Advertisement

ಭಾರತೀಯ ಸಂಸ್ಕೃತಿಗೆ ಯಾಲೆ ವಿವಿ ತಂಡ ಫಿದಾ!

10:22 AM Jun 20, 2018 | |

ಕಂಪ್ಲಿ: ಐತಿಹಾಸಿಕ ಹಂಪಿಯ ವಿಜಯನಗರ ಸಾಮ್ರಾಜ್ಯದ ಪರಂಪರೆಯ ಕಿನ್ನಾಳ ಶೈಲಿಯ ಸಂಪ್ರದಾಯಿಕ ಚಿತ್ರಕಲೆ ಅಧ್ಯಯನಕ್ಕೆ ಅಮೆರಿಕದ ಕ್ಯಾಲಿಪೋರ್ನಿಯಾದ ಯಾಲೆ ವಿವಿಯ ತಂಡ ಮಂಗಳವಾರ ಕಂಪ್ಲಿಗೆ ಭೇಟಿ ನೀಡಿ ಮಾಹಿತಿ
ಸಂಗ್ರಹಿಸಿತು.

Advertisement

ಜಗತ್ತಿನಲ್ಲಿಯೇ ಭಾರತೀಯ ಕಲೆ, ಸಂಸ್ಕೃತಿ ಅತ್ಯಂತ ವಿಶಿಷ್ಟವಾಗಿದ್ದು, ಇದನ್ನು ಅಭ್ಯಸಿಸಲು ಜಗತ್ತಿನ ವಿವಿಧ ದೇಶಗಳ ವಿದ್ಯಾರ್ಥಿಗಳು, ಉಪನ್ಯಾಸಕರು, ಇತಿಹಾಸ ತಜ್ಞರು ಭಾರತಕ್ಕೆ ಆಗಮಿಸುತ್ತಾರೆ. ಅಂತೆಯೇ ವಿಶಿಷ್ಟ ಚಿತ್ರಕಲೆ ಹೊಂದಿರುವ ಪಟ್ಟಣದ ಹಿರಿಯ ಜನಪದ ಕಲಾವಿದ ಪರುಶುರಾಮಪ್ಪ ಚಿತ್ರಗಾರ ಮನೆಗೆ ಕ್ಯಾಲಿಪೋರ್ನಿಯಾದ ಯಾಲೆ ವಿವಿಯ ಇತಿಹಾಸ ಹಾಗೂ ಸಂಸ್ಕೃತಿ ವಿಭಾಗದ ವಿದ್ಯಾರ್ಥಿಗಳು, ಉಪನ್ಯಾಸಕರು ಭೇಟಿ ನೀಡಿ ವಿಜಯನಗರ ಪರಂಪರೆಯ ಕಿನ್ನಾಳ ಶೈಲಿಯ ಸಾಂಪ್ರದಾಯಿಕ ಚಿತ್ರಕಲೆ ವೀಕ್ಷಿಸಿ ಸೂಕ್ತ ಮಾಹಿತಿ ಪಡೆದರು.

ಕಂಪ್ಲಿಯ ಹಿರಿಯ ಜನಪದ ಕಲಾವಿದ ಪರುಶುರಾಮಪ್ಪ ಚಿತ್ರಗಾರ ಅವರು ಕಟ್ಟಿಗೆ, ಮಣ್ಣಿನಿಂದ ತಯಾರಿಸಿದ ರಥಗಳಿಗೆ ಅಲಂಕಾರಕ್ಕಾಗಿ ಬಳಸುವ ರಾಮಾಯಣ ಹಾಗೂ ಮಹಾಭಾರತದ ವಿಗ್ರಹಗಳು, ಬೀರಪ್ಪ ದೇವರು,  ಮದೇವತೆ, ಗರಡಿ ಕೃಷ್ಣಮೂರ್ತಿ, ಕೃಷ್ಣ, ಗಜಗೌರಿ, ಋಷಿಮುನಿ, ವಿವಿಧ ಅಲಂಕಾರಿಕ ಗೊಂಬೆಗಳು, ಕಾಮಧೇನು,ದ್ವಾರಪಾಲಕ, ಪ್ರಾಣಿಗಳ ಮುಖವಾಡ, ಸಿಂಹ, ಹುಲಿಯ ಮುಖವಾಡಗಳು, ಬಳ್ಳಾರಿಯ ಬಯಲಾಟದ ಕಿರೀಟಗಳು, ಹಸು,ಕುದುರೆ, ದೇವರ ಛತ್ರಿ, ಚಾಮರ, ಕುಂಚದಿಂದ ಬಿಡಿಸಲಾದ ವೈವಿದ್ಯಮಯ ಚಿತ್ರಗಳು ಸೇರಿದಂತೆ ಪಾರಂಪರಿಕ ಕಲಾತ್ಮಕ ವಸ್ತುಗಳನ್ನು ಕುತೂಹಲದಿಂದ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯಾಲೆ ವಿವಿಯ ಉಪನ್ಯಾಸಕ ಡಾ| ಕರೆನ್‌ಫೇಸ್‌, ಭಾರತದ ಗ್ರಾಮೀಣ
ಭಾಗದಲ್ಲಿರುವ ಸಂಪ್ರದಾಯಿಕ ಚಿತ್ರಕಲೆ, ಸಂಸ್ಕೃತಿ, ಪರಂಪರೆಗಳ ಆಳ ಅಧ್ಯಯನದ ಅಂಗವಾಗಿ ಪಟ್ಟಣದ
ಹಿರಿಯ ಜನಪದ ಕಲಾವಿದರಾದ ಪರುಶುರಾಮಪ್ಪ ಚಿತ್ರಗಾರ ಅವರ ಮನೆಗೆ ಭೇಟಿ ನೀಡಿದ್ದೇವೆ. ಅವರು
ಸಿದ್ಧಪಡಿಸಿದ ಜನಪದ ಶೈಲಿಯ ಮೂರ್ತಿ ಶಿಲ್ಪಗಳನ್ನು ನೋಡಿದಾಗ ಭಾರತದಲ್ಲಿ ಬಹುಮುಖೀ ಸಂಸ್ಕೃತಿ
ಇನ್ನು ಜೀವಂತವಾಗಿದೆ ಎಂದರು.

ಸಂಪದ್ಭರಿತವಾದ ನಮ್ಮ ಕ್ಯಾಲಿಪೋರ್ನಿಯಾ ಹಾಗೂ ಭಾರತದಲ್ಲಿ ಇಂದಿಗೂ ಜೀವಂತವಿರುವ ಅವಿಭಕ್ತ
ಕುಟುಂಬಗಳ ಏಕತೆ, ಸಮಗ್ರತೆ,ಅರ್ಥೈಸಿಕೊಳ್ಳುವಿಕೆ ಗುಣಗಳ ಜತೆಗೆ ಸಾಂಪ್ರದಾಯಿಕ ಆಚರಣೆಗಳು ಹಾಗೂ ಸಾಂಪ್ರದಾಯಿಕ ಪರಿಕಲ್ಪನೆ, ಸಂಸ್ಕೃತಿ ಪುನರ್‌ ಸ್ಥಾಪಿಸುವ ನಿಟ್ಟಿನಲ್ಲಿ ಇಲ್ಲಿನ ಕ್ಷೇತ್ರ ಕಾರ್ಯ ಸಹಕಾರಿಯಾಗಲಿದೆ ಎಂದು ತಿಳಿಸಿದರು.

