ಯಲ್ಲಾಪುರ : ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನಲ್ಲಿರುವ ಅತ್ಯಂತ ಪ್ರಸಿದ್ದವಾದ ರಮಣೀಯವಾದ ಸಾತೊಡ್ಡಿ ಜಲಪಾತಕ್ಕೆ ಪ್ರವಾಸಿಗರು ತೆರಳದಂತೆ ಅರಣ್ಯ ಇಲಾಖೆ ಭಾನುವಾರದಿಂದ ಅನಿರ್ದಿಷ್ಟ ಕಾಲದವರೆಗೆ ನಿರ್ಬಂಧ ಹೇರಿದೆ.
ಈ ಸಂಬಂದ ರಾ.ಹೆದ್ದಾರಿಯ ಬಿಸಗೋಡ ಕ್ರಾಸ್ ಬಳಿ ಈ ಬಗ್ಗೆ ಸೂಚನಾ ಬ್ಯಾನರ್ ಅಳವಡಿಸಲಾಗಿದೆ.ಜಲಪಾತದಲ್ಲಿ ಪ್ರವಾಸಿಗರ ಮೇಲೆ ಜೇನುನೊಣಗಳು ದಾಳಿ ಮಾಡುತ್ತಿದ್ದು ಇದರ ಹಿನ್ನೆಲೆಯಲ್ಲಿ ಈ ನಿರ್ಭಂದ ಹಾಕಲಾಗಿದೆ.
ಬೇಸಗೆಯ ರಜೆಯ ಮೋಜು ಮಸ್ತಿ ಮತ್ತುಮಜಾ ಮಾಡಲು ಬರುವವರು ಕೆಲವರಾದರೆ ಪ್ರೇಕ್ಷಣೀಯ ಸ್ಥಳ ವೀಕ್ಷಣೆಗೆಂದು ಬರುವವರು ಇನ್ನು ಕೆಲವರು.ಆದರೆ ಈ ಪ್ರವಾಸಿಗರಿಗೆ ಈಗ ಸಾತೊಡ್ಡಿ ಜಲಪಾತ ಅಪಾಯದ ಜಾಗವಾಗುತ್ತಿದೆ.ಶನಿವಾರ ಮತ್ತು ಭಾನುವಾರ ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದ 30 ಜನರಿಗೆ ಜೇನ್ನೊಣ ದಾಳಿ ದಾಳಿ ಮಾಡಿದೆ. ಗಂಭೀರ ಕಡಿತಕ್ಕೊಳಗಾದ ಮೂವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ಕಳಿಸಲಾಗಿದೆ.
ಕಲ್ಲಿಗೆ ಜೇನುಗೂಡುಗಳಿದ್ದು ಕೆಳಗೆ ಮರವಿದೆ.ಅದರ ಬುಡದಲ್ಲಿ ದೇವರ ಸ್ಥಾನವಿದೆ. ಈ ಜಾಗದಲ್ಲಿ ಏನಾದರೂ ಅಶುದ್ದತೆಯುಂಟಾದರೆ ಜೇನ್ನೊಣಗಳು ದಾಳಿ ನಡೆಸುತ್ತವೆ ಎನ್ನುವ ನಂಬಿಕೆ ಇದೆ.
ಈ ಹಿಂದೆ ನಮ್ಮೂರ ಮಂದಾರ ಹೂವೆ ಸಿನೆಮಾ ಶೂಟಿಂಗ್ ಗೆಂದು ಬಂದಿದ್ದ ನಟಿ ಪ್ರೇಮಾ ಅವರಿಗೆ ಜೆನ್ನೋಣ ಕಚ್ಚಿ ಘಾಸಿಗೊಳಿಸಿತ್ತು.ನಂತರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.
ಪ್ರವಾಸಿಗರು ಜೇನುಗೂಡಿನ ಕಲ್ಪನೆಯೇ ಇಲ್ಲದೇ ಸಿಗರೇಟು ಸೇದಿದರೆ, ಅಡುಗೆ ಮಾಡಲು ಒಲೆ ಹಾಕಿ ಬೆಂಕಿ ಹಾಕಿದಾಗಲೂ ಅದರ ಹೊಗೆಗೂ ನೊಣಗಳು ಗೂಡಿನಿಂದ ಹೊರಬಂದು ದಾಳಿ ನಡೆಸುತ್ತವೆ.