ ಹೊರಡಿಸಲಿ ಎಂದೂ ಸವಾಲು ಹಾಕಿದರು.

ಮುಂಡಗೋಡ ಬ್ಲಾಕ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ,  ಬನವಾಸಿ ಅಧ್ಯಕ್ಷ ಸಿಎಫ್.ನಾಯ್ಕ,ವಕ್ತಾರ ದೀಪಕ ದೊಡ್ಡೂರು,‌ಜಿ.ಪಂ.ಮಾಜಿ ಸದಸ್ಯ ಬಸವರಾಜ ದೊಡ್ಮನಿ, ಶ್ರೀಲತಾ‌ ಕಾಳೇರಮನೆ ಇತರರು ಇದ್ದರು.

ಯಲ್ಲಾಪುರ ವಿಧಾನ ಸಭೆಗೆ‌ ಪ್ರಶಾಂತ ದೇಶಪಾಂಡೆ ಅವರಿಗೇ ಟಿಕೆಟ್ ಕೊಡುವಂತೆ ಕೆಪಿಸಿಸಿಗೆ ಒತ್ತಾಯ ಮಾಡಿದ್ದೇವೆ.ಡಿ.ಎನ್.ಗಾಂವಕರ್ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಣ

Advertisement

Udayavani is now on Telegram. Click here to join our channel and stay updated with the latest news.

Next