Advertisement

ನಮ್ಮ ದೇಶ ಆರ್ಥಿಕವಾಗಿ ಸಬಲವಾಗಿದೆ. ಆದರೆ, ಬದುಕಲು ಬೇಕಾದ ಸಂಸ್ಕೃತಿ, ಸಂಪ್ರದಾಯದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಭಾರತದ ಗ್ರಾಮೀಣ ಚಿತ್ರಕಲೆ, ಚಿತ್ರಕಲಾವಿದರನ್ನು ಮತ್ತು ಅವರ ಕುಟುಂಬವನ್ನು ಕಂಡು ನಮಗೆ ಸಂತಸವಾಗಿದೆ. ಇಂಥ ಸಂಪ್ರದಾಯ ನಮ್ಮಲ್ಲಿ ಆರಂಭವಾಗಬೇಕು ಎನ್ನುವ ಉದ್ದೇಶ ನಮ್ಮದಾಗಿದೆ
ಎಂದು ವಿವಿಯ ಬಿಎ ವಿದ್ಯಾರ್ಥಿಗಳಾದ ಬ್ರೆಡನ್‌ ಕೌನ್‌, ಡೆನಿಚೋ,ಲೂರೆಲ್‌ ಆ್ಯಡಮ್ಸ್‌, ಮಿಚಿಲೆ
ಬೊನಿಲ್‌ ತಿಳಿಸಿದರು. 

ಕ್ಯಾಲಿಪೋರ್ನಿಯಾ ಯಾಲೆ ವಿವಿಯ ಕಲಾ ವಿಭಾಗದ ಉಪನ್ಯಾಸಕಿ ಮೇಘನಾ ಬಿಸಿನೀರು, ಬೆಂಗಳೂರು ಜನಸ್ತೋಮ ಸಂಘಟನೆಯ ಟಿ.ಬಿ.ದಿನೇಶ್‌, ಹಂಪಿ ಕನ್ನಡ ವಿವಿಯ ಚೆಲುವರಾಜು, ಉಪನ್ಯಾಸಕಿ ಕೆ.ನಾಗಪುಷ್ಪ ಲತಾ, ಗೋಪಿಕೃಷ್ಣ, ಚಿತ್ರಕಲಾವಿದ ಸುಮಿತ್ರಮ್ಮ, ಚಿತ್ರಕಲಾ ಶಿಕ್ಷಕ ರಾಮಚಂದ್ರಪ್ಪ ಚಿತ್ರಗಾರ, ರವಿ ಚಿತ್ರಗಾರ ಹಾಗೂ ಎಸ್‌.ಡಿ.ಬಸವರಾಜ ಇನ್ನಿತರರಿದ್ದರು.

ಭಾರತದ ಗ್ರಾಮೀಣ ಭಾಗದಲ್ಲಿರುವ ಸಂಪ್ರದಾಯಿಕ ಚಿತ್ರಕಲೆ, ಸಂಸ್ಕೃತಿ, ಪರಂಪರೆಗಳ ಆಳ ಅಧ್ಯಯನದ
ಅಂಗವಾಗಿ ಪಟ್ಟಣದ ಹಿರಿಯ ಜನಪದ ಕಲಾವಿದರಾದ ಪರುಶುರಾಮಪ್ಪ ಚಿತ್ರಗಾರ ಅವರ ಮನೆಗೆ ಭೇಟಿ ನೀಡಿದ್ದೇವೆ. ಅವರು ಸಿದ್ಧಪಡಿಸಿದ ಜನಪದ ಶೈಲಿಯ ಮೂರ್ತಿ ಶಿಲ್ಪಗಳನ್ನು ನೋಡಿದಾಗ ಭಾರತದಲ್ಲಿ ಬಹುಮುಖೀ ಸಂಸ್ಕೃತಿ ಇನ್ನು ಜೀವಂತವಾಗಿದೆ.

ಡಾ| ಕರೆನ್‌ಫೇಸ್‌, ಉಪನ್ಯಾಸಕ,ಯಾಲೆ ವಿವಿ, ಕ್ಯಾಲಿಪೋರ್ನಿಯಾ 

Advertisement

Udayavani is now on Telegram. Click here to join our channel and stay updated with the latest news.

Next