Advertisement

ಯಲ್ಲಮ್ಮ ದೇವಿ ದೇವಸ್ಥಾನ ಸಂಪರ್ಕ ಸೇತುವೆ ಮುಳುಗಡೆ

03:03 PM Sep 20, 2022 | Team Udayavani |

ಅಫಜಲಪುರ: ತಾಲೂಕಿನ ಸೊನ್ನ ಡ್ಯಾಂಗೆ ಉಜನಿ ಜಲಾಶಯದಿಂದ 50000 ಹಾಗೂ ವೀರ್‌ ಜಲಾಶಯದಿಂದ 51600 ಕ್ಯೂಸೆಕ್‌ ಸೇರಿ ಒಟ್ಟು ಒಟ್ಟು 1.16 ಲಕ್ಷ ಕ್ಯೂಸೆಕ್‌ ನೀರು ಭೀಮಾ ನದಿಗೆ ಹರಿದು ಬಂದಿದೆ.

Advertisement

ನದಿ ಪಾತ್ರದ ಗ್ರಾಮಗಳ ಜನತೆ ಹಾಗೂ ಮೀನುಗಾರರು, ಕುರಿಗಾಹಿಗಳು ಧಾರ್ಮಿಕ ಕ್ಷೇತ್ರಗಳಲ್ಲಿನ ಪ್ರವಾಸಿಗರು ನದಿ ನೀರಲ್ಲಿ ಇಳಿಯಬಾರದು ಎಂದು ತಹಶೀಲ್ದಾರ್‌ ಸಂಜೀವಕುಮಾರ ದಾಸರ್‌, ಕೆಎನ್‌ಎನ್‌ಎಲ್‌ ಎಇಇ ಸಂತೋಷಕುಮಾರ ಸಜ್ಜನ ತಿಳಿಸಿದ್ದಾರೆ.

ಮಹಾ ನೀರಿನಿಂದ ತಾಲೂಕಿನ ಮಣೂರ ನದಿ ಯಲ್ಲಮ್ಮ ದೇವಿ ದೇವಾಸ್ಥಾನಕ್ಕೆ ಹೋಗುವ ಸಂಪರ್ಕ ಸೇತುವೆ ಸ್ಥಗಿತವಾಗಿದೆ. ಮಣೂರ ಗ್ರಾಮದಿಂದ ಬಾಬಾ ನಗರ ಭುಯಾರ, ಕುಡಗನೂರ ಗ್ರಾಮದ ಮಾರ್ಗ ಮಧ್ಯದಲ್ಲಿರುವ ಸೇತುವೆ ಮುಳಗಿದ್ದರಿಂದ ರಸ್ತೆ ಸಂಚಾರ ಸ್ಥಗಿತವಾಗಿದೆ. ಘತ್ತರಗಾ ಬ್ಯಾರೇಜ್‌ ಮುಳುಗಡೆಯಾಗಿದ್ದು ರಸ್ತೆ ಸಂಚಾರ ಸ್ಥಗಿತವಾಗಿದೆ. ದೇವಲ್‌ ಗಾಣಗಾಪುರ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇರುವುದರಿಂದ ಸಂಚಾರ ಸ್ಥಗಿತ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